Eggs and heart disease : ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಂಭವಿಸುವ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ.  ಅತಿ ಕಿರಿಯ ವಯಸ್ಸಿನವರು ಕೂಡಾ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಇದ್ದಕ್ಕಿದ್ದಂತೆಯೇ ಕುಸಿದು ಬೀಳುವುದು, ಆಟವಾಡುತ್ತಿದ್ದಂತೆಯೇ ಉಸಿರು ನಿಲ್ಲುವುದು, ಡಾನ್ಸ್ ಮಾಡುತ್ತಿರುವಾಗ ಹೃದಯ ಸ್ತಬ್ಧವಾಗುವುದು ಇಂಥ ಘಟನೆಗಳನ್ನು ಪದೇ ಪದೇ ಕೇಳುತ್ತಿರುತ್ತೇವೆ. ಈ ಸಂದರ್ಭಗಳಲ್ಲಿ ಮನಸ್ಸಿನಲ್ಲಿ ನಾನಾ ಪ್ರಶ್ನೆಗಳು ಓಡಾಡುತ್ತವೆ.  ಹೃದಯಾಘಾತಕ್ಕೆ ಕಾರಣ ಹಲವು ಇರಬಹುದು. ಅದರಲ್ಲಿ ನಾವು ಸೇವಿಸುವ ಆಹಾರ ಕೂಡಾ ಸೇರಿದೆ. ಯಾವ ರೀತಿಯ ಆಹಾರ ಹೃದಯಾಘಾತಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಕೂಡಾ ಬಹಳ ಮುಖ್ಯವಾಗುತ್ತದೆ. ಹೃದಯಾಘಾತವನ್ನು ತಪ್ಪಿಸಲು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎನ್ನುವುದನ್ನು ತಿಳಿದುಕೊಳ್ಳುವುದು ಕೂಡಾ ಬಹಳ ಮುಖ್ಯವಾಗುತ್ತದೆ. ಮೊಟ್ಟೆ ಸೇವನೆಗೂ ಹೃದಯಾಘಾತಕ್ಕೂ ಸಂಬಂಧವಿದೆ ಎಂದು ತಿಳಿದರೆ ಖಂಡಿತವಾಗಿಯೂ ಅಚ್ಚರಿಯಾಗಬಹುದು. 


COMMERCIAL BREAK
SCROLL TO CONTINUE READING

ಕೋಳಿ ಮಾಂಸ, ಮೊಟ್ಟೆಯ ಪ್ರೋಟೀನ್ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಅದೇನೆಂದರೆ ಅವುಗಳಲ್ಲಿ ಕೊಲೆಸ್ಟ್ರಾಲ್ ಪ್ರಮಾಣವೂ ಅಧಿಕವಾಗಿರುತ್ತದೆ. ಅಂದಹಾಗೆ, ಮೊಟ್ಟೆಗಳಲ್ಲಿನ ಕೊಲೆಸ್ಟ್ರಾಲ್ ಮಟ್ಟವು ಇತರ ಆಹಾರ ಪದಾರ್ಥಗಳಿಗಿಂತ ಬಹಳ ಹೆಚ್ಚಿಲ್ಲ. ಆದರೂ ಕೂಡಾ ಮೊಟ್ಟೆಗೂ ಹೃದ್ರೋಗಕ್ಕೂ ಸಂಬಂಧವಿದೆ ಎಂಬುದು ಕೆಲವು ಅಧ್ಯಯನಗಳಲ್ಲಿ ಬಹಿರಂಗವಾಗಿದೆ.


ಇದನ್ನೂ ಓದಿ : Sexual health : ಸಂಗಾತಿಯೊಂದಿಗೆ ತೃಪ್ತಿಕರ ಲೈಂಗಿಕ ಜೀವನ ನಡೆಸಲು 6 ಮಾರ್ಗಗಳು


ಆಹಾರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮೊಟ್ಟೆಗಳನ್ನು ಸೇರಿಸುವುದರಿಂದ, ಪಾರ್ಶ್ವವಾಯು ಮತ್ತು ಕಣ್ಣಿನ ಗಂಭೀರವಾದ ಕಾಯಿಲೆಗಳಾದ ಮ್ಯಾಕ್ಯುಲರ್ ಡಿಜೆನರೇಶನ್ ಅನ್ನು ದೂರವಿಡುವುದು ಸಾಧ್ಯವಾಗುತ್ತದೆ ಎನ್ನುವುದನ್ನು ಕೂಡಾ ಈ ಅಧ್ಯಯನದಲ್ಲಿ ಬಹಿರಂಗ ಪಡಿಸಲಾಗಿದೆ. 


ಹೆಲ್ತ್‌ಲೈನ್‌ನ ವರದಿಯ ಪ್ರಕಾರ, ಒಂದು ದಿನಕ್ಕೆ ಒಂದು ಮೊಟ್ಟೆಯನ್ನು ತಿಂದರೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದಿಲ್ಲ. ಆದರೆ ಮೊಟ್ಟೆಗಳನ್ನು ಅತಿಯಾಗಿ ತಿನ್ನುವುದು ಹೃದಯದ ಆರೋಗ್ಯಕ್ಕೆ ಹಾನಿಕರವಾಗಿ ಸಾಬೀತಾಗುವುದು.  ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಇದೆ ಎನ್ನುವುದು ತಜ್ಞರು ಅಭಿಪ್ರಾಯ. ಹೀಗಾಗಿ ಕೊಲೆಸ್ಟ್ರಾಲ್ ಇದ್ದವರು, ಹೃದ್ರೋಗ ಇರುವವರು ಮೊಟ್ಟೆ ಸೇವನೆಯ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಮುನ್ನೆಚ್ಚರಿಕೆಯಾಗಿ ಮೊಟ್ಟೆಯಿಂದ ದೂರ ಇರುವುದೇ ಸೂಕ್ತ. ಇನ್ನು ಮೊಟ್ಟೆ ತಿನ್ನಲೇ ಬೇಕು ಎಂದಿದ್ದರೆ ಅದರ ಮೊಟ್ಟೆಯ ಬಿಳಿಭಾಗವನ್ನು ಮಾತ್ರ ತಿನ್ನುವುದು ಉತ್ತಮ ಎಂದು ಹೇಳಲಾಗುತ್ತದೆ. ಮೊಟ್ಟೆಯ ಬಿಳಿಯಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ.


ಇದನ್ನೂ ಓದಿ : Quick Glowing skin tips : ಹಾಲಿನಂತ ತ್ವಚೆ ಪಡೆಯಲು 3 ಸೂಪರ್‌ ಟಿಪ್ಸ್‌..! ಟ್ರೈ ಮಾಡಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.