CORBEVAX Vaccine: ಕೊರೊನಾ ವೈರಸ್ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಇಂದು ಕೇಂದ್ರ ಸರ್ಕಾರ ಕಾರ್ಬೆವ್ಯಾಕ್ಸ್ ಲಸಿಕೆಯನ್ನು ಬೂಸ್ಟರ್ ಡೋಸ್ ರೂಪದಲ್ಲಿ ನೀಡಲು ಅನುಮೋದನೆ ನೀಡಿದೆ. 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿ ಈ ಲಸಿಕೆಯನ್ನು ನೀಡಬಹುದಾಗಿದೆ. ಕೊವಿಶಿಲ್ದ್ ಅಥವಾ ಕೊವ್ಯಾಕ್ಸಿನ್ ಗಳನ್ನು ತಮ್ಮ ಮೊದಲೆರಡು ಪ್ರಮಾಣಗಳಾಗಿ ಪಡೆದ ಜನರು ಕಾರ್ಬೆವ್ಯಾಕ್ಸ್ ಅನ್ನು ಬೂಸ್ಟರ್ ಡೋಸ್ ರೂಪದಲ್ಲಿ ಪಡೆದುಕೊಳ್ಳಬಹುದು. 
 


COMMERCIAL BREAK
SCROLL TO CONTINUE READING

ಆಗಸ್ಟ್ 12, 2022 ರಿಂದ ಈ ವ್ಯಾಕ್ಸಿನ್ ಸಾರ್ವಜನಿಕ ಹಾಗೂ ಖಾಸಗಿ ಕೇಂದ್ರಗಳಲ್ಲಿ ವಿತರಣೆಗೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಮೂಲಗಳು ಮಾಹಿತಿ ನೀಡಿವೆ. ಕೊವಿನ್ ಆಪ್ ಮೂಲಕವೂ ಕೂಡ ನೀವು ಈ ವ್ಯಾಕ್ಸಿನ್ ಅನ್ನು ಬುಕ್ ಮಾಡಬಹುದು. ಕಾರ್ಬೇವ್ಯಾಕ್ಸ್ ಭಾರತದ ಮೊಟ್ಟಮೊದಲ ಆರ್.ಬಿ.ಡಿ ಪ್ರೋಟೀನ್ ಸಬ್ ಯೂನಿಟ್ ವ್ಯಾಕ್ಸಿನ್ ಆಗಿದೆ. ಪ್ರಸ್ತುತ ಈ ವ್ಯಾಕ್ಸಿನ್ ಅನ್ನು 12 ರಿಂದ 14 ವರ್ಷದ ಮಕ್ಕಳಿಗೆ ನೀಡಲಾಗುತ್ತಿದೆ.

ಯಾರಿಗೆ ಕಾರ್ಬೇವ್ಯಾಕ್ಸ್ ಬೂಸ್ಟರ್ ಡೋಸ್ ನೀಡಲಾಗುವುದು
ವಯಸ್ಕರರಿಗೆ ಕಾರ್ಬೆವ್ಯಾಕ್ಸ್ ಲಸಿಕೆಯನ್ನು ನೀಡುವುದರ ಕುರಿತು ಘೋಷಣೆ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಕೊವಿಶೀಲ್ದ್ ಅಥವಾ ಕೊವ್ಯಾಕ್ಸಿನ್ ಲಸಿಕೆಯ ಎರಡೂ ಪ್ರಮಾಣಗಳನ್ನು ನೀಡಿ ಆರು ತಿಂಗಳು ಅಥವಾ 26 ವಾರ ಗತಿಸಿದವರಿಗೆ ಈ ಲಸಿಕೆಯನ್ನು ಬೂಸ್ಟರ್ ಡೋಸ್ ರೂಪದಲ್ಲಿ ನೀಡಲಾಗುವುದು ಎಂದು ಹೇಳಿದ್ದಾರೆ. ಮೊದಲ ಬಾರಿಗೆ ಯಾವುದೇ ಒಂದು ಲಸಿಕೆಯ ಎರಡೂ ಪ್ರಮಾಣಗಳನ್ನು ನೀಡಿದವರಿಗೆ ಬೂಸ್ಟರ್ ಡೋಸ್ ರೂಪದಲ್ಲಿ ಬೇರೊಂದು ವ್ಯಾಕ್ಸಿನ್ ನೀಡಲಾಗುತ್ತಿರುವುದು ಇದೇ ಮೊದಲು.


ಈ ವ್ಯಾಕ್ಸಿನ್ ಪಡೆಯಲು ರೂ.400 ಪಾವತಿಸಬೇಕು
ಖಾಸಗಿ ಕೇಂದ್ರಗಳಲ್ಲಿ ಈ ವ್ಯಾಕ್ಸಿನ್ ಬೆಲೆ ರೂ. 250 ಆಗಿರಲಿದ್ದು, ಇತರ ಶುಲ್ಕಗಳನ್ನು ಸೇರಿ ವ್ಯಾಕ್ಸಿನ್ ಪಡೆಯುವವರು ಗರಿಷ್ಠ ಅಂದರೆ, 400 ರೂ. ಪಾವತಿಸಬೇಕಾಗಲಿದೆ.


ಇದನ್ನೂ ಓದಿ-Hair Care Tips: ಚಹಾಲ್ ಪತ್ನಿ ಧನಶ್ರೀ ಸುಂದರ ಕೂದಲಿನ ರಹಸ್ಯ ಇದೇ ನೋಡಿ

ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ 6 ತಿಂಗಳುಗಳ ಬಳಿಕ ಕಾರ್ಬೆವ್ಯಾಕ್ಸ್ ಲಸಿಕೆಗೆ ಅನುಮೋದನೆಯನ್ನು ನೀಡಿದೆ ಎಂಬುದು ಇಲ್ಲಿ ಉಲ್ಲೇಖನೀಯ. 


ಇದನ್ನೂ ಓದಿ-ದೇಹದಲ್ಲಿ ಪ್ರೋಟಿನ್ ಕೊರತೆಯಾದರೆ ಕಾಣಿಸಿಕೊಳ್ಳುವುದು ಈ 10 ಸಮಸ್ಯೆಗಳು

ಕಳೆದ ತಿಂಗಳು, ಲಸಿಕಾಕರಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ ಹೆಟೆರೋಲೋಗಸ್ ಬೂಸ್ಟರ್ ರೂಪದಲ್ಲಿ ಬಯಾಲಾಜಿಕಲ್ ಇ ಕಂಪನಿಯ ಕಾರ್ಬೆವಾಕ್ಸ್ ಅನ್ನು ಪರಿಚಯಿಸಲು ಶಿಫಾರಸು ಮಾಡಿತ್ತು ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.