Coronavirus Prevention: ಕರೋನಾವೈರಸ್ ಪ್ರಕರಣಗಳು ದೇಶಾದ್ಯಂತ ವೇಗವಾಗಿ ಹೆಚ್ಚುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಜನರು ಈ ಅಪಾಯಕಾರಿ ವೈರಸ್‌ನಿಂದ ಸೋಂಕಿಗೆ ಒಳಗಾಗದಂತೆ ಇರಲು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಾಲದು. ಕರೋನಾದ  ಈ ಅಪಾಯಕಾರಿ ಹಂತದಲ್ಲಿ, ಕೇವಲ ಒಂದು ಮಾಸ್ಕ್ ಮಾತ್ರ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಕೆಲವರು ನಂಬುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸಹ ಡಬಲ್ ಮಾಸ್ಕ್ ಬಗ್ಗೆ ಗೊಂದಲಕ್ಕೊಳಗಾಗಿದ್ದೀರಾ? ಅದರ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.


COMMERCIAL BREAK
SCROLL TO CONTINUE READING

ಮುಂಬೈನ ಫೋರ್ಟಿಸ್ ಆಸ್ಪತ್ರೆಯ ಕಲ್ಯಾಣ್‌ನ ಸಾಂಕ್ರಾಮಿಕ ರೋಗ ತಜ್ಞ ಡಾ.ಕೀರ್ತಿ ಸಬ್ನಿಸ್ ಅವರ ಪ್ರಕಾರ, ಡಬಲ್ ಮಾಸ್ಕಿಂಗ್ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ವೈರಸ್ ಹರಡುವುದನ್ನು ತಡೆಯುತ್ತದೆ. "ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳಲ್ಲಿ (ಸಿಡಿಸಿ) ಇತ್ತೀಚಿನ ಅಧ್ಯಯನವು ಜನರು ಡಬಲ್ ಮಾಸ್ಕ್ (Double Mask) ಬಳಸಿದರೆ, ಅದು ಕರೋನದ ಅಪಾಯವನ್ನು ಶೇಕಡಾ 96.4 ರಷ್ಟು ಕಡಿಮೆ ಮಾಡುತ್ತದೆ ಎಂದು ವರದಿ ಮಾಡಿದೆ.


ಇದನ್ನೂ ಓದಿ- Mask: ಮೈಕ್, ಸ್ಪೀಕರ್ ಹೊಂದಿರುವ ಮಾಸ್ಕ್ ವಿನ್ಯಾಸಗೊಳಿಸಿದ ಪ್ರಥಮ ವರ್ಷದ ಬಿ ಟೆಕ್ ವಿದ್ಯಾರ್ಥಿ


ಡಬಲ್ ಮಾಸ್ಕಿಂಗ್ ಎಂದರೇನು?
ಒಬ್ಬ ವ್ಯಕ್ತಿಯು ಒಂದು ಮಾಸ್ಕ್ (Mask) ಮೇಲೆ ಇನ್ನೊಂದು ಮಾಸ್ಕ್ ಧರಿಸಿದಾಗ, ಅದನ್ನು ‘ಡಬಲ್ ಮಾಸ್ಕಿಂಗ್’ ಎಂದು ಕರೆಯಲಾಗುತ್ತದೆ. ಕರೋನಾವೈರಸ್ ಉಸಿರಾಟದ ಮೂಲಕ / ಗಾಳಿಯ ಮೂಲಕ ಹರಡುತ್ತವೆ ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದ, ಎರಡು ಪದರಗಳು ಶೋಧನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮ ಸುತ್ತಲಿರುವ ಯಾರಾದರೂ ಸೀನುವಾಗಲೂ ಅಥವಾ ಕೆಮ್ಮಿದರೂ ಕೂಡ ಡಬಲ್ ಮಾಸ್ಕಿಂಗ್ ನಿಮಗೆ ರಕ್ಷಣೆ ನೀಡುತ್ತದೆ.


ಡಬಲ್ ಮಾಸ್ಕ್ ಅನ್ನು ಯಾವಾಗ ಧರಿಸಬೇಕು?
ವಿಮಾನ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಂತಹ ಜನದಟ್ಟಣೆಯ ಸ್ಥಳಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸುವಾಗ ಡಬಲ್ ಮಾಸ್ಕ್ಗಳನ್ನು ಬಳಸಬೇಕು.


ಇದನ್ನೂ ಓದಿ- Corona: ಮೂರು ರಾಜ್ಯಗಳಲ್ಲಿ ಮಕ್ಕಳಲ್ಲಿ ಹೆಚ್ಚಾದ ಕರೋನಾ ಸೋಂಕು, ಇದರ ಲಕ್ಷಣಗಳೇನು?


ಡಬಲ್ ಮಾಸ್ಕ್ ಧರಿಸಲು ಸರಿಯಾದ ಮಾರ್ಗ ಯಾವುದು?
ಸರ್ಜರಿ ಮಾಸ್ಕ್ ಮೇಲೆ ಬಟ್ಟೆ ಮುಖವಾಡ ಅಥವಾ ಎರಡು ಬಟ್ಟೆ ಮಾಸ್ಕ್ ಗಳನ್ನು ಧರಿಸುವುದು ಒಂದು ಪರಿಪೂರ್ಣ ಮಾರ್ಗವಾಗಿದೆ. ಇದರ ಜೊತೆಗೆ, ಮೇಲೆ ಬಟ್ಟೆ ಮಾಸ್ಕ್ ಮತ್ತು ಒಳಗೆ 3 ಪ್ಲೈ ಮಾಸ್ಕ್ ಧರಿಸುವುದು ಸಹ ಉತ್ತಮ ಪರಿಹಾರವಾಗಿದೆ. ಆದರೆ ನೀವು ಎನ್ 95 ಮಾಸ್ಕ್ ಧರಿಸಿದ್ದರೆ ಡಬಲ್ ಮಾಸ್ಕ್ ಧರಿಸಬೇಡಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.