ನವದೆಹಲಿ : Covid-19 Latest Update: ದೇಶದಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಭಾರತದಲ್ಲಿ  ಕೋವಿಡ್ ಪ್ರಕರಣಗಳು 35% ಹೆಚ್ಚಳ ಕಂಡು ಬಂದಿದೆ.  ಜನವರಿಯಿಂದ ಇದೇ ಮೊದಲ ಬಾರಿಗೆ ಕೋವಿಡ್ ಕೇಸ್ ನಲ್ಲಿ ಇಷ್ಟು ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ. ಆದರೂ ಕರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ ಕಡಿಮೆ. 


COMMERCIAL BREAK
SCROLL TO CONTINUE READING

ಒಂದು ವಾರದಲ್ಲಿ ಕೊರೊನಾ ಪ್ರಕರಣಗಳಲ್ಲಿ  ಶೇಕಡಾ 35 ರಷ್ಟು ಹೆಚ್ಚಳ : 
ದೆಹಲಿ ಮತ್ತು ಅದರ ಪಕ್ಕದ ರಾಜ್ಯಗಳಲ್ಲಿ ಕರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಕಳೆದ ಏಳು ದಿನಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಶೇ.35ರಷ್ಟು ಏರಿಕೆಯಾಗಿದೆ. ದೇಶದ ಉಳಿದ ಭಾಗಗಳಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಮೂರು ರಾಜ್ಯಗಳಲ್ಲಿ ಅಂದರೆ ದೆಹಲಿ, ಹರಿಯಾಣ ಮತ್ತು ಉತ್ತರಪ್ರದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ.  ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. 


ಇದನ್ನೂ ಓದಿ : ಅಮೇಥಿ ಅಪಘಾತ: ಬೊಲೆರೋ ಲಾರಿ ಡಿಕ್ಕಿ: 6 ಸಾವು, 4 ಮಂದಿಗೆ ಗಂಭೀರ ಗಾಯ


 4,900 ಸೋಂಕಿತರು  : 
 ಕಳೆದ ವಾರ ಭಾರತದಲ್ಲಿ ಸುಮಾರು 6,610 ಹೊಸ ಪ್ರಕರಣಗಳು ವರದಿಯಾಗಿದೆ. ಅಂದರೆ ಕಳೆದ ಏಳು ದಿನಗಳಲ್ಲಿ 4,900 ರಷ್ಟು ಹೆಚ್ಚು ಸೋಂಕಿತರು  ಕಂಡು ಬಂದಿದ್ದಾರೆ. ಇದಕ್ಕೂ ಮುನ್ನ  ಸುಮಾರು 7,010 ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ಬಾರಿ ಕೇರಳದ ಅಂಕಿ ಅಂಶಗಳನ್ನು ಸೇರಿಸಿಲ್ಲ. ಏಕೆಂದರೆ ಪ್ರಸ್ತುತ ವಾರದಿಂದ ರಾಜ್ಯವು ಕೋವಿಡ್ ಡೇಟಾವನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಿದೆ. ಕಳೆದ ವಾರ (ಏಪ್ರಿಲ್ 4-10) ಕೇರಳದಲ್ಲಿ 2,185 ಪ್ರಕರಣಗಳು ದಾಖಲಾಗಿದ್ದವು.


ದೆಹಲಿಯಲ್ಲಿ ವೇಗವಾಗಿ ಹರಡುತ್ತಿದೆ  ಕರೋನಾ  : 
ಭಾನುವಾರ ದೆಹಲಿಯಲ್ಲಿ 517 ಹೊಸ ಕರೋನಾ ಪ್ರಕರಣಗಳು ವರದಿಯಾಗಿವೆ. ಈಗ ದೆಹಲಿಯಲ್ಲಿ ಸಕ್ರಿಯ ಕರೋನಾ ಸೋಂಕಿತ ರೋಗಿಗಳ ಸಂಖ್ಯೆ 1518 ಕ್ಕೆ ಏರಿದೆ. ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಈ ಅವಧಿಯಲ್ಲಿ 261 ಕರೋನಾ ಸೋಂಕಿತರು ಸೋಂಕು ಮುಕ್ತರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಯಾವುದೇ ಕರೋನಾದಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ ಎನ್ನುವುದು ಸಮಾಧಾನಕರ ಸಂಗತಿ. 


ಇದನ್ನೂ ಓದಿ : ಅಂದರಿಗಾಗಿ ದೇಶದ ಮೊಟ್ಟಮೊದಲ ರೇಡಿಯೋ ಚಾನೆಲ್ ರೇಡಿಯೋ ಅಕ್ಷ್`ಕ್ಕೆ ಚಾಲನೆ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.