ನವದೆಹಲಿ: Dangerous Food Combinations - ಹಲಸು ತಿಂದ ನಂತರ ಅನೇಕರು ಕೆಲ ತಪ್ಪುಗಳನ್ನು ಮಾಡುತ್ತಾರೆ, ಆ ಕಾರಣದಿಂದ ನಂತರ ಅವರು ಭಾರಿ ಪರದಾಡಬೇಕಾಗುತ್ತದೆ. ಇವುಗಳಲ್ಲಿ ಹಾಲು, ಜೇನು ಮುಂತಾದವುಗಳನ್ನು ಒಳಗೊಂಡಿವೆ. ಅನೇಕ ