ನವದೆಹಲಿ: ದೇಸಿ ತುಪ್ಪವಿಲ್ಲದೆ  ಭಾರತೀಯ ಆಹಾರದ ರುಚಿಯನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಆದರೆ ದೇಶದಲ್ಲಿ ಇಂದಿಗೂ ಕೆಲ ಮಹಿಳೆಯರು ತುಪ್ಪದ ಹೆಸರನ್ನು ಕೇಳಿದ ತಕ್ಷಣ ಮುಖ ಸಿಂಡರಿಸಲು ಪ್ರಾರಂಭಿಸುತ್ತಾರೆ, ಏಕೆಂದರೆ ಇದು ತೂಕ ಇದು ತೂಕ ಹೆಚ್ಚಳ ಹಾಗೂ ರೋಗಗಳ ಕಾರಣ ಎಂದು ಹೇಳಲಾಗುತ್ತದೆ. ಆದರೆ ತುಪ್ಪದ ರುಚಿ ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ಕೂಡ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ವಿಶೇಷವಾಗಿ ದೇಸಿ ಹಸುವಿನ ತುಪ್ಪ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಂಶೋಧನೆಯ ಪ್ರಕಾರ, ಹಸುವಿನ ತುಪ್ಪ ದೇಹದಲ್ಲಿನ ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ. ಹಸು ತುಪ್ಪದ ಸೇವನೆ ದೇಹದಲ್ಲಿ ಬೊಜ್ಜು ಸಹ ಕಡಿಮೆಮಾಡುತ್ತದೆ. ದೇಸಿ ಹಸುವಿನ ತುಪ್ಪದಲ್ಲಿ ಆಂಟಿಆಕ್ಸಿಡೆಂಟ್‌ಗಳು, ಬ್ಯಾಕ್ಟೀರಿಯಾ ವಿರೋಧಿ ಮತ್ತು ಜೀವಸತ್ವಗಳಿದ್ದು, ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ. ದೇಸಿ ತುಪ್ಪದ  ಈ ಎಲ್ಲಾ ಅಂಶಗಳು ದೇಹದಿಂದ ವಿಷವನ್ನು ಸಹ ತೆಗೆದುಹಾಕುತ್ತವೆ. ಹಾಗಾದರೆ ಬನ್ನಿ ಹಸುವಿನ ದೇಸಿ ತುಪ್ಪ ಸೇವನೆ ದೇಹಕ್ಕೆ ಹೇಗೆ ಲಾಭಕಾರಿ ಎಂಬುದನ್ನು ತಿಳಿಯೋಣ ಬನ್ನಿ. 


COMMERCIAL BREAK
SCROLL TO CONTINUE READING

ಹಸುವಿನ ದೇಸಿ ತುಪ್ಪದ ಲಾಭಗಳು
- ಹಸುವಿನ ತುಪ್ಪ ಮೂಗಿಗೆ ಹಾಕುವ ಮೂಲಕ ಅಲರ್ಜಿಯಿಂದ ದೂರ ಉಳಿಯಬಹುದು.
- ಹಸುವಿನ ತುಪ್ಪ ಸೇವಿಸುವುದರಿಂದ ಟೈಪ್ 2 ಡಯಾಬಿಟಿಸ್ ಹಾಗೂ ಬೊಜ್ಜಿನಿಂದ ದೂರ ಉಳಿಯಬಹುದು.
- ಹಸುವಿನ ತುಪ್ಪದಲ್ಲಿ ಹೇರಳ ಪ್ರಮಾಣದಲ್ಲಿ ವಿಟಮಿನ್ ಕೆ ಇರುತ್ತದೆ. ಇದಲ್ಲದೆ ಹಸುವಿನ ತುಪ್ಪದಲ್ಲಿ ಆಂಟಿ ಆಕ್ಸಿಡೆಂಟ,ವಿಟಮಿನ್ ಹಾಗೂ ಮಿನರಲ್ ಗಳೂ ಕೂಡ ಇರುತ್ತವೆ. ಇವು ದೇಹದ ರೋಗಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
- ಒಂದು ವೇಳೆ ನಿಮ್ಮ ದೇಹದ ತೂಕ ಅತ್ಯಧಿಕವಾಗಿದ್ದರೆ, ದೇಸಿ ತುಪ್ಪ ಸೇವನೆಯಿಂದ ಬಚಾವಾಗಬೇಡಿ. ಇದನ್ನು ನೀವು ನಿಮ್ಮ ಡಯಟ್ ನಲ್ಲಿ ಶಾಮೀಲುಗೊಳಿಸಿ. ಇದರಿಂದ ನಿಮ್ಮ ದೇಹದ ತೂಕ ಹೆಚ್ಚಾಗುವುದಿಲ್ಲ ಹಾಗೂ ತೂಕ ಕಂಟ್ರೋಲ್ ನಲ್ಲಿರುತ್ತದೆ 
- ದೇಸಿ ತುಪ್ಪದಲ್ಲಿ ಕಲ್ಲು ಸಕ್ಕರೆ ಬೆರೆಸಿ ತಿಂದರೆ ಮದ್ಯ, ಭಾಂಗ್ ಹಾಗೂ ಗಾಂಜಾ ನಶೆ ಕಮ್ಮಿಯಾಗುತ್ತದೆ.
- ಹಸುವಿನ ದೇಸಿ ತುಪ್ಪವನ್ನು ಮೂಗಿನಲ್ಲಿ ಹಾಕುವುದರಿಂದ ಕೂದಲುದುರುವ ಸಮಸ್ಯೆ ದೂರವಾಗಿ ಹೊಸ ಕೂದಲುಗಳು ಬರಲಾರಂಭಿಸುತ್ತವೇ ಎನ್ನಲಾಗುತ್ತದೆ.
- ಅಂಗೈ ಹಾಗೂ ಅಂಗಾಲುಗಳು ಉರಿಯುತ್ತಿದ್ದರೆ. ಪಾದ ಮತ್ತು ಅಂಗೈಗಳಿಗೆ ಹಸುವಿನ ತುಪ್ಪ ಸವರಿ ಮಾಲಿಶ್ ಮಾಡಿ.