ನವದೆಹಲಿ:ಇಡೀ ದೇಶ ಪ್ರಸ್ತುತ ಕರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೆ. ಏತನ್ಮಧ್ಯೆ, ಆರೋಗ್ಯ ಸಚಿವಾಲಯವು ಸ್ಯಾನಿಟೈಜರ್ ಬಗ್ಗೆ ಎಚ್ಚರಿಕೆ ನೀಡಿದೆ. ಹ್ಯಾಂಡ್ ಸ್ಯಾನಿಟೈಜರ್ ಅನ್ನು ಹೆಚ್ಚು ಬಳಸಬೇಡಿ ಎಂದು ಆರೋಗ್ಯ ಸಚಿವಾಲಯವು ಜನರಿಗೆ ಸಲಹೆ ನೀಡಿದೆ, ಹೆಚ್ಚು ಬಳಕೆಯು ಹಾನಿಕಾರಕವಾಗಿದೆ. ಕಳೆದ ಆರು ತಿಂಗಳಿಂದ ನಮ್ಮ ಜೀವನದಲ್ಲಿ ಸ್ಯಾನಿಟೈಜರ್ ಬಳಕೆ ಹೆಚ್ಚಾಗಿರುವುದು ಅಧ್ಯಯನಗಳಲ್ಲಿ ಕಂಡುಬಂದಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಹೇಳಿಕೆ ನೀಡಿರುವ ಆರೋಗ್ಯ ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕರು, ಇದೊಂದು ಕಠಿಣ ಸಮಯವಾಗಿದೆ. ವೈರಸ್ ಪ್ರಕೋಪ ಈ ರೀತಿ ಪಸರಿಸಲಿದೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಮಾಸ್ಕ್ ಗಳ ಬಳಕೆ ಮಾಡಿ. ಬಿಸಿ ನೀರು ಸೇವಿಸಿ ಹಾಗೂ ಕೈಗಳನ್ನು ಶುಚಿಗೊಳಿಸಿ. ಆದರೆ, ಸ್ಯಾನಿಟೈಸರ್ ನ ದುರುಪಯೋಗ ಮಾಡಬೇಡಿ ಎಂದು ಹೇಳಿದ್ದಾರೆ. 


ಸ್ಯಾನಿಟೈಸರ್ ನ ಅತಿಯಾದ ಬಳಕೆ ತ್ವಚೆಯನ್ನು ಸ್ವಚ್ಛವಾಗಿಡುವ ಬ್ಯಾಕ್ಟೀರಿಯಾಗಳ ನಾಶಕ್ಕೆ ಕಾರಣವಾಗುತ್ತದೆ
ಈ ಕುರಿತು ಈ ಮೊದಲೇ ಎಚ್ಚರಿಕೆ ನೀಡಿರುವ ಆರೋಗ್ಯ ತಜ್ಞರು ಸ್ಯಾನಿಟೈಸರ್ ನ ಅತಿಯಾದ ಬಳಕೆ ತ್ವಚೆಯನ್ನು ಆರೋಗ್ಯಪೂರ್ಣವಾಗಿ ಇದುವ ಬ್ಯಾಕ್ಟೀರಿಯಾಗಳ ನಾಶಕ್ಕೆ ಕಾರಣವಾಗುತ್ತದೆ ಎಂದು ಎದ್ಧರಿಕೆ ನೀಡಿದ್ದಾರೆ. ತಜ್ಞರು ಹೇಳುವ ಪ್ರಕಾರ, ಸಾಬೂನು ಹಾಗೂ ನೀರಿದ್ದರೆ, ಸ್ಯಾನಿಟೈಸರ್ ಬದಲಿಗೆ ಅವುಗಳನ್ನು ಬಳಸಿ ಎಂದು ಸಲಹೆ ನೀಡಿದ್ದಾರೆ.


ದೇಶಾದ್ಯಂತ ಇದುವರೆಗೆ 13 ಲಕ್ಷ 36 ಸಾವಿರ 861 ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ
ಈ ಕುರಿತು ತನ್ನ ಅಂಕಿ-ಅಂಶಗಳನ್ನು ಪ್ರಕಟಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, ಶನಿವಾರವರೆಗೆ 13 ಲಕ್ಷ 36 ಸಾವಿರ 861 ಕೋರೋನಾ ಸೋಂಕಿತ ಪ್ರಕರಣಗಳಿವೆ. ಇದುವರೆಗೆ ಸುಮಾರು 31,358 ಮೃತಪಟ್ಟಿದ್ದು, 8 ಲಕ್ಷ 49 ಸಾವಿರ ಜನರು ಚೇತರಿಸಿಕೊಂಡು ತಮ್ಮ ತಮ್ಮ ಮನೆಗಳಿಗೆ ಮರಳಿದ್ದಾರೆ. 4 ಲಕ್ಷ 56 ಸಾವಿರ ಜನರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ ನ 48,916  ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ ಹಾಗೂ 757 ಜನರು ಮೃತಪಟ್ಟಿದ್ದಾರೆ.