Coronavirus updates: ಪೋಷಕರೇ ಎಚ್ಚರ.. ಮಕ್ಕಳೇ ಈ ಬಾರಿ ಕೊರೊನಾ ಟಾರ್ಗೆಟ್? ಆರೋಗ್ಯ ಇಲಾಖೆಯಿಂದ ಮಹತ್ವದ ಅಪ್ಡೇಟ್!!
Coronavirus New Cases In India: ಕೆಲವು ತಿಂಗಳ ಬಳಿಕ ಈಗ ದೇಶದಲ್ಲಿ ಮತ್ತೊಮ್ಮೆ ಕೊರೊನಾ ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿವೆ. ಈ ಬಾರಿ ಕೊರೊನಾ ಸಣ್ಣ ಮಕ್ಕಳನ್ನು ಬಲಿಪಶು ಮಾಡುತ್ತಿರುವುದು ಆತಂಕಕಾರಿ ಸಂಗತಿ. ದೆಹಲಿ ಸಮೀಪದ ದೊಡ್ಡ ನಗರದ ಶಾಲಾ ಹಾಸ್ಟೆಲ್‌ನಲ್ಲಿ 17 ಮಕ್ಕಳಿಗೆ ಕೋವಿಡ್ ಸೋಂಕು ತಗುಲಿರುವುದು ಪತ್ತೆಯಾಗಿದೆ.
Coronavirus India Update: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಮತ್ತೊಮ್ಮೆ ಭಯ ಹುಟ್ಟಿಸುತ್ತಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 15 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಮೃತಪಟ್ಟವರಲ್ಲಿ 3 ಜನರು ದೆಹಲಿಯವರು. ದೆಹಲಿ-ಎನ್‌ಸಿಆರ್‌ನಲ್ಲಿ ಕೊರೊನಾ ಸೋಂಕಿನ ಪ್ರಮಾಣ 26 ಪ್ರತಿಶತ ದಾಟಿದೆ. ಅಂದರೆ, ಪರೀಕ್ಷೆಯನ್ನು ಮಾಡಿದ ಪ್ರತಿ 100 ಜನರಲ್ಲಿ 26 ಜನರು ಕೋವಿಡ್ ಪಾಸಿಟಿವ್ ಆಗಿದ್ದಾರೆ.
ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ, ದೇಶದಲ್ಲಿ 5,676 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸಾಂಕ್ರಾಮಿಕ ರೋಗದಿಂದಾಗಿ 15 ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಕೇರಳದ 6 ಮತ್ತು ದೆಹಲಿಯ 3 ರೋಗಿಗಳು ಸೇರಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೊನಾ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 37 ಸಾವಿರ ದಾಟಿದೆ.
ಇದನ್ನೂ ಓದಿ : Karnataka Assembly Election 2023: ಬಿಜೆಪಿಯ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಹಾಸ್ಟೆಲ್‌ನಲ್ಲಿ ಕೊರೊನಾ ಸ್ಫೋಟ
ದೆಹಲಿಯ ಪಕ್ಕದಲ್ಲಿರುವ ಗೌತಮ್ ಬುದ್ಧ ನಗರದಲ್ಲಿ ಕೊರೊನಾ ಸಾಂಕ್ರಾಮಿಕ ಸ್ಫೋಟಗೊಂಡಿದೆ. ಜಿಲ್ಲೆಯ ಸೂರಜ್‌ಪುರ ಪಟ್ಟಣದಲ್ಲಿ ಕಳೆದ ಒಂದು ವಾರದಲ್ಲಿ ಸುಮಾರು 35 ಮಂದಿಗೆ ಸೋಂಕು ತಗುಲಿದೆ. ಮತ್ತೊಂದೆಡೆ, ಮಂಗಳವಾರ ಕಸ್ತೂರಬಾ ಗಾಂಧಿ ವಸತಿ ನಿಲಯದಲ್ಲಿ ನಡೆಸಿದ ಪರೀಕ್ಷೆಯಲ್ಲಿ 17 ಮಕ್ಕಳಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ವಾಸ್ತವವಾಗಿ, ಹಾಸ್ಟೆಲ್‌ನ 10 ಮಕ್ಕಳು ಕೆಮ್ಮು ಮತ್ತು ನೆಗಡಿಯಿಂದ ಬಳಲುತ್ತಿದ್ದರು, ಇದಕ್ಕಾಗಿ ಶಾಲೆಯು ಅವರನ್ನು ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಿತು ಮತ್ತು 10 ಮಕ್ಕಳಲ್ಲಿ 8 ಜನ ಕೊರೊನಾ ಪಾಸಿಟಿವ್ ಆಗಿದ್ದರು.
