ನವದೆಹಲಿ:ಕೊರೊನಾ ವೈರಸ್ ನ ಟೆಸ್ಟಿಂಗ್ ಕುರಿತು ವಿಶ್ವಾದ್ಯಂತ ಹೊಸ-ಹೊಸ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಇದುವರೆಗೆ ಈ ಕಾಯಿಲೆಯ ಟೆಸ್ಟ್ ಕಿಟ್ ಕೊರುತಿ ಸಾಕಷ್ಟು ಓಹಾಪೊ೯ಹಗಳು ಕೇಳಿಬಂದಿವೆ. ಆದರೆ, ಭಾರತದಲ್ಲಿ ಕೆಲ ಲ್ಯಾಬೋರೇಟರಿಗಳಲ್ಲಿ ಈ ಕಾಯಿಲೆಯ ಟೆಸ್ಟ್ ಕಿಟ್  ಸಿದ್ಧಪಡಿಸಲು ಅನುಮತಿ ನೀಡಲಾಗಿದೆ. ಆದರೆ,ಸದ್ಯದ ವ್ಯವಸ್ಥೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣದ ಪತ್ತೆ ಹಚ್ಚಲು 24ಗಂಟೆಗೂ ಅಧಿಕ ಕಾಲಾವಕಾಶ ಬೇಕಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರೋಗಿಯ ಸ್ಥಿತಿ ಇನ್ನಷ್ಟು ಗಂಭೀರವಾಗುತ್ತದೆ.


COMMERCIAL BREAK
SCROLL TO CONTINUE READING

ಆದರೆ, ಸದ್ಯ ನಾವು ನಿಮಗಾಗಿ ಒಂದು ನೆಮ್ಮದಿಯ ಸುದ್ದಿಯೊಂದನ್ನು ನೀಡುತ್ತಿದ್ದೇವೆ. ಈ ವೈರಸ್ ನ ಪತ್ತೆಗಾಗಿ ಟೆಸ್ಟ್ ಕಿಟ್ ಸಿದ್ಧಪಡಿಸಲಾಗಿದ್ದು, ಅದರ ಟ್ರಯಲ್ ಕೂಡ ಆರಂಭಗೊಂಡಿದೆ. ಈ ಟೆಸ್ಟ್ ಕಿಟ್ ಬಳಸಿ ನೀವು ಕೇವಲ 10 ನಿಮಿಷದಲ್ಲಿ ಕೊರೊನಾ ವೈರಸ್ ಅನ್ನು ಪತ್ತೆ ಹಚ್ಚಬಹುದಾಗಿದ್ದು, ಇದಕ್ಕಾಗಿ ಕೇವಲ ರೂ.74 ಅಂದರೆ $1 ಖರ್ಚಾಗಲಿದೆ ಎನ್ನಲಾಗಿದೆ. ಬ್ರಿಟನ್ ನ ಮೊಲೋಜಿಕ್ ಲಿಮಿಟೆಡ್ ಸಂಸ್ಥೆ ಈ ಕಿಟ್ ಅನ್ನು ಸಿದ್ಧಪಡಿಸಿದೆ.


ಬ್ಲೂ ಬರ್ಗ್ ನೀಡಿರುವ ವರದಿಯೊಂದರ ಪ್ರಕಾರ, ಈ ಟೆಸ್ಟಿಂಗ್ ಕಿಟ್ ಅನ್ನು ಕೇವಲ ಮೂರು ತಿಂಗಳ ಅವಧಿಯಲ್ಲಿ ಮಾತ್ರ ಸಿದ್ಧಪಡಿಸಲಾಗುವುದು ಎನ್ನಲಾಗಿದೆ. ಸದ್ಯ ವಿಶ್ವಾದ್ಯಂತದ ಕೊರೊನಾ ಪೀಡಿತ 54 ದೇಶಗಳ ಪೈಕಿ ಒಟ್ಟು 36 ದೇಶಗಳ ಬಳಿ ಕೊರೊನಾ ಟೆಸ್ಟ್ ಕಿಟ್ ಗಳಿವೆ


ಭಾರತ ಸ್ವದೇಶಿ ಮಟ್ಟದಲ್ಲಿ ಒಟ್ಟು ಎರಡು ಕಂಪನಿಗಳಿಗೆ ಈ ಕಿಟ್ ಗಳನ್ನೂ ತಯಾರಿಸಲು ಅನುಮತಿ ನೀಡಿದ್ದು, ಶೀಘ್ರವೇ ದೇಶಾದ್ಯಂತದ ಪ್ಯಾಥಾಲಾಜಿ ಲ್ಯಾಬ್ ಗಳಲ್ಲಿ ಈ ಕಿಟ್ ಗಳು ಲಭ್ಯವಿರಲಿವೆ ಎನ್ನಲಾಗಿದೆ. ರೋಗಗಳ ಪತ್ತೆ ಹಚ್ಚುವ ಉಪಕರಣಗಳನ್ನು ತಯಾರಿಸುವ ಪೂಣೆ ಮೂಲದ ಮೈಲ್ಯಾಬ್ ಡಿಸ್ಕವರಿ ಸೊಲ್ಯುಶನ್ಸ್ ಗೆ covid-19 ಟೆಸ್ಟ್ ಕಿಟ್ ನ ಕಮರ್ಷಿಯಲ್ ತಯಾರಿಕೆಗೆ ICMR ಒಪ್ಪಿಗೆ ಸೂಚಿಸಿದೆ. ಈ ರೀತಿಯ ಒಪ್ಪಿಗೆ ಪಡೆದ ದೇಶದ ಇದು ಮೊದಲ ಕಂಪನಿಯಾಗಿದೆ. ಈ ಕಂಪನಿಯ ಜೊತೆಗೆ  Altona Diagnostics ಗೂ ಕೂಡ ಕೊರೊನಾ ಟೆಸ್ಟಿಂಗ್ ಕಿಟ್ ತಯಾರಿಸಲು ಅನುಮತಿ ನೀಡಲಾಗಿದೆ.


ಈ ಕುರಿತು ಹೇಳಿಕೆ ಪ್ರಕಟಿಸಿರುವ ಮೈಲ್ಯಾಬ್ ಕೊರೊನಾ ವೈರಸ್ ಪತ್ತೆ ಹಚ್ಚುವ "ಮೈಲ್ಯಾಬ್ ಪ್ಯಾಥೋಡಿಟೆಕ್ಟ ಕೊವಿಡ್-19 ಕ್ವಾಲಿಟೆತಟಿವ್ PCR ಕಿಟ್'ನ ವಾಣಿಜ್ಯಾತ್ಮಕ ಉತ್ಪಾದನೆಗೆ ಕೇಂದ್ರೀಯ ಔಷಧಿ ಮಾನದಂಡಗಳ ನಿಯಂತ್ರಣ ಸಂಘಟನೆ (CDSCO) ಅನುಮತಿ ದೊರೆತಿದೆ ಎಂದು ಹೇಳಿದೆ.


ಈ ಕುರಿತು ಹೇಳಿಕೆ ನೀಡಿರುವ ಕಂಪನಿಯ ಮಹಾ ನಿರ್ದೇಶಕ ಹಸ್ಮುಖ್ ರಾವಲ್, "ಸ್ಥಳೀಯ ಹಾಗೂ ಕೇಂದ್ರ ಸರ್ಕಾರದಿಂದ ದೊರೆತ ಸಹಕಾರ ಹಾಗೂ ಮೇಕ್ ಇನ್ ಇಂಡಿಯಾ ಮೇಲೆ ಒತ್ತು ನೀಡಿ ತಮ್ಮ ಕಂಪನಿ ಕೊವಿಡ್-19 ಪರೀಕ್ಷೆಗೆ ಟೆಸ್ಟ್ ಕಿಟ್ ತಯಾರಿಸಿದೆ" ಎಂದು ಹೇಳಿದ್ದಾರೆ. 


ಭಾರತದಲ್ಲಿ ಇದುವರೆಗೆ ಕೊರೊನಾ ವೈರಸ್ ಸೋಂಕಿನ ಒಟ್ಟು 873 ಪ್ರಕರಣಗಳು ಪತ್ತೆಯಾಗಿವೆ . ಇವರಲ್ಲಿ ಇದುವರೆಗೆ 775 ವ್ಯಕ್ತಿಗಳು ಇನ್ನೂ ಕೂಡ Covid-19 ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಈ ಕುರಿತು ಮಾಹಿತಿ ನೀಡಿದೆ.