Curry Leaves For Long Hair : ಪ್ರತಿಯೊಬ್ಬ ಮಹಿಳೆಯೂ ತನ್ನ ಕೂದಲು ಉದ್ದ, ಕಪ್ಪು ಮತ್ತು ದಪ್ಪವಾಗಿರಬೇಕು ಎಂದು ಬಯಸುತ್ತಾರೆ.ಆದರೆ ಮಾಲಿನ್ಯ, ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯಿಂದ ಕೂದಲು ಉದುರುವುದು, ಕಿರಿಯ ವಯಸ್ಸಿನಲ್ಲಿ ಕೂದಲು ಬಿಳಿಯಾಗುವುದು ಮುಂತಾದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ತಮ್ಮ ಕೂದಲನ್ನು ಉದ್ದ ಮತ್ತು ದಪ್ಪವಾಗಿಸಲು, ಮಹಿಳೆಯರು ವಿವಿಧ ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ.ಆದರೆ ಇವು ನಿರೀಕ್ಷಿತ ಫಲಿತಾಂಶವನ್ನು ನೀಡುವುದಿಲ್ಲ. ಇನ್ನು ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಉತ್ಪನ್ನಗಳು ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ. ಇದು ಕೂದಲಿಗೆ ಹಾನಿ ಉಂಟು ಮಾಡುತ್ತದೆ. ಹಾಗಾಗಿ ಕೂದಲಿನ ಸಮಸ್ಯೆಗಳ ಪರಿಹಾರಕ್ಕೆ ಮನೆಮದ್ದುಗಳ ಸಹಾಯ  ಪಡೆದುಕೊಳ್ಳಬಹುದು. ಇದರಿಂದ ಕೂದಲು ಉದ್ದವಾಗಿ ದಪ್ಪವಾಗಿ ಬೆಳೆಯುತ್ತದೆ. 


COMMERCIAL BREAK
SCROLL TO CONTINUE READING

ಕರಿಬೇವಿನ ಪ್ರಯೋಜನ  : 
ನಾವಿಲ್ಲಿ ಮಾತನಾಡುತ್ತಿರುವುದು ಕರಿಬೇವಿನ ಬಗ್ಗೆ. ಕರಿಬೇವಿನ ಎಲೆಗಳು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಕೂದಲಿನ ಆರೋಗ್ಯಕ್ಕೂ ಸಹಕಾರಿಯಾಗಿದೆ.  ಕರಿಬೇವಿನಲ್ಲಿರುವ ಗುಣಗಳು ಕೂದಲು ಉದುರುವುದನ್ನು ತಡೆಯುತ್ತದೆ ಮತ್ತು ಕೂದಲು  ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಇನ್ನು ಕರಿಬೇವಿನ ಎಲೆಗಳೊಂದಿಗೆ  ನೆಲ್ಲಿಕಾಯಿಯನ್ನು ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲಿಗೆ ಡಬಲ್ ಲಾಭವಾಗುವುದು. ಇವೆರಡನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದ್ದವಾಗಿ ಬೆಳೆಯುವುದಲ್ಲದೆ  ಬುಡದಿಂದಲೇ ಕಪ್ಪಾಗುತ್ತದೆ. 


ಇದನ್ನೂ ಓದಿ : ಮಧುಮೇಹದಿಂದ ತೂಕ ಇಳಿಕೆವರೆಗೆ ತುಂಬಾ ಪ್ರಯೋಜನಕಾರಿ ಸೌತೆಕಾಯಿ


ಕರಿಬೇವಿನ ಎಲೆಗಳು ಮತ್ತು  ನೆಲ್ಲಿಕಾಯಿ ಪ್ರಯೋಜನ ?: 
ಕರಿಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ನೆತ್ತಿಯ ಮೇಲೆ ಸಂಗ್ರಹವಾಗಿರುವ ಕೊಳೆ ಮತ್ತು ತಲೆಹೊಟ್ಟನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಪ್ರೋಟೀನ್ ಮತ್ತು ಉತ್ಕರ್ಷಣ ನಿರೋಧಕಗಳು ಇದರಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದು ಕೂದಲಿಗೆ ಒಳಗಿನಿಂದ ಪೋಷಣೆ ನೀಡಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಫ್ರೀ ರಾಡಿಕಲ್ ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.ಇದರಲ್ಲಿ ವಿಟಮಿನ್-ಬಿ ಕೂಡಾ ಇದ್ದು ಬಿಳಿ ಕೂದಲು ಕಪ್ಪಾಗುತ್ತದೆ.ಕರಿಬೇವಿನ ಎಲೆಗಳನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಕೂದಲನ್ನು ಉದ್ದ, ದಪ್ಪ ಮತ್ತು ಹೊಳೆಯುವಂತೆ ಮಾಡಲು ಇದು ಸಹಾಯ ಮಾಡುತ್ತದೆ. ನೆಲ್ಲಿಕಾಯಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಕೂದಲಿಗೆ ಪೋಷಣೆ ನೀಡಿ, ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.


ಕೂದಲು ಬೆಳೆಯಲು ಕರಿಬೇವು ಮತ್ತು ನೆಲ್ಲಿಕಾಯಿಯನ್ನು ಬಳಸುವುದು ಹೇಗೆ? : 
ಕೂದಲು ಬೆಳೆಯಲು ಕರಿಬೇವಿನ ಸೊಪ್ಪು ಮತ್ತು ನೆಲ್ಲಿಕಾಯಿಯ ಹೇರ್ ಮಾಸ್ಕ್ ತಯಾರಿಸಿ  ಕೂದಲಿಗೆ ಹಚ್ಚಬಹುದು. ಈ ಹೇರ್ ಮಾಸ್ಕ್ ಗಾಗಿ ನೆಲ್ಲಿಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ಇದಾದ ನಂತರ ಅರ್ಧ ಕಪ್ ಕರಿಬೇವಿನ ಸೊಪ್ಪು ಮತ್ತು ನೆಲ್ಲಿಕಾಯಿಯನ್ನು ಮಿಕ್ಸಿಯಲ್ಲಿ ಹಾಕಿ  ರುಬ್ಬಿಕೊಳ್ಳಬೇಕು. ಅದರಲ್ಲಿ ಒಂದು ಚಮಚ ಮೆಂತ್ಯೆ ಬೀಜಗಳನ್ನು  ಬೆರೆಸಬಹುದು. ಈಗ ಈ ಪೇಸ್ಟ್ ಅನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಸಂಪೂರ್ಣವಾಗಿ ಹಚ್ಚಬೇಕು. ಸುಮಾರು 1-2 ಗಂಟೆಗಳ ಕಾಲ ಹಾಗೆಯೇ ಬಿಡಬೇಕು. ನಂತರ ಸೌಮ್ಯವಾದ ಶಾಂಪೂ ಸಹಾಯದಿಂದ ಕೂದಲನ್ನು ತೊಳೆಯಿರಿ. ಈ ಮಿಶ್ರಣವನ್ನು ವಾರಕ್ಕೆ 1-2 ಬಾರಿ ಹಚ್ಚುವುದರಿಂದ ಕೂದಲು ಶೀಘ್ರದಲ್ಲೇ ಉದ್ದನೆ ದಪ್ಪಗಾಗಿ ಬೆಳೆಯುವುದಲ್ಲದೆ ಬುಡದಿಂದಲೇ ಕಪ್ಪಾಗುವುದು. 


ಇದನ್ನೂ ಓದಿ : ದಾಳಿಂಬೆ ಸಿಪ್ಪೆಯ ಪ್ರಯೋಜನಗಳೇನು ಗೊತ್ತಾ?https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.