COVID-19 JN.1 Symptoms and Preventive measures in Children: ಭಾರತದ ಹಲವು ರಾಜ್ಯದಲ್ಲಿ ಕೋವಿಡ್ 19ನ ಐದನೇ ತರಂಗ ಜೆಎನ್.1  ಎಂಬ ಹೊಸ ರೂಪಾಂತರ ಆತಂಕವನ್ನು ಸೃಷ್ಟಿಸಿದೆ. ಭಾರತದ 12 ರಾಜ್ಯದಲ್ಲಿ  ೋವಿಡ್ 19 ಜೆಎನ್.1 ಪ್ರಕರಣಗಳು ದಿನೇ ದಿನೇ ವೇಗವಾಗಿ ಹೆಚ್ಚಿತ್ತಿದೆ. ಸೋಮವಾರದವರೆಗೆ (ಜನವರಿ 8)  12 ರಾಜ್ಯಗಳಿಂದ COVID-19 ಉಪ-ವೇರಿಯೆಂಟ್ JN.1 ರ ಒಟ್ಟು 819 ಪ್ರಕರಣಗಳು ವರದಿಯಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಮಹಾರಾಷ್ಟ್ರದಿಂದ 250, ಕರ್ನಾಟಕದಿಂದ 199, ಕೇರಳದಿಂದ 148, ಗೋವಾದಿಂದ 49, ಗುಜರಾತ್‌ನಿಂದ 36, ಆಂಧ್ರಪ್ರದೇಶ ಮತ್ತು ರಾಜಸ್ಥಾನದಿಂದ ತಲಾ 30, ತಮಿಳುನಾಡು ಮತ್ತು ತೆಲಂಗಾಣದಿಂದ ತಲಾ 26, ದೆಹಲಿಯಿಂದ 21, ಒಡಿಶಾದಿಂದ ಮೂರು ಮತ್ತು ಹರಿಯಾಣದಿಂದ ಒಂದು ಪ್ರಕರಣ ವರದಿಯಾಗಿದೆ. 


ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ 3.42% ಕೊವಿಡ್ ಪಾಸಿಟಿವ್ ರೇಟ್ ವರದಿ:- 
ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ 7359  ಟೆಸ್ಟ್‌ಗಳನ್ನು ಮಾಡಲಾಗಿದ್ದು, 6514 RTCPR ಹಾಗೂ  845  RAT ಟೆಸ್ಟ್‌ಗಳನ್ನ ಮಾಡಲಾಗಿದೆ.  ಒಟ್ಟು 1031 ಸಕ್ರಿಯ ಪ್ರಕರಣಗಳಲ್ಲಿ 962 ಮಂದಿ ಕೊರೊನಾ ಸೋಂಕಿತರಿಗೆ  ಹೋಮ್ಐಸೋಲೇಷನ್‌ನಲ್ಲಿ ಇರಲು ಸೂಚನೆ ನೀಡಲಾಗಿದೆ. ಕೋವಿಡ್ ದೃಢಪಟ್ಟಿರುವ 69   ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅದರಲ್ಲಿ 18  ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರಿಗೆ ಐಸಿಯು ವೆಂಟಿಲೇಶನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. 


ಇದನ್ನೂ ಓದಿ- ದೇಹ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಕಡಿಮೆ ಕೊಲೆಸ್ಟ್ರಾಲ್ ...!


ಜೆಎನ್.1 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ಸಹ, ತಕ್ಷಣದ ಆತಂಕಕ್ಕೆ ಯಾವುದೇ ಕಾರಣವಿಲ್ಲ, ಸೋಂಕಿತರಲ್ಲಿ ಹೆಚ್ಚಿನವರು ಮನೆ ಆಧಾರಿತ ಚಿಕಿತ್ಸೆಯನ್ನು ಆರಿಸಿಕೊಳ್ಳುತ್ತಿದ್ದಾರೆ, ಇದು ಸೌಮ್ಯವಾದ ಅನಾರೋಗ್ಯವನ್ನು ಸೂಚಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ವೈರಸ್‌ನ ಜೆಎನ್.1 ಉಪ-ವೇರಿಯಂಟ್ ಪತ್ತೆಯ ನಡುವೆ ನಿರಂತರ ಜಾಗರೂಕತೆಯನ್ನು ಕಾಪಾಡಿಕೊಳ್ಳಲು ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. 


ವಿಶ್ವ ಆರೋಗ್ಯ ಸಂಸ್ಥೆ (ಡಬಲ್ಯು‌ಎಚ್‌ಓ) ಪ್ರಕಾರ, ಕೊರೊನಾದ ಈ ಹೊಸ ಉಪ-ವೇರಿಯಂಟ್ ಕೋವಿಡ್-19ನ ರೂಪಾಂತರಗಳಿಗಿಂತ ಇದು ಹೆಚ್ಚು ಸಾಂಕ್ರಾಮಿಕ ಎಂದು ಪರಿಗಣಿಸಲಾಗಿದೆ. ಈ ರೂಪಾಂತರವು ಹರಡುವ ವೇಗದಿಂದಾಗಿ, ವಯಸ್ಸಾದವರು ಮತ್ತು ಮಕ್ಕಳು ಈ ರೂಪಾಂತರದಿಂದ ಹೆಚ್ಚು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಅವರ ಬಗ್ಗೆ ವಿಶೇಷ ಗಮನ ಅಗತ್ಯವಿದೆ ಎಂದು ಹೇಳಲಾಗುತ್ತಿದೆ. 