ಈ ಘಟನೆಯ ನಂತರ, ಜಿಲ್ಲಾ ಆಸ್ಪತ್ರೆಯ ತಂಡವು ಹಾಸ್ಟೆಲ್‌ನಲ್ಲಿ ಶಿಬಿರವನ್ನು ನಡೆಸಿತು ಮತ್ತು ಎಲ್ಲಾ ಮಕ್ಕಳನ್ನು ಪರೀಕ್ಷಿಸಿತು ಮತ್ತು ಒಟ್ಟು 17 ಮಕ್ಕಳಲ್ಲಿ ಕೊರೊನಾ ವೈರಸ್ ಲಕ್ಷಣಗಳು ಕಂಡುಬಂದಿವೆ. ಎಲ್ಲಾ ಮಕ್ಕಳನ್ನು ಹಾಸ್ಟೆಲ್‌ನಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ಅಲ್ಲಿ ಹಾಸ್ಟೆಲ್ ಮ್ಯಾನೇಜ್ ಮೆಂಟ್ ಅವರನ್ನು ನೋಡಿಕೊಳ್ಳುತ್ತಿದೆ. ಎಲ್ಲ ಮಕ್ಕಳ ಸ್ಥಿತಿ ಸಹಜವಾಗಿದೆ ಎನ್ನಲಾಗಿದೆ. ಹಾಸ್ಟೆಲ್‌ನಲ್ಲಿ ಕೊರೊನಾ ಹರಡಿದ್ದರಿಂದ ಮಕ್ಕಳ ಕುಟುಂಬ ಸದಸ್ಯರಲ್ಲಿ ಭೀತಿ ಆವರಿಸಿದೆ. ಅದೇ ಸಮಯದಲ್ಲಿ, ಜಿಲ್ಲಾ ಆಡಳಿತ ಮತ್ತು ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದ್ದು, ಜಿಲ್ಲೆಯಲ್ಲಿ ಪರೀಕ್ಷೆಯನ್ನು ಹೆಚ್ಚಿಸಲು ಹೇಳಲಾಗುತ್ತಿದೆ.
ಇದನ್ನೂ ಓದಿ : ಸೋರಿಕೆಯಾದ ರಹಸ್ಯ ದಾಖಲೆಗಳು: ಅಮೆರಿಕಾದಲ್ಲಿ ಮಹಾನ್ ಗುಪ್ತಚರ ಉಲ್ಲಂಘನೆ?
ಈ ರಾಜ್ಯದಲ್ಲಿಯೂ 18 ಮಕ್ಕಳಿಗೆ ಕೊರೊನಾ :
ಮತ್ತೊಂದೆಡೆ, ಮಹಾರಾಷ್ಟ್ರದ ಬಿಜಾಪುರದಲ್ಲಿ ಕೂಡ ಕೊರೊನಾ ಹಾವಳಿ ಹೆಚ್ಚಾಗಿದೆ. 18 ಮಕ್ಕಳಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಮಕ್ಕಳಲ್ಲಿ ಕೊರೊನಾ ಪರೀಕ್ಷೆ ನಡೆಸಿದಾಗ ಅವರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಇದಾದ ಬಳಿಕ ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಜಿಲ್ಲಾಡಳಿತದಿಂದ ಎಲ್ಲ ಮಕ್ಕಳ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.