ಮೊಸರಿನೊಂದಿಗೆ ಬೆಲ್ಲ ಬೆರೆಸಿ ತಿನ್ನಿ!ಈ ಕಾಯಿಲೆಗಳಿಗೆ ಔಷಧಿಯೇ ಬೇಕಿಲ್ಲ
Curd with Jaggery Benefits :ಬೆಲ್ಲವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.ಇದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.ಮೊಸರು ಕ್ಯಾಲ್ಸಿಯಂ ಮತ್ತು ರಂಜಕವನ್ನು ಹೊಂದಿದ್ದು ಅದು ಆರೋಗ್ಯಕ್ಕೆ ಅವಶ್ಯಕವಾಗಿದೆ.
Curd with Jaggery Benefits:ಅನೇಕ ಜನರು ಮೊಸರು ಮತ್ತು ಬೆಲ್ಲವನ್ನು ಒಟ್ಟಿಗೆ ತಿನ್ನುತ್ತಾರೆ.ಕೇಳುವುದಕ್ಕೆ ಮೊಸರಿನೊಂದಿಗೆ ಬೆಲ್ಲ ಇದು ವಿಚಿತ್ರ ಕಾಂಬಿನೇಶನ್ ಅನಿಸಬಹುದು.ಆದರೆ, ವಾಸ್ತವವಾಗಿ ಮೊಸರಿನೊಂದಿಗೆ ಬೆಲ್ಲವನ್ನು ತಿನ್ನುವುದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಮೊಸರು ಮತ್ತು ಬೆಲ್ಲದಲ್ಲಿ ಅನೇಕ ಪೋಷಕಾಂಶಗಳಿವೆ.ದೇಹದಲ್ಲಿ ರಕ್ತ ಕಡಿಮೆ ಇದ್ದರೆ ಅಂದರೆ ರಕ್ತಹೀನತೆಯ ಸಮಸ್ಯೆ ಇದ್ದರೆ ಬೆಲ್ಲ ಮತ್ತು ಮೊಸರು ಸೇವಿಸುವುದು ಪ್ರಯೋಜನಕಾರಿ.ಬೆಲ್ಲವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.ಇದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.ಮೊಸರು ಕ್ಯಾಲ್ಸಿಯಂ ಮತ್ತು ರಂಜಕವನ್ನು ಹೊಂದಿದ್ದು ಅದು ಆರೋಗ್ಯಕ್ಕೆ ಅವಶ್ಯಕವಾಗಿದೆ.ಹಾಗಾದರೆ, ಮೊಸರು ಮತ್ತು ಬೆಲ್ಲವನ್ನು ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಾಗುವುದು.
ರಕ್ತದ ಕೊರತೆಯನ್ನು ನೀಗಿಸುತ್ತದೆ :
ದೇಹದಲ್ಲಿ ರಕ್ತ ಕಡಿಮೆ ಇರುವವರು ಅಂದರೆ ರಕ್ತಹೀನತೆಯಿಂದ ಬಳಲುತ್ತಿರುವವರು ಮೊಸರು ಮತ್ತು ಬೆಲ್ಲವನ್ನು ತಿನ್ನಬೇಕು.ಮೊಸರು ಮತ್ತು ಬೆಲ್ಲವನ್ನು ಪ್ರತಿದಿನ ಸೇವಿಸುವುದರಿಂದ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುತ್ತದೆ, ರಕ್ತಹೀನತೆಯ ಸಮಸ್ಯೆ ದೂರವಾಗುತ್ತದೆ.
ಜೀರ್ಣಕ್ರಿಯೆ ಸುಧಾರಿಸುತ್ತದೆ :
ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಮಲಬದ್ಧತೆ, ಹೊಟ್ಟೆ ಉಬ್ಬುವುದು,ವಾಂತಿ ಉಂಟಾದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ. ಪ್ರತಿದಿನ ಮೊಸರು ಮತ್ತು ಬೆಲ್ಲವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ :
ತೂಕವನ್ನು ಹೆಚ್ಚಾಗುತ್ತಿದೆ ಎಂದು ಚಿಂತಿಸುತ್ತಿದ್ದರೆ ನಿಮ್ಮ ದೈನಂದಿನ ಆಹಾರದಲ್ಲಿ ಮೊಸರು ಬೆಲ್ಲವನ್ನು ಸೇರಿಸಲು ಪ್ರಾರಂಭಿಸಿ.ಮೊಸರು ಮತ್ತು ಬೆಲ್ಲವನ್ನು ತಿನ್ನುವುದರಿಂದ ಹೊಟ್ಟೆಯು ಗಂಟೆಗಳ ಕಾಲ ತುಂಬಿರುತ್ತದೆ. ಇದು ತೂಕವನ್ನು ಸುಲಭವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಜೀರ್ಣಕಾರಿ ಸಮಸ್ಯೆಗಳನ್ನು ತಪ್ಪಿಸಲು ಬೇಸಿಗೆಯಲ್ಲಿ ಈ ಆಹಾರಗಳಿಂದ ಇರಲಿ ಅಂತರ!
ರೋಗನಿರೋಧಕ ಶಕ್ತಿ ಹೆಚ್ಚುತ್ತದೆ :
ನಿಮ್ಮ ರೋಗನಿರೋಧಕ ಶಕ್ತಿ ದುರ್ಬಲವಾಗಿದ್ದರೆ ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಮೊಸರು ಮತ್ತು ಬೆಲ್ಲವನ್ನು ಸೇವಿಸಬೇಕು.ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಶೀತ ಮತ್ತು ಕೆಮ್ಮಿನಂತಹ ರೋಗಗಳನ್ನು ತಡೆಯುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.