ನವದೆಹಲಿ : Covid 4th Wave : ರಾಜಧಾನಿ ದೆಹಲಿ ಸೇರಿದಂತೆ ದೇಶದಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳು ಜನರ ಆತಂಕವನ್ನು ಹೆಚ್ಚಿಸಿವೆ. ಮತ್ತೊಂದೆಡೆ,  ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೆಚ್ಚುವರಿ ಮಹಾನಿರ್ದೇಶಕ ಸಮೀರನ್ ಪಾಂಡಾ ಮಾತನಾಡಿ, ಭಾರತದಲ್ಲಿ ಪ್ರತಿದಿನ ಕೋವಿಡ್ -19 ಪ್ರಕರಣಗಳು ಬರುತ್ತಿದ್ದು, ಅದನ್ನು ಕರೋನದ ನಾಲ್ಕನೇ ಅಲೆ ಎಂದು ಕರೆಯಲಾಗುವುದಿಲ್ಲ ಎಂದಿದ್ದಾರೆ. 


COMMERCIAL BREAK
SCROLL TO CONTINUE READING

ದೇಶದಲ್ಲಿ ಕೊರೊನಾ ನಾಲ್ಕನೇ ಅಲೆ ಇಲ್ಲ :
ಭಾನುವಾರ ಮಾತನಾಡಿದ ಸಮೀರನ್ ಪಾಂಡಾ, ಜಿಲ್ಲಾ ಮಟ್ಟದಲ್ಲಿ ಕರೋನಾ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿದೆ. ಹಾಗಂತ ದೇಶವು ನಾಲ್ಕನೇ ಅಲೆಯತ್ತ ಸಾಗುತ್ತಿದೆ ಎಂದು ಹೇಳುವುದು ಸಾಧ್ಯವಿಲ್ಲ. ಪ್ರಸ್ತುತ, ದೇಶದ ಕೆಲವು ಭಾಗಗಳಲ್ಲಿ ಮಾತ್ರ ಈ ಸಮಸ್ಯೆ ಕಂಡು ಬಂದಿದೆ. 


ಇದನ್ನೂ ಓದಿ  : Facial Hair: ಮನೆಯಲ್ಲೇ ಫೇಸಿಯಲ್‌ ಹೇರ್‌ ರಿಮೂವ್‌ ಮಾಡುವ ಸುಲಭ ವಿಧಾನ ಇಲ್ಲಿದೆ


ಎಲ್ಲಾ ರಾಜ್ಯಗಳಲ್ಲಿ ಕೋವಿಡ್‌ ಸಮಸ್ಯೆಯಿಲ್ಲ : 
ಜಿಲ್ಲಾ ಮಟ್ಟದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಏರಿಕೆಯನ್ನು ಬ್ಲಿಪ್ ಎನ್ನುತ್ತಾರೆ.  ಬ್ಲಿಪ್ ಅಂದರೆ ತಾತ್ಕಾಲಿಕ ಸಮಸ್ಯೆ ಎಂದರ್ಥ. ಇದು ನಾಲ್ಕನೇ ಅಲೆಯ ಸಂಕೇತವಲ್ಲ ಎಂದು  ಪಾಂಡಾ,  ವಿವರಿಸಿದ್ದಾರೆ.  ಆದರೆ ಎಲ್ಲಾ ರಾಜ್ಯಗಳು ಕೋವಿಡ್‌ನ ಹಿಡಿತದಲ್ಲಿವೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 


ಯಾವುದೇ ಹೊಸ ರೂಪಾಂತರಗಳು ಕಂಡುಬಂದಿಲ್ಲ :
ದೇಶಾದ್ಯಂತ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಮುಖ್ಯವಾಗಿ, ನಾಲ್ಕನೇ ಅಲೆಯನ್ನು ಸೂಚಿಸುವ ಯಾವುದೇ ಹೊಸ ರೂಪಾಂತರವು ಇಲ್ಲಿಯವರೆಗೆ ಕಂಡುಬಂದಿಲ್ಲ ಏನ್ ದಿದ್ದಾರೆ. ಇನ್ನು ಪಾಸಿಟಿವಿಟಿ ದರದ ಕುರಿತು ಮಾತನಾಡಿದ ಅವರು, ಟೆಸ್ಟ್ ಸಂಖ್ಯೆ ಕಡಿಮೆಯಾಗಿರುವುದರಿಂದ ಕೆಲವೊಮ್ಮೆ ದರ ಹೆಚ್ಚಾಗುತ್ತದೆ ಎಂದಿದ್ದಾರೆ. 


ಇದನ್ನೂ ಓದಿ  : How To Remove Underarm Smell: ಬೇಸಿಗೆಯಲ್ಲಿ ಬೆವರಿನ ದುರ್ನಾತದಿಂದ ಮುಕ್ತಿ ಪಡೆಯಲು ಇಲ್ಲಿದೆ ಸುಲಭ ಉಪಾಯ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.