Covishield : ಲಸಿಕೆಯಿಂದ ಅಡ್ಡ ಪರಿಣಾಮ ಎಂಬ ಆರೋಪದ ಬೆನ್ನಲ್ಲೇ ಪರಿಶೀಲನೆಗೆ ಅರೋಗ್ಯ ಸಚಿವರಿಂದ ಒತ್ತಾಯ
Covishield : ಕೋವಿಡ್ ಲಸಿಕೆಯು ಗಂಭೀರವಾದ ಅಡ್ಡ ಪರಿಣಾಮವನ್ನು ಬೀರುತ್ತದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಈ ಹಿನ್ನೆಲೆ ಕೇಂದ್ರ ಸರ್ಕಾರ ಕೋವಿಡ್ ಲಸಿಕೆಯ ಪರಿಶೀಲನೆ ಕೂಡಲೇ ನಡೆಸಬೇಕು ಎಂದು ಆರೋಗ್ಯ ಸಚಿವ ಹೇಳಿದ್ದಾರೆ.
Covishield Side Effects : ಕೆಲವು ಕಾಲದ ಹಿಂದೆ ಇಡೀ ಜಗತ್ತೇ ಒಂದು ದೊಡ್ಡ ಸಮಸ್ಯೆಯಿಂದ ಪಾರಾಗಿ ಬಂದಿದೆ. ಕೊರೊನಾದಂತಹ ಮಹಾಮಾರಿ ರೋಗವು ಇಡೀ ಜಗತ್ತನ್ನೇ ಮರು ಸೃಷ್ಟಿ ಮಾಡಿತು, ಅದಕ್ಕೆ ಕಾರಣ ಅದನ್ನು ಹೋಗಲಾಡಿಸುವ ಲಸಿಕೆಗಳು. ಕೋವಿಡ್ ಬಂದ ನಂತರ ಕೋ ವ್ಯಾಕ್ಸಿನ್ ಹಾಗೂ ಕೋವಿಶಿಲ್ಡ್ ನಂತಹ ಲಸಿಕೆಗಳು ಜನರನ್ನು ಬದುಕುಳಿಯುವಂತೆ ಮಾಡಲು ಸಹಾಯ ಮಾಡಿತು.
ಇದೀಗ ಕೋವಿಡ್ ವ್ಯಾಕ್ಸಿನ್ಗಳಲ್ಲಿ ಒಂದಾದ ಕೋವಿಶಿಲ್ಡ್ ಲಸಿಕೆಯನ್ನು ಕೋಟ್ಯಾಂತರ ಜನರು ಕೋವಿಡ್ ಸಂದರ್ಭದಲ್ಲಿ ತೆಗೆದುಕೊಂಡಿದ್ದಾರೆ. ಆ ಕೋವಿಶಿಲ್ಡ್ ಲಸಿಕೆ ಗಂಭೀರವಾದ ಅಡ್ಡ ಪರಿಣಾಮ ಬೀರುತ್ತದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಇದನ್ನು ಓದಿ :20 World Cup 2024 ತಂಡದಲ್ಲಿ Yujvendra Chahalಗೆ ಸ್ಥಾನ, ಪತಿ Dhanashree Verma ಫುಲ್ ಖುಷ್
ಈ ಆರೋಪ ಕೇಳಿ ಬಂದ ಕೂಡಲೇ ಕೇಂದ್ರ ಸರ್ಕಾರ ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ದೆಹಲಿಯ ಆರೋಗ್ಯ ಸಚಿವ ಸೌರಭ ಭಾರಧ್ವಾಜ್ ಹೇಳಿದ್ದಾರೆ.
ಜರ್ಮನಿ, ಫ್ರಾನ್ಸ್, ಸ್ಪೆನ್, ಫಿನ್ಲ್ಯಾಂಡ್, ನಾರ್ವೆ ಮತ್ತು ಡೆನ್ಮಾರ್ಕ್ ಯುರೋಪಿಯನ್ ದೇಶಗಳು ಕೋವಿಶಿಲ್ಡ್ ಲಸಿಕೆಯ ಸುರಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ನಿಷೇಧ ಹೇರಿದ್ದವು ಎಂದು ಹೇಳಿದರು.
ಇದನ್ನು ಓದಿ :ಜೇಬಲ್ಲಿ ಪೆನ್ ಡ್ರೈವ್, ಸಿ.ಡಿ ಇದೆ ಎಂದು ಹೆದರಿಸುವವನು ನಾನಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್
ಬ್ರಿಟನ್ ಕೇಂದ್ರ ಕಚೇರಿ ಹೊಂದಿರುವ ಔಷಧ ಕಂಪನಿ ಆಸ್ಟ್ರಾಜನಿಕಾ, ಕೊವಿದ್ ಲಸಿಕೆಯು ಕೆಲವು ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಆದರೆ ಇದಕ್ಕೆ ಕಾರಣ ತಿಳಿದು ಬಂದಿಲ್ಲ ಎಂದು ಈ ಕುರಿತಂತೆ ನ್ಯಾಯಾಲಯಕ್ಕೆ ತಿಳಿಸಲಾಗಿದೆ ಎಂದು ಹೇಳಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.