ಕ್ಯಾನ್ಸರ್ನಿಂದ ಹಿಡಿದು ಹಲವು ಭಯಾನಕ ರೋಗಕ್ಕೆ ʼಗೋವಿನ ಹಾಲುʼ ಮದ್ದು.!
Cow milk benefits : ಆರೋಗ್ಯ ಮತ್ತು ದೈಹಿಕವಾಗಿ ಫಿಟ್ ಆಗಿರಲು ಪ್ರತಿದಿನ ಹಾಲು ಕುಡಿಯಲು ವೈದ್ಯರು ಶಿಫಾರಸು ಮಾಡುತ್ತಾರೆ. ಪೋಷಕಾಂಶಗಳ ಜೊತೆಗೆ ಹಸುವಿನ ಹಾಲು 90 ಪ್ರತಿಶತದಷ್ಟು ನೀರನ್ನು ಹೊಂದಿದ್ದು, ನಿಮ್ಮ ದೇಹವನ್ನು ಹೈಡ್ರೇಟ್ ಮಾಡುತ್ತದೆ. ಅಲ್ಲದೆ ಹಲವಾರು ಭಯಾನಕ ರೋಗಗಳನ್ನು ನಿಮ್ಮಿಂದ ದೂರವಿಡುತ್ತದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Protein in Cow milk : ಭಾರತದ ಅನೇಕ ಮನೆಗಳಲ್ಲಿ ಬೆಳಗಿನ ಉಪಾಹಾರಕ್ಕೆ ಮತ್ತು ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಬೇಕಾಗುತ್ತದೆ. ವಿಶೇಷವಾಗಿ ಮಕ್ಕಳಿಗೆ ಹಾಲು ನೀಡಲಾಗುತ್ತದೆ. ಮೆದುಳು ಮತ್ತು ಮೂಳೆಗಳ ಬೆಳವಣಿಗೆಯಲ್ಲಿ ಹಸುವಿನ ಹಾಲು ಪ್ರಮುಖ ಪಾತ್ರ ವಹಿಸುತ್ತದೆ. ಹಸುವಿನ ಹಾಲಿನಲ್ಲಿ ವಿಟಮಿನ್-ಡಿ ಇದೆ. ಒಬ್ಬ ವ್ಯಕ್ತಿಯು ಪ್ರತಿದಿನ ಕೇವಲ ಒಂದು ಲೋಟ ಹಾಲು ಕುಡಿದರೆ, ಅವನ ದೇಹವು ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಪಡೆಯುತ್ತದೆ. ಇದು ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿದೆ. ಬಲವಾದ ಮೂಳೆಗಳು ಮತ್ತು ಹಲ್ಲುಗಳಿಗೆ ಇದು ಅತ್ಯಗತ್ಯ.
ಅರ್ಜೀರ್ಣ ಸಮಸ್ಯೆ : ಹಸುವಿನ ಹಾಲು ಕುಡಿಯುವುದರಿಂದ ಅಜೀರ್ಣ ಸಮಸ್ಯೆ ದೂರವಾಗುತ್ತದೆ. ವಿಟಮಿನ್ ಬಿ-12 ಹಸುವಿನ ಹಾಲಿನಲ್ಲಿ ಕಂಡುಬರುತ್ತದೆ. ಹಸುವಿನ ಹಾಲಿನಲ್ಲಿ 80% ಪ್ರೋಟೀನ್ ಕ್ಯಾಸಿನ್ ಇದೆ, ಇದು ದೇಹದಾದ್ಯಂತ ಕ್ಯಾಲ್ಸಿಯಂ ಮತ್ತು ಫಾಸ್ಫೇಟ್ ಅನ್ನು ಸಾಗಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಮಾತ್ರೆಗಳನ್ನು ನುಂಗಿ ಸುಸ್ತಾಗಿದ್ದೀರಾ.? ಚಿಂತಿಸಬೇಡಿ, ಈ ಧಾನ್ಯ ಸೇವಿಸಿ ಮಧುಮೇಹ ನಿಯಂತ್ರಿಸುತ್ತದೆ
ಕ್ಯಾನ್ಸರ್ ತಡೆಗಟ್ಟುತ್ತದೆ : ಹಸುವಿನ ಹಾಲು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಲಿನಲ್ಲಿ ವಿಟಮಿನ್-ಡಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಸಂಶೋಧನೆಯ ಪ್ರಕಾರ, ಹಾಲು ಮತ್ತು ಡೈರಿ ಉತ್ಪನ್ನಗಳ ಸೇವನೆಯು ಕೊಲೊರೆಕ್ಟಲ್ ಕ್ಯಾನ್ಸರ್, ಮೂತ್ರಕೋಶದ ಕ್ಯಾನ್ಸರ್, ಗ್ಯಾಸ್ಟ್ರಿಕ್ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ ಎನ್ನಲಾಗುತ್ತದೆ.