ಮಕ್ಕಳಲ್ಲಿ ಕಂಡು ಬರುವ ಕೋವಿಡ್ 19 ಜೆಎನ್.1 ರೂಪಾಂತರದ ಪ್ರಮುಖ ಲಕ್ಷಣಗಳೇನು? ಮಕ್ಕಳನ್ನು ಈ ಸೋಂಕಿನಿಂದ ರಕ್ಷಿಸುವುದು ಹೇಗೆ ಎಂದು ತಿಳಿಯೋಣ... 


ಕೋವಿಡ್ 19 ಜೆಎನ್.1 ರೂಪಾಂತರದ ಸಾಮಾನ್ಯ ಲಕ್ಷಣಗಳೆಂದರೆ:- 
>> ಉಸಿರಾಟದ ತೊಂದರೆ 
>> ದಣಿದ ಭಾವನೆ
>> ಮೈ-ಕೈ ನೋವು
>> ಗಂಟಲು ನೋವು
>> ಮೂಗು ಕಟ್ಟಿಕೊಳ್ಳುವುದು/ಮೂಗು ಸೋರುವುದು
>> ಹಸಿವಾಗದೆ ಇರುವುದು 
>> ಅತಿಸಾರ 
>> ನಿರಂತರ ಕೆಮ್ಮು 
>> ವಾಸನೆ ಅಥವಾ ರುಚಿಯ ನಷ್ಟ
ಆದಾಗ್ಯೂ, ಈ ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು ಎಂಬುದನ್ನೂ ನೆನಪಿಡಿ. 


ಇದನ್ನೂ ಓದಿ- Health Tips: ಲಿವರ್ ಆರೋಗ್ಯ ಕಾಪಾಡಲು ಈ 5 ಆಹಾರಗಳನ್ನು ಸೇವಿಸಿ


ಕೋವಿಡ್ 19 ಜೆಎನ್.1 ರೂಪಾಂತರದಿಂದ ಮಕ್ಕಳನ್ನು ರಕ್ಷಿಸಲು ಹೀಗೆ ಮಾಡಿ: 
ಕೋವಿಡ್ 19 ಜೆಎನ್.1 ರೂಪಾಂತರದ ಹೆಚ್ಚುತ್ತಿರುವ ಪ್ರಕರಣಗಳ ದೃಷ್ಟಿಯಿಂದ ನೀವು ಮತ್ತು ನಿಮ್ಮ ಮನೆಯವರ ಆರೋಗ್ಯದ ಸುರಕ್ಷತೆ ಬಗ್ಗೆ ಆದ್ಯತೆ ನೀಡುವುದು ಅತ್ಯಗತ್ಯವಾಗಿದೆ. ಅದರಲ್ಲೂ ಚಿಕ್ಕ ಮಕ್ಕಳ ವಿಷಯದಲ್ಲಿ ನಿರ್ಲಕ್ಷ್ಯವನ್ನು ತಪ್ಪಿಸಿ ಈ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳಿ.... 


ಲಸಿಕೆ: 
ಲಸಿಕೆಗಳು ಗಂಭೀರ ಖಾಯಿಲೆಗಳನ್ನು ತಡೆದು ಕೋವಿಡ್ ಸೋಂಕನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ  ಎಂದು ಸಾಬೀತು ಪಡಿಸುತ್ತದೆ. ಹಾಗಾಗಿ, ಮಕ್ಕಳಿಗೆ ಲಸಿಕೆ ಹಾಕಿಸುವುದನ್ನು ಮರೆಯಬೇಡಿ. 


ನೈರ್ಮಲ್ಯ: 
ನಿಯಮಿತವಾಗಿ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ತೊಳೆಯುವುದನ್ನು ರೂಡಿಸಿ. ಇದು ಕೈಗಳಿಂದ ವೈರಸ್‌ಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.


ಮಾಸ್ಕ್: 
ಸಾರ್ವಜನಿಕ ಸ್ಥಳಗಳಲ್ಲಿ ಸೋಂಕು ಹರಡುವ ಅಪಾಯ ಹೆಚ್ಚಿರುವುದರಿಂದ ಮಕ್ಕಳು ಮನೆಯಿಂದ ಹೊರಗಡೆ ಹೋಗುವಾಗ ತಪ್ಪದೆ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಿ. 


ಕರವಸ್ತ್ರ: 
ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದ ಸಹಾಯದಿಂದ ಕವರ್ ಮಾಡುವುದನ್ನು ರೂಢಿಸಿಕೊಳ್ಳಿ. ಇದು ಸೋಂಕಿನ ಅಪಾಯವನ್ನು ಬಹಳಷ್ಟು ಮಟ್ಟಿಗೆ ಕಡಿಮೆ ಮಾಡಬಲ್ಲದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.