Covid Positive Diet: ಕರೋನಾದ ಎರಡನೇ ತರಂಗವು ಭಾರತವನ್ನು ಬೆಚ್ಚಿ ಬೀಳಿಸಿದೆ. ಈ ಮಧ್ಯೆ, ನೀವು ಸಹ ಈ ಸೋಂಕಿಗೆ ಒಳಗಾಗಿದ್ದರೆ, ಭಯಪಡುವ ಅಗತ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವು ಯಾವ ರೀತಿಯ ಆಹಾರವನ್ನು ಅನುಸರಿಸಬೇಕು ಎಂದು ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.


COMMERCIAL BREAK
SCROLL TO CONTINUE READING

ಈ ಆಹಾರದ ಪಟ್ಟಿಯನ್ನು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ (Dr Harshvardhan) ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ - Covid Vaccine ಪಡೆಯುವವರು ಎಷ್ಟು ದಿನ ಆಲ್ಕೋಹಾಲ್ ಕುಡಿಯಬಾರದು? ತಜ್ಞರು ಏನ್ ಹೇಳ್ತಾರೆ


ಕೇಂದ್ರ ಆರೋಗ್ಯ ಸಚಿವರು ಹಂಚಿಕೊಂಡಿರುವ ಪಟ್ಟಿಯಲ್ಲಿ ಕರೋನಾ ಪಾಸಿಟಿವ್ (Corona Positive) ಆಗಿರುವವರು ಪ್ರೋಟೀನ್ ಅನ್ನು ಉತ್ತಮ ರೀತಿಯಲ್ಲಿ ಸೇವಿಸಬೇಕು ಎಂದು ಸಲಹೆ ನೀಡಲಾಗಿದೆ. ಈ ಸಮಯದಲ್ಲಿ ತಪ್ಪದೇ ವಿಟಮಿನ್ ಮತ್ತು ಖನಿಜಗಳನ್ನು ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸಾಕಷ್ಟು ಸೇವಿಸಬೇಕು ಎಂದು ಸೂಚಿಸಲಾಗಿದೆ.


ಉತ್ತಮ ಆಹಾರದ ಜೊತೆಗೆ, ಯೋಗ, ಪ್ರಾಣಾಯಾಮ ನಿಮ್ಮ ಆರೋಗ್ಯವನ್ನು ಸದೃಢವಾಗಿಡಲು ಸಹಾಯಕವಾಗಿದ್ದು ಪ್ರತಿನಿತ್ಯ ತಪ್ಪದೇ ಇವುಗಳನ್ನು ರೂಢಿಸಿಕೊಳ್ಳುವಂತೆ ಇದರಲ್ಲಿ ಸೂಚಿಸಲಾಗಿದೆ.


ಕೋವಿಡ್ ರೋಗಿಗಳು ಏನು ತಿನ್ನಬೇಕು-
>> ಕರೋನಾ ರೋಗಿಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುವ ಮತ್ತು ನಮಗೆ ಶಕ್ತಿ ನೀಡುವ ಆಹಾರ ಸೇವನೆ ಬಗ್ಗೆ ಗಮನಹರಿಸಬೇಕು.


Corona Treatment: ಕರೋನಾ ಚಿಕಿತ್ಸೆಗಾಗಿ ಸರ್ಕಾರ ನೀಡುತ್ತಿದೆ 5 ಲಕ್ಷ ರೂಪಾಯಿ, ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿ


>>  ಈ ಸಮಯದಲ್ಲಿ ಆರೋಗ್ಯಕರ ಕೊಬ್ಬನ್ನು ಹೊಂದಿರುವ ಅಕ್ರೋಟ್, ಆಲಿವ್ ಎಣ್ಣೆ, ಸಾಸಿವೆ ಎಣ್ಣೆಯಂತಹ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗಿದೆ.


>> ಸಾಧ್ಯವಾದಷ್ಟು ನಿಯಮಿತವಾಗಿ ವ್ಯಾಯಾಮ, ಪ್ರಾಣಾಯಾಮ, ಯೋಗ ಮಾಡುವಂತೆ ಸಲಹೆ ನೀಡಲಾಗಿದೆ.


>> ದೇಹಕ್ಕೆ ಅಗತ್ಯ ವಿಟಮಿನ್, ಖನಿಜವನ್ನು ಒದಗಿಸಲು ಹಣ್ಣು, ತರಕಾರಿಗಳನ್ನು ಸೇವಿಸಿ.


>> ಸೋಂಕಿನಿಂದ ರಕ್ಷಿಸಿಕೊಳ್ಳಲು 70% ಕೋಕೋಯುಕ್ತ ಡಾರ್ಕ್ ಚಾಕಲೇಟ್ ಅನ್ನು ಸ್ವಲ್ಪ ಸೇವಿಸಿ.


>> ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ದಿನಕ್ಕೆ ಒಂದು ಬಾರಿಯಾದರೂ ಅರಿಶಿನದ ಹಾಲನ್ನು ಸೇವಿಸಿ.


>> ಕೋವಿಡ್ ರೋಗಿಗಳಲ್ಲಿ ಹೆಚ್ಚಿನವರಿಗೆ ವಾಸನೆ ಮತ್ತು ರುಚಿ ತಿಳಿಯುವುದಿಲ್ಲ. ಜೊತೆಗೆ ಹಲವರು ಆಹಾರ ನುಂಗುವುದರಲ್ಲೂ ಸಮಸ್ಯೆ ಹೊಂದಿರುತ್ತಾರೆ ಎಂದು ಪೋಸ್ಟ್ನಲ್ಲಿ ತಿಳಿಸಲಾಗಿದೆ. ಆದ್ದರಿಂದ, ಅವರು ಮೃದುವಾದ ಆಹಾರವನ್ನು ಸೇವಿಸಬೇಕು ಎಂದು ಸಲಹೆ ನೀಡಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.