ಬೆಂಗಳೂರು: ಸೌತೆಕಾಯಿ ಪ್ರತಿ ಋತುವಿನಲ್ಲೂ ಸಿಗುವ ಆಹಾರ ಪದಾರ್ಥವಾಗಿದೆ. ಸೌತೆಕಾಯಿ ವಿಟಮಿನ್ ಸಿ, ಬೀಟಾ ಕ್ಯಾರೋಟಿನ್ ನಂತಹ ಆಂಟಿ-ಆಕ್ಸಿಡೆಂಟ್ ಗಳನ್ನು ಹೊಂದಿರುವುದರಿಂದ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹದಲ್ಲಿ ಇರುವ ಸ್ವತಂತ್ರ ರಾಡಿಕಲ್ ಗಳನ್ನು ತೆಗೆದುಹಾಕುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಸೌತೆಕಾಯಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. 


COMMERCIAL BREAK
SCROLL TO CONTINUE READING

ಕಲ್ಲಂಗಡಿ ಜೊತೆಗೆ ಅದರ ಸಿಪ್ಪೆ-ಬೀಜಗಳು ಸಹ ನೀಡುತ್ತೆ ಆರೋಗ್ಯಕರ ಪ್ರಯೋಜನಗಳು


ಸೌತೆಕಾಯಿಗಳು 95% ನೀರನ್ನು ಹೊಂದಿರುತ್ತವೆ, ಇದು ಚಯಾಪಚಯವನ್ನು ಬಲಪಡಿಸುತ್ತದೆ. ಕೆಲವರು ಸೌತೆಕಾಯಿ ಸಿಪ್ಪೆಯನ್ನು ತೆಗೆಯುತ್ತಾರೆ. ಆದರೆ ಸೌತೆಕಾಯಿಯನ್ನು ಅದರ ಸಿಪ್ಪೆ ಸಮೇತ ತಿನ್ನುವುದರಿಂದ ಅದು ಮೂಳೆಗಳಿಗೆ ಬಹಳ ಪ್ರಯೋಜನಕಾರಿ.  ಸೌತೆಕಾಯಿ ಸಿಪ್ಪೆಯಲ್ಲಿ ಸಿಲಿಕಾ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತವೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಸೌತೆಕಾಯಿಯ ಜ್ಯೂಸ್ ತಯಾರಿಸಿ ಕೂಡ ಸೇವಿಸಬಹುದು. ಇದೂ ಸಹ ಮೆಟಬಾಲಿಸಂ ಜೊತೆಗೆ ನಿಮ್ಮ  ಮೂಳೆಗಳನ್ನು ಬಲಪಡಿಸುತ್ತದೆ.


ಬನ್ನಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ಸೌತೆಕಾಯಿ ರಸವನ್ನು ತಯಾರಿಸೋಣ...


ಸೌತೆಕಾಯಿ ರಸ ತಯಾರಿಸಲು ಬೇಕಾದ ಸಾಮಾಗ್ರಿಗಳು:


  • 1 ದೊಡ್ಡ ಸೌತೆಕಾಯಿ (ಅದನ್ನು ಕತ್ತರಿಸಿ ಹೋಳುಗಳಾಗಿ ಇರಿಸಿ)

  • 1 ನಿಂಬೆ ರಸ

  • 8-10 ಪುದೀನ ಎಲೆಗಳು

  • ½ ಟೀಸ್ಪೂನ್ ಜೀರಿಗೆ ಪುಡಿ

  • 3-4 ಕರಿಮೆಣಸು

  • ಸಣ್ಣ ತುಂಡು ಶುಂಠಿಯನ್ನು ಕತ್ತರಿಸಿ

  • ರುಚಿಗೆ ತಕ್ಕಂತೆ ಉಪ್ಪು.


ಕೋಮಲ ಪಾದಕ್ಕೆ ಮಸಾಜ್ ಮಾಡುವುದರ ಪ್ರಯೋಜನ ತಿಳಿದು ನೀವೂ ದಿಗ್ಬ್ರಮೆಗೊಳ್ಳುವಿರಿ


ಸೌತೆಕಾಯಿ ರಸ ತಯಾರಿಸುವ ವಿಧಾನ:
ಕತ್ತರಿಸಿದ ಸೌತೆಕಾಯಿಗಳು, ಶುಂಠಿ, ನಿಂಬೆ ರಸ, ಪುದೀನ ಎಲೆಗಳು, ಜೀರಿಗೆ ಮತ್ತು ಕರಿಮೆಣಸನ್ನು ಮಿಕ್ಸರ್ ಜಾರ್‌ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಅದನ್ನು ಸ್ಕ್ರೀನರ್‌ನಲ್ಲಿ ಇರಿಸುವ ಮೂಲಕ ಅದನ್ನು ಫಿಲ್ಟರ್ ಮಾಡಿ. ಗಾಜಿನೊಳಗೆ ಐಸ್ ಹಾಕಿ ರಸವನ್ನು ಹಾಕಿ. ನಿಮಗೆ ಐಸ್ ಬೇಡದಿದ್ದರೆ ಹಾಕಬೇಡಿ. ಪ್ರತಿದಿನ ಈ ರೀತಿ ಸೌತೆಕಾಯಿ ರಸ ತಯಾರಿಸಿ ಕುಡಿಯುವುದರಿಂದ ನಿಮ್ಮ ತೂಕ ಇಳಿಸುವುದರ ಜೊತೆಗೆ ರೋಗ ನಿರೋಧಕ ಶಕ್ತಿ ಬಲವಾಗಿರುತ್ತದೆ.