ನವದೆಹಲಿ: ಕರೋನಾ ವಿರುದ್ಧದ ಹೋರಾಟದಲ್ಲಿ ಆಕ್ಸಿಮೆಟೆರ್ ಪ್ರತಿಯೊಬ್ಬರಿಗೂ  ಅಗತ್ಯ ಸಾಧನವಾಗಿದೆ. ಉತ್ತಮ ಆಕ್ಸಿಮೀಟರ್ ಮಾರುಕಟ್ಟೆಯಲ್ಲಿ ಎರಡು ಸಾವಿರ ರೂಪಾಯಿಗಳಿಂದ ಲಭ್ಯವಿದೆ. ಈ ಸಣ್ಣ ಸಾಧನವು ನಮ್ಮ ಹೃದಯದ ಬಡಿತದ ಜೊತೆಗೆ ಆಮ್ಲಜನಕದ ಮಟ್ಟವನ್ನು ದಾಖಲಿಸುತ್ತದೆ. ಮತ್ತೊಂದೆಡೆ, ಸರ್ಕಾರವು ಆಕ್ಸಿಮೀಟರ್ ಅನ್ನು ಹೇಗೆ ಬಳಸುವುದು ಎಂಬ ಬಗ್ಗೆ ಜಾಗೃತಿ ಮೂಡಿಸುತ್ತಿದೆ.


COMMERCIAL BREAK
SCROLL TO CONTINUE READING

ಆಕ್ಸಿಮೀಟರ್:
ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಲು ಆಕ್ಸಿಮೀಟರ್ ಎಂಬ ಸಾಧನವನ್ನು ಬಳಸಲಾಗುತ್ತದೆ. ಇದು ಒಂದು ಸಣ್ಣ ಯಂತ್ರವಾಗಿದೆ, ಇದು ಬಟ್ಟೆ ಅಥವಾ ಕಾಗದದ ಕ್ಲಿಪ್‌ಗೆ ಹೋಲುತ್ತದೆ ಮತ್ತು ಉತ್ತಮ ವಿಷಯವೆಂದರೆ ಅದನ್ನು ಎಲ್ಲಿ ಬೇಕಾದರೂ ಕೊಂಡೊಯ್ಯಬಹುದು. ಬಹುಶಃ ಈ ಕಾರಣಕ್ಕಾಗಿ ಇದನ್ನು ಪೋರ್ಟಬಲ್ ಆಕ್ಸಿಮೀಟರ್ (Oximeter) ಎಂದೂ ಕರೆಯಲಾಗುತ್ತದೆ.


ಕರೋನಾ ಯುಗದಲ್ಲಿ ಆಮ್ಲಜನಕದ ಸರಿಯಾದ ರೀಡಿಂಗ್ ಕಂಡುಕೊಳ್ಳಲು ಆಕ್ಸಿಮೀಟರ್ ಅನ್ನು ಸರಿಯಾಗಿ ಬಳಸುವುದು ಬಹಳ ಮುಖ್ಯ. 


ಇದನ್ನೂ ಓದಿ - Covid-19 ರೋಗಿಯನ್ನು ಯಾವಾಗ ಆಸ್ಪತ್ರೆಗೆ ಸೇರಿಸಬೇಕು? ಕೇವಲ 6 ನಿಮಿಷಗಳಲ್ಲಿ ಈ ರೀತಿ ಪತ್ತೆ ಹಚ್ಚಿ


ಮನಸ್ಸನ್ನು ಶಾಂತವಗಿರಿಸಿ:
ಆಮ್ಲಜನಕದ ಮಟ್ಟವನ್ನು ಪರೀಕ್ಷಿಸುವ ಮೊದಲು, ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ದೇಹಕ್ಕೆ ಕನಿಷ್ಠ 15 ನಿಮಿಷಗಳ ಕಾಲ ಸಂಪೂರ್ಣ ವಿಶ್ರಾಂತಿ ನೀಡಿ.


ನೇರವಾಗಿ ಕುಳಿತುಕೊಳ್ಳಿ:
ಆಕ್ಸಿಮೀಟರ್ ಬಳಸಿ ನಿಮ್ಮ ದೇಹದ ಆಮ್ಲಜನಕ (Oxygen) ಮಟ್ಟವನ್ನು ಪರೀಕ್ಷಿಸಲು ನೇರವಾಗಿ ಕುಳಿತು ನಿಮ್ಮ ಬೆರಳನ್ನು ಆಕ್ಸಿಮೀಟರ್ ಒಳಗೆ ಇರಿಸಿ.  


ತೋರು ಅಥವಾ ಮಧ್ಯದ ಬೆರಳಿಗೆ ಅನ್ವಯಿಸಿ:
ಆಕ್ಸಿಮೀಟರ್ ಒಳಗೆ ನಿಮ್ಮ ತೋರು ಅಥವಾ ಮಧ್ಯದ ಬೆರಳನ್ನು ಇರಿಸಿ. 


ಇದನ್ನೂ ಓದಿ - Pulse Oximeter: ಆಕ್ಸಿಮೀಟರ್ ಸಿಗುತ್ತಿಲ್ಲವೇ? ಚಿಂತಿಸಬೇಡಿ, ಇಲ್ಲಿದೆ ಅಗ್ಗದ ಆಯ್ಕೆ


ಆಕ್ಸಿಮೀಟರ್ ಅನ್ನು ಸ್ಥಿರವಾಗಿರಿಸಿಕೊಳ್ಳಿ: 
ಆಕ್ಸಿಮೀಟರ್ ಒಳಗೆ ನಿಮ್ಮ ಬೆರಳಿಟ್ಟು ಪರೀಕ್ಷಿಸುವಾಗ ನಿಮ್ಮ ಕೈ ಅನ್ನು ಅಲುಗಾಡಿಸಬಾರದು ಎಂಬುದನ್ನು ನೆನಪಿನಲ್ಲಿಡಿ.


ದಿನಕ್ಕೆ ಮೂರು ಬಾರಿ ಪರೀಕ್ಷಿಸಿ:
ಆಕ್ಸಿಮೀಟರ್ನೊಂದಿಗೆ ದಿನಕ್ಕೆ ಮೂರು ಬಾರಿ ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಆಮ್ಲಜನಕದ ಮಟ್ಟವು ಶೇಕಡಾ 92 ಕ್ಕಿಂತ ಕಡಿಮೆಯಿದ್ದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.