Almond Health Benefits :ಯಾವುದೇ ಆಹಾರವಿರಲಿ ಅದನ್ನು ಸರಿಯಾದ ಕ್ರಮದಲ್ಲಿ ಸೇವಿಸಿದರೆ ಮಾತ್ರ ಅದರ ಲಾಭ ನಮ್ಮ ದೇಹಕ್ಕೆ ಸಿಗುವುದು.ನಾವು ಸೇವಿಸುವ ಪ್ರತಿಯೊಂದು ಆಹಾರ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಆ ಆಹಾವನ್ನು ಯಾವ ಹೊತ್ತಿನಲ್ಲಿ ಸೇವಿಸಬೇಕು? ಹೇಗೆ ಸೇವಿಸಬೇಕು ಎನ್ನುವ ಮಾಹಿತಿ ಇರದೆ ದೇಹಕ್ಕೆ ಸಿಗಬೇಕಾದ ಪೋಷಕ ತತ್ವಗಳು ದೇಹಕ್ಕೆ ಸಿಗುವುದಿಲ್ಲ. ಇನ್ನು ಆರೋಗ್ಯದ ಗಣಿ ಎಂದೆನಿಸಿಕೊಂಡಿರುವ ಬಾದಾಮಿ ಕೂಡಾ ಹಾಗೆ. ಸರಿಯಾದ ಸಮಯದಲ್ಲಿ ಸರಿಯಾದ ವಿಧಾನದಲ್ಲಿ ಇದನ್ನು ಸೇವಿಸಿದರೆ ಮಾತ್ರ ಇದು ಆರೋಗ್ಯ ಸಂಜೀವಿನಿ. ಇಲ್ಲವಾದಲ್ಲಿ ಅಡ್ಡ ಪರಿಣಾಮಗಳನ್ನೂ ಬೀರಬಹುದು.  


COMMERCIAL BREAK
SCROLL TO CONTINUE READING

ಬಾದಾಮಿ ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುವ ಒಣಹಣ್ಣು.ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ.ಇವುಗಳನ್ನು ಸೇವಿಸುವುದರಿಂದ ಮೆದುಳು ಕೂಡಾ ಚುರುಕಾಗುತ್ತದೆ.ಈ ಕಾರಣದಿಂದಲೇ ಚಿಕ್ಕ ಮಕ್ಕಳಿಗೆ ಬಾದಾಮಿ ತಿನ್ನಿಸುವಂತೆ ಹೇಳಲಾಗುತ್ತದೆ.ಆದರೆ,ಇದನ್ನು ತಪ್ಪಾದ ರೀತಿಯಲ್ಲಿ ಸೇವಿಸಿದರೆ ಕ್ಯಾನ್ಸರ್ ಕೂಡಾ ಕಾಡುವ ಅಪಾಯವಿರುತ್ತದೆ. ದೇಹಕ್ಕೆ ಹಾನಿಕಾರಕವಾದ ಕೆಲವು ಕಾರ್ಸಿನೋಜೆನಿಕ್ ಅಂಶಗಳನ್ನು ಬಾದಾಮಿ ಒಳಗೊಂಡಿದೆ. ಆದ್ದರಿಂದ, ಅವುಗಳನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ತಿನ್ನುವುದು ಮುಖ್ಯ. 


ಇದನ್ನೂ ಓದಿ : ಬೆಳಗ್ಗೆ ಎದ್ದಂತೆ ಈ ಒಣಹಣ್ಣನ್ನು ತಿನ್ನಿ: ಕೇವಲ 5 ದಿನದಲ್ಲಿ ಸೊಂಟದ ಸುತ್ತ ಸಂಗ್ರಹವಾದ ಕಠಿಣ ಬೊಜ್ಜು ಯಾವುದೇ ಶ್ರಮವಿಲ್ಲದೆ ಈಸಿಯಾಗಿ ಇಳಿಯುತ್ತೆ!


ಬಾದಾಮಿ ತಿನ್ನುವುದು ಹೇಗೆ? :
ಬಾದಾಮಿಯನ್ನು ರಾತ್ರಿಯಿಡೀ ನೆನೆಸಿ ಮತ್ತು ಸಿಪ್ಪೆಯನ್ನು ತೆಗೆದು ತಿನ್ನಬೇಕು. ಹೀಗೆ ಮಾಡಿದಾಗ ಕ್ಯಾನ್ಸರ್ ಅಪಾಯವನ್ನು ಉಂಟುಮಾಡುವ ಅಂಶಗಳನ್ನು  ಅದರಿಂದ ಹೊರ ಹೋಗುತ್ತವೆ. 


ನೆನೆಸಿದ ಬಾದಾಮಿ ತಿಂದರೆ ಏನಾಗುತ್ತದೆ? :
ಬಾದಾಮಿ ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲ.ಬಾದಾಮಿಯನ್ನು ನೀರಿನಲ್ಲಿ ನೆನೆಸಿದಾಗ ಅವುಗಳ ಪ್ರಯೋಜನಗಳು ಎರಡು ಪಟ್ಟು ಹೆಚ್ಚಾಗುತ್ತದೆ.  ಬಾದಾಮಿಯನ್ನು ನೆನೆಸಿದಾಗ ಅದು ಲಿಪೇಸ್‌ನಂತಹ ಕೆಲವು ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ.ಇದು ಚಯಾಪಚಯ ಹೆಚ್ಚಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಕಾರಿಯಾಗಿದೆ. 


ಇದನ್ನೂ ಓದಿ : ಮುಂಜಾನೆ ಒಂದು ಲೋಟ ಈ ಚಹಾ ಕುಡಿಯಿರಿ, ಹೈ ಬ್ಲಡ್ ಶುಗರ್ ಕೂಡಾ ನಾರ್ಮಲ್ ಆಗುವುದು !


ಬಾದಾಮಿಯನ್ನು ಹಾಗೆಯೇ ತಿಂದರೆ ಏನಾಗುತ್ತದೆ ? : 
ಯಕೃತ್ತಿನ ಕ್ಯಾನ್ಸರ್ ಅಪಾಯ : 

ಬಾದಾಮಿ ಅಥವಾ ಇತರ ದ್ವಿದಳ ಧಾನ್ಯಗಳಲ್ಲಿ ಅಫ್ಲಾಟಾಕ್ಸಿನ್ ಬಿ1 ಇರುತ್ತದೆ. ಇದು ಯಕೃತ್ತಿನ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಇದರರ್ಥ ಈ ರಾಸಾಯನಿಕವು ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. 


ಕಿಡ್ನಿಯಲ್ಲಿ ಕಲ್ಲುಗಳಿದ್ದರೆ ಬಾದಾಮಿ ತಿನ್ನಬೇಡಿ : 
ಕಿಡ್ನಿ ಸ್ಟೋನ್ ಇರುವವರು ಬಾದಾಮಿ ತಿನ್ನಬಾರದು.ಬಾದಾಮಿಯಲ್ಲಿ  ಆಕ್ಸಲೇಟ್‌  ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.ಇದನ್ನು ಅತಿಯಾಗಿ ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳಿರುವ ಜನರಿಗೆ ಗಂಭೀರ ಹಾನಿ ಉಂಟಾಗುತ್ತದೆ.


ಗ್ಯಾಸ್ ಸಮಸ್ಯೆ ಎದುರಾಗಬಹುದು : 
ಬಾದಾಮಿಯಲ್ಲಿ ನಾರಿನಂಶ ಅಧಿಕವಾಗಿರುತ್ತದೆ.ಇದರ ಅತಿಯಾದ ಸೇವನೆಯು ಹೊಟ್ಟೆ ಉಬ್ಬರದ ಸಮಸ್ಯೆಯನ್ನು ಉಂಟುಮಾಡಬಹುದು.ಇದು ಅತಿಸಾರ ಮತ್ತು ಹೊಟ್ಟೆ ನೋವನ್ನು ಸಹ ಉಂಟುಮಾಡಬಹುದು. 
 
ಇದನ್ನೂ ಓದಿ : Summer Diet: ಬಿರು ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ತುಂಬಾ ಪ್ರಯೋಜನಕಾರಿ ಮಸಾಲೆಗಳಿವು
 
ಪೋಷಕಾಂಶಗಳ ಹೀರಿಕೊಳ್ಳುವಿಕೆ ನಿಧಾನವಾಗಿರಬಹುದು : 
ಬಾದಾಮಿಯಲ್ಲಿ ನಾರಿನಂಶ ಅಧಿಕವಾಗಿದೆ.ಇದನ್ನು ಅತಿಯಾಗಿ ಸೇವಿಸುವುದರಿಂದ ದೇಹವು ಕಬ್ಬಿಣ,ಸತು ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ.


ನೆನೆಸಿದ ಬಾದಾಮಿಯ ಪ್ರಯೋಜನಗಳು : 
- ಸಂಪೂರ್ಣ ಪ್ರೋಟೀನ್ ದೇಹಕ್ಕೆ ಸಿಗುತ್ತದೆ. 
- ತೂಕ ನಷ್ಟದಲ್ಲಿ ಪ್ರಯೋಜನಕಾರಿ.
-  ಬುದ್ದಿ ಚುರುಕಾಗುವುದು 
- ಶಕ್ತಿಯ ಮೂಲ
- ಕೊಲೆಸ್ಟ್ರಾಲ್ ಕಡಿಮೆಯಗುವುದು 
- ರಕ್ತದೊತ್ತಡ ನಿಯಂತ್ರಣದಲ್ಲಿರುವುದು 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