ಬೆಂಗಳೂರು : ಮೂತ್ರಪಿಂಡ ಅಥವಾ ಕಿಡ್ನಿ ನಮ್ಮ ದೇಹದ ಬಹಳ ಮುಖ್ಯ ಅಂಗ. ಮೂತ್ರಪಿಂಡ ಆರೋಗ್ಯವಾಗಿದ್ದರೆ, ದೇಹ ಸರಿಯಾಗಿ ಕಾರ್ಯ ನಿರ್ವಹಿಸುವುದು ಸಾಧ್ಯವಾಗುತ್ತದೆ. ದೇಹದಿಂದ ಹೆಚ್ಚುವರಿ ದ್ರವವನ್ನು ಹೊರ ಹಾಕುವ ಕೆಲಸವನ್ನು ಮೂತ್ರಪಿಂಡ ಮಾಡುತ್ತದೆ. ಇದು ರಕ್ತವನ್ನು ಶುದ್ಧಗೊಳಿಸುತ್ತದೆ. ಆದರೆ, ಮೂತ್ರ ಪಿಂಡದ ಸ್ವಾಸ್ಥ್ಯವೇ ಕೆಟ್ಟರೆ ಅದು ದೇಹದ ಇತರ ಅಂಗಗಳ ಮೇಲೆ ಕೂಡಾ ಪರಿಣಾಮ ಬೀರುತ್ತದೆ.  ಮೂತ್ರಪಿಂಡದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದಂತೆಯೇ ಕಾಲುಗಳಲ್ಲಿ ಅದರ ಲಕ್ಷಣಗಳು ಗೋಚರಿಸುತ್ತವೆ. 


COMMERCIAL BREAK
SCROLL TO CONTINUE READING

ಕಾಲುಗಳಲ್ಲಿ ಕಾಣಿಸಿಕೊಳ್ಳುವ ನೋವು : 
ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದಾಗ ನಮ್ಮ ರಕ್ತದಲ್ಲಿ ವಿಷ ಮತ್ತು ಕೊಳಕು ಸಂಗ್ರಹಗೊಳ್ಳಲು ಪ್ರಾರಂಭವಾಗುತ್ತದೆ.  ಇದರಿಂದಾಗಿ ದೇಹದ ಎಲ್ಲಾ ಭಾಗಗಳಿಗೂ ಸರಿಯಾಗಿ ರಕ್ತ ಪೂರೈಕೆ ಆಗುವುದಿಲ್ಲ. ದೇಹದಲ್ಲಿ ಶಕ್ತಿಯ ಕೊರತೆ ಉಂಟಾಗುತ್ತದೆ. ಸ್ವಲ್ಪ ನಡೆದರೂ ಅಥವಾ ಯಾವುದೇ ಸಣ್ಣ ಕೆಲಸ ಮಾಡಿದರೂ ಸುಸ್ತಾಗುತ್ತದೆ. ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದು ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದರ ಸ್ಪಷ್ಟ ಸಂಕೇತವಾಗಿದೆ. 


ಇದನ್ನೂ ಓದಿ : Weight Loss Tips:ಈ ಸಿರಿಧಾನ್ಯದ ಸೇವನೆಯಿಂದ ದೇಹದ ಹೆಚ್ಚುವರಿ ಕೊಬ್ಬು ಸುಡುತ್ತದೆ


ಒಣ ಮತ್ತು ಒರಟು ಚರ್ಮ
ಮೂತ್ರಪಿಂಡಗಳು ದೇಹದಿಂದ ವಿಷವನ್ನು ಹೊರ ಹಾಕಲು ಸಾಧ್ಯವಾಗದೇ  ಹೋದಾಗ, ದೇಹದಲ್ಲಿ ಕೆಂಪು ರಕ್ತ ಕಣಗಳ ವೃದ್ದಿಯಾಗುವುದಿಲ್ಲ. ಇದು ದುರ್ಬಲ ಮೂಳೆಗಳು ಮತ್ತು ಒರಟು ಚರ್ಮಕ್ಕೆ ಕಾರಣವಾಗುತ್ತದೆ.  ಚರ್ಮವು ಅದರ ಬಣ್ಣವನ್ನು ಕಳೆದುಕೊಳ್ಳಲು ಪ್ರಾರಂಭಿಸಿ, ಚರ್ಮವು ನಿರ್ಜೀವ ಮತ್ತು ಶುಷ್ಕವಾಗುತ್ತಾ ಹೋಗುತ್ತದೆ. ಒಣ ಮತ್ತು ಒರಟು ಚರ್ಮ ಕೂಡಾ ಮೂತ್ರಪಿಂಡ ಕಾಯಿಲೆಯ ಪ್ರಮುಖ ಲಕ್ಷಣವಾಗಿದೆ.


ಸ್ನಾಯು ಸೆಳೆತ
ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸಲು ಅಸಮರ್ಥವಾದಾಗ  ದೇಹದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.  ಇದರಿಂದಾಗಿ ಸ್ನಾಯು ಸೆಳೆತದ ಸಮಸ್ಯೆ ಉಂಟಾಗುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗಿ, ರಂಜಕವನ್ನು ಸರಿಯಾಗಿ ನಿಯಂತ್ರಿಸಲು ಸಾಧ್ಯವಾಗದಿದ್ದಾಗ, ಸ್ನಾಯು ಸೆಳೆತ ಪ್ರಾರಂಭವಾಗುತ್ತದೆ.  


ಪಾದಗಳಲ್ಲಿ ನೋವು
ದೇಹದಲ್ಲಿ ಟಾಕ್ಸಿನ್‌ಗಳು ಅಧಿಕವಾಗಿ ಸಂಗ್ರಹವಾದಾಗ, ಅದು ನೇರವಾಗಿ ಪಾದಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಪಾದಗಳು ಊದಿಕೊಳ್ಳುತ್ತವೆ. ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸಲು ಅಸಮರ್ಥವಾದಾಗ   ಸೋಡಿಯಂ ರಿಟೆನ್ಶನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ.


ಇದನ್ನೂ ಓದಿ : Cabbage: ಚಳಿಗಾಲದಲ್ಲಿ ಎಲೆಕೋಸು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ?


ಪಾದಗಳು ಊದಿಕೊಳ್ಳುವುದು  
ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದಾಗ  ಸೋಡಿಯಂ ರಿಟೆನ್ಶನ್ ನಿಂದಾಗಿ ಪಾದಗಲ್ಲಿ ನೋವು ಕಾಣಿಸಿಕೊಳ್ಳುತ್ತದೆ.  ಕಾಲ್ಬೆರಳುಗಳು ಊದಿಕೊಳ್ಳುತ್ತವೆ. ಪಾದಗಳಲ್ಲಿ ಕಾಣಿಸಿಕೊಳ್ಳುವ ಊತ ಹೃದ್ರೋಗ, ಪಿತ್ತಜನಕಾಂಗದ ಕಾಯಿಲೆ ಮತ್ತು ರಕ್ತನಾಳದ ಸಮಸ್ಯೆಗಳಿಂದ ಕೂಡ ಉಂಟಾಗುತ್ತದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ, ಮೂತ್ರಪಿಂಡದ ವೈಫಲ್ಯದ ಕಾರಣದಿಂದಲೇ ಪಾದಗಳು ಊದಿ ಕೊಳ್ಳುತ್ತವೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.