ಕಣ್ಣಿನ ಆರೋಗ್ಯ : ಹಸುವಿನ ಹಾಲಿನಲ್ಲಿ ವಿಟಮಿನ್-ಎ ಇದೆ, ಇದು ಕಣ್ಣಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವಿಟಮಿನ್-ಎ ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ವಿಟಮಿನ್-ಎ ಕೊರತೆಯು ರಾತ್ರಿ ಕುರುಡುತನ, ಕಣ್ಣಿನ ಬಿಳಿಯ ಮೇಲೆ ಕಲೆಗಳಂತಹ ಕಣ್ಣಿನ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡಬಹುದು.
ಹೃದಯದ ಆರೋಗ್ಯ : ಹಸುವಿನ ಹಾಲನ್ನು ಕುಡಿಯುವುದರಿಂದ ರಕ್ತಕೊರತೆ, ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಅವುಗಳಲ್ಲಿ ಇರುವ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳ ಹೆಚ್ಚಿನ ಪ್ಲಾಸ್ಮಾ ಮಟ್ಟಗಳು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:ಪ್ರತಿದಿನ ಎಳನೀರು ಸೇವಿಸಿದ್ರೆ ಏನಾಗುತ್ತೆ ಗೊತ್ತಾ?
ರೋಗನಿರೋಧಕ ಶಕ್ತಿ : ಹಸಿ ಹಸುವಿನ ಹಾಲಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸೂಕ್ಷ್ಮಜೀವಿಗಳ ಪ್ರೋಬಯಾಟಿಕ್‌ಗಳಿವೆ. ಹಸಿ ಹಾಲು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ.
ಮೂಳೆಗಳನ್ನು ಸ್ಟ್ರಾಂಗ್ ಮಾಡುತ್ತದೆ : ಹಸುವಿನ ಹಾಲು ಮೂಳೆಗಳನ್ನು ಆರೋಗ್ಯವಾಗಿಡಲು ಸಹ ಸಹಕಾರಿ. ಮೂಳೆಯ ಬೆಳವಣಿಗೆಗೆ ಹಾಲು ಸೇವನೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಮಕ್ಕಳು ಮತ್ತು ಯುವ ವಯಸ್ಕರ ಮೂಳೆ ಆರೋಗ್ಯಕ್ಕೆ ಹಾಲು ವಿಶೇಷವಾಗಿ ಒಳ್ಳೆಯದು.
ಕ್ಯಾಲ್ಸಿಯಂ : ಒಂದು ಕಪ್ ಹಸುವಿನ ಹಾಲನ್ನು ಸೇವಿಸಿದರೆ ಅದರಲ್ಲಿ 305 ಮಿಗ್ರಾಂ ಕ್ಯಾಲ್ಸಿಯಂ ಇರುತ್ತದೆ. ಪ್ರತಿದಿನ ಈ ಹಾಲನ್ನು ಕುಡಿದರೆ ಮೂಳೆ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತವೆ. ಇದು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಅಲ್ಲದೆ, ಹಾಲಿನಲ್ಲಿ ಪ್ರೋಟೀನ್, ವಿಟಮಿನ್ ಎ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.