ಬೆಂಗಳೂರು : ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಆರೋಗ್ಯ ಹದಗೆಡುತ್ತದೆ ಎನ್ನುವ ಸತ್ಯ ಎಲ್ಲರಿಗೂ ತಿಳಿದಿರುವಂಥದ್ದು. ಕೊಲೆಸ್ಟ್ರಾಲ್ ಹೆಚ್ಚಾದರೆ ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ಅನೇಕ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹೃದಯಾಘಾತ, ಹೃದಯ ವೈಫಲ್ಯ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ವೆಸೆಲ್ ರೋಗ ಮುಂತಾದ ಅಪಾಯಗಳು ಎದುರಾಗುತ್ತವೆ. ಈ ವಿಶೇಷ ಹಣ್ಣು ತಿನ್ನುವ ಮೂಲಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಸುಲಭವಾಗಿ ಹೋಗಲಾಡಿಸಬಹುದು.  


COMMERCIAL BREAK
SCROLL TO CONTINUE READING

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಈ ಹಣ್ಣುಗಳನ್ನು ಸೇವಿಸಿ : 
ಪ್ರಸಿದ್ಧ ಆಹಾರ ತಜ್ಞ ಆಯುಷಿ ಯಾದವ್ ಹೇಳುವಂತೆ, ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಆವಕಾಡೊ ಹಣ್ಣನ್ನು  ಸೇವಿಸಬಹುದು. ಇದು ದುಬಾರಿ ಹಣ್ಣು, ಆದರೆ ಕಳೆದ ಕೆಲವು ವರ್ಷಗಳಿಂದ ಈ ಹಣ್ಣನ್ನು ತಿನ್ನುವ ಪ್ರವೃತ್ತಿ ಹೆಚ್ಚಾಗಿದೆ. ಇದು ಹೃದಯದ ಆರೋಗ್ಯ, ಮತ್ತು ಕಣ್ಣಿನ ಆರೋಗ್ಯಕ್ಕೆ ಬಹಳ ಮುಖ್ಯ.  ದೇಹದ ಒಟ್ಟಾರೆ ಬೆಳವಣಿಗೆಗೆ ಕೂಡಾ ಈ ಹಣ್ಣು ಸಹಾಯ ಮಾಡುತ್ತದೆ.


ಇದನ್ನೂ ಓದಿ : Bubble Tea : ಗೂಗಲ್‌ ಡೂಡಲ್‌ನಲ್ಲಿ ಕಾಣಿಸಿಕೊಂಡ ʼಬಬಲ್‌ ಟೀʼ ಮಹತ್ವ ನಿಮಗೆ ಗೊತ್ತಾ..!


ಆವಕಾಡೊದಲ್ಲಿ ಕಂಡುಬರುವ ಪೋಷಕಾಂಶಗಳು :
ಮಧ್ಯಮ ಗಾತ್ರದ ಆವಕಾಡೊದಲ್ಲಿ ಸುಮಾರು 240 ಕ್ಯಾಲೋರಿಗಳು, 13 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 3 ಗ್ರಾಂ ಪ್ರೋಟೀನ್, 22 ಗ್ರಾಂ ಫ್ಯಾಟ್, (15 ಗ್ರಾಂ ಮೊನೊಸಾಚುರೇಟೆಡ್, 4 ಗ್ರಾಂ ಪಾಲಿ ಮೊನೊಸಾಚುರೇಟೆಡ್, 3 ಗ್ರಾಂ ಸ್ಯಾಚುರೇಟೆಡ್), 10 ಗ್ರಾಂ ಫೈಬರ್ ಮತ್ತು 11 ಮಿಲಿಗ್ರಾಂ ಸೋಡಿಯಂ ಇರುತ್ತದೆ. ಇಷ್ಟೆಲ್ಲಾ ಪೋಷಕಾಂಶಗಳನ್ನು  ಹೊಂದಿರುವ ಈ ಹಣ್ಣು ಕೊಲೆಸ್ಟ್ರಾಲ್ ಕಡಿಮೆ ಮಾಡಲು  ಸಹಾಯ ಮಾಡುತ್ತದೆ. 


ಪ್ರತಿದಿನ ಆವಕಾಡೊ ತಿನ್ನುವುದರಿಂದ ಆಗುವ ಪ್ರಯೋಜನಗಳು :
ಸುಮಾರು 6 ತಿಂಗಳ ಕಾಲ ಆವಕಾಡೊ ಹಣ್ಣನ್ನು ತಿನ್ನಿಸುವ ಮೂಲಕ  ಅನೇಕ ಜನರ ಮೇಲೆ ಸಂಶೋಧನೆ ನಡೆಸಲಾಯಿತು. ನಂತರ ಪ್ರತಿಯೊಬ್ಬರ ಆರೋಗ್ಯದ ಮೇಲೆ ನಿಗಾ ಇಡಲಾಯಿತು. ಈ ರೀತಿ ಮಾಡುವುದರಿಂದ ಸೊಂಟ ಮತ್ತು ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ ಮತ್ತು ರಕ್ತನಾಳಗಳಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವೂ ಕಡಿಮೆಯಾಗುತ್ತದೆ ಎನ್ನುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.   ತೂಕ ಕಳೆದುಕೊಳ್ಳಲು ಕೂಡಾ ಇದು ಸಹಾಯ ಮಾಡುತ್ತದೆ. 


ಇದನ್ನೂ ಓದಿ : ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಬೇಕೆ? ನಿಮ್ಮ ನಿಯಮಿತ ಆಹಾರದಲ್ಲಿರಲಿ ಈ ಸಂಗತಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.