ಬೆಂಗಳೂರು : ನಡಿಗೆಯು ಸುಲಭವಾದ ವ್ಯಾಯಾಮವಾಗಿದೆ. ಇದು ನಿಮ್ಮನ್ನು ಆರೋಗ್ಯವಾಗಿಡಲು ನಾವು ಅನುಸರಿಸಬಹುದಾದ ಸುಲಭ ಮಾರ್ಗವಾಗಿದೆ.  ಹೆಚ್ಚು ಸಕ್ರಿಯ ಜೀವನಶೈಲಿಗೆ ವಾಕಿಂಗ್ ಉತ್ತಮ ಮಾರ್ಗವಾಗಿದೆ. ವಾಕಿಂಗ್ ಮತ್ತು ತೂಕ ನಷ್ಟದ ನಡುವೆ ದೀರ್ಘಕಾಲದ ಸಂಬಂಧವಿದೆ. ಏಕೆಂದರೆ ವಾಕಿಂಗ್ ಪರಿಣಾಮಕಾರಿಯಾಗಿ ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ. ನಿಯಮಿತ ನಡಿಗೆಯು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.  ವ್ಯಕ್ತಿಯ ಆಲೋಚನೆಯನ್ನು ಸುಧಾರಿಸುತ್ತದೆ. ಆತಂಕದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎನ್ನುವುದನ್ನು ಅಧ್ಯಯನಗಳು ಸಾಬೀತು ಮಾಡಿವೆ.  ಆದರೆ ಪ್ರತಿದಿನ 10 ಸಾವಿರ ಹೆಜ್ಜೆಗಳನ್ನು ನಡೆಯುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.


COMMERCIAL BREAK
SCROLL TO CONTINUE READING

2 ಲಕ್ಷಕ್ಕೂ ಅಧಿಕ ಜನರ ಮೇಲೆ ಅಧ್ಯಯನ : 
ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಮೆಟಾ- ಅನಾಲಿಸಿಸ್ ಪ್ರಕಾರ ಪ್ರಪಂಚದಾದ್ಯಂತ 2,26,000 ಕ್ಕೂ ಹೆಚ್ಚು  ಜನರನ್ನು ಒಳಗೊಂಡ 17 ದೀರ್ಘಾವಧಿಯ ಅಧ್ಯಯನಗಳಿಂದ ಡೇಟಾವನ್ನು ತೆಗೆದುಕೊಳ್ಳಲಾಗಿದೆ. ಈ ಅಧಯ್ಯನದಲ್ಲಿ ಭಾಗವಹಿಸಿದ್ದವರ ಸರಾಸರಿ ವಯಸ್ಸು 64 ವರ್ಷಗಳು. ಸಂಶೋಧಕರು ದೈನಂದಿನ ಹೆಜ್ಜೆಗಳ ಸಂಖ್ಯೆ ಮತ್ತು  ಮೃತ್ಯುವಿಗೆ ಕಾರಣವಾಗುವ ಎಲ್ಲಾ ಅಂಶಗಳನ್ನು ಈ ಅಧ್ಯಯನದಲ್ಲಿ ಗಣನೆಗೆ ತೆಗೆದುಕೊಂಡಿದ್ದಾರೆ. 


ಇದನ್ನೂ ಓದಿ : ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಗೆ ಈ ಐದು ಬೇಳೆಗಳು ನಿಮ್ಮ ಆಹಾರದಲ್ಲಿರಲಿ!


ಅಧ್ಯಯನದಲ್ಲಿ ಬೆಳಕಿಗೆ ಬಂದ  ವಿಚಾರ : 
ಮೃತ್ಯುವಿನ ಅಪಾಯವನ್ನು ಕಡಿಮೆ ಮಾಡಲು ದಿನಕ್ಕೆ 3,867 ಹೆಜ್ಜೆ ನಡೆದರೆ ಸಾಕು ಎನ್ನುವ ಅಂಶ ಈ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಅಲ್ಲದೆ, ದಿನಕ್ಕೆ ಕೇವಲ 2,337 ಹೆಜ್ಜೆ ನಡೆದರೆ ಹೃದಯ ಕಾಯಿಲೆಯಿಂದ ಸಾಯುವ ಅಪಾಯ ಕಡಿಮೆಯಾಗುತ್ತದೆ ಎನ್ನಲಾಗಿದೆ. ಆದರೆ ಎಷ್ಟು ಜಾಸ್ತಿ ನಡೆಯುತ್ತೆವೆಯೋ  ಅಷ್ಟು ಹೆಚ್ಚು ಆರೋಗ್ಯಕ್ಕೆ ಸಹಾಯವಾಗುವುದು. ಪ್ರತಿ ಹೆಚ್ಚುವರಿ 1,000  ಹೆಜ್ಜೆಗಳು  ಮೃತ್ಯುವಿನ ಅಪಾಯವನ್ನು 15% ಕಡಿಮೇ ಮಾಡುತ್ತವೆ. ಹೆಚ್ಚುವರಿ 500  ಹೆಜ್ಜೆಗಳು ಹೃದ್ರೋಗದಿಂದ ಸಾಯುವ ಅಪಾಯವನ್ನು 7% ದಷ್ಟು ಕಡಿಮೆ ಮಾಡುತ್ತದೆ. 


ದೈನಂದಿನ ಹೆಜ್ಜೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಹೇಗೆ?
ಸಾಧ್ಯವಾದಾಗಲೆಲ್ಲಾ ಮೆಟ್ಟಿಲುಗಳನ್ನು ಬಳಸಿ, ಎಲಿವೇಟರ್ ಬದಲಿಗೆ ಮೆಟ್ಟಿಲುಗಳನ್ನು ಬಳಸಿ. ಇದು ನಿಮ್ಮ ದೈನಂದಿನ  ಹೆಜ್ಜೆಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಳು ಸಹಾಯ ಮಾಡುತ್ತದೆ. 


ನಿತ್ಯ ವಾಕಿಂಗ್ :  
ನಿಮ್ಮ ನಿತ್ಯದ ಜೀವನದಲ್ಲಿ ವಾಕಿಂಗ್ ಗೆ ಇಂತಿಷ್ಟೇ ಸಮಯವನ್ನು ಮೀಸಲಾಗಿಟ್ಟುಕೊಳ್ಳಿ. ಉದ್ಯಾನವನದಲ್ಲಿ ಅಥವಾ ನಿಮ್ಮ ಮನೆಯ ಸುತ್ತ ಮುತ್ತ ಇಂತಿಷ್ಟು ಹೊತ್ತು ಎಂದು ನಿಗದಿ ಮಾಡಿಕೊಂಡು ವಾಕಿಂಗ್ ಮಾಡಿ. 


ಇದನ್ನೂ ಓದಿ : ಅಡುಗೆ ಮಾಡುವಾಗ ಈ ತರಕಾರಿಗಳ ಸಿಪ್ಪೆ ತೆಗೆಯದಿರಿ: ಅತಿ ಹೆಚ್ಚು, ಸಮೃದ್ಧ ಪೋಷಕಾಂಶಗಳಿರೋದು ಸಿಪ್ಪೆಯಲ್ಲೇ…


ನಿಮ್ಮ ಕಚೇರಿಯ ಸುತ್ತಲೂ ನಡೆಯಿರಿ:
ನಿಮ್ಮ ಕೆಲಸದ ಸ್ಥಳದಲ್ಲಿ ಕೂಡಾ ಪ್ರತಿ ಗಂಟೆಗೊಮ್ಮೆ ಬ್ರೇಕ್ ತೆಗೆದುಕೊಳ್ಳಿ.  ಒಂದಷ್ಟು ದೂರ ನಡೆದಾಡಿ ಬನ್ನಿ. ಇದು ನಿಮ್ಮ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಕಾಲುಗಳನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ.


ವ್ಯಾಯಾಮ ಮಾಡಿ :
ವಾಕಿಂಗ್, ಜಾಗಿಂಗ್, ಓಟ ಅಥವಾ ನೃತ್ಯದಂತಹ ತಾಲೀಮು ಅಥವಾ ವ್ಯಾಯಾಮ ಮಾಡಿ. ಇದು ನಿಮಗೆ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ.  


ಒಮ್ಮೆಲೇ ಹೆಚ್ಚು ನಡಿಗೆ ನಿಮಗೆ ಸಾಧ್ಯವಾಗದೆ ಹೋದರೆ, ನಿಧಾನವಾಗಿ ವಾಕಿಂಗ್ ಆರಂಭಿಸಿ. ಕ್ರಮೇಣ ನಿಮ್ಮ ದೈನಂದಿನ ಹೆಜ್ಜೆಗಳ ಸಂಖ್ಯೆಯನ್ನು ಹೆಚ್ಚಿಸಿ. 


ಇದನ್ನೂ ಓದಿ : ಚಳಿಗಾಲದಲ್ಲಿ ಮಧುಮೇಹಿಗಳಿಗೆ ಈ 5 ಸೂಪ್ಗಳು ಸೂಪರ್ ಫುಡ್ ಗೆ ಸಮಾನ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.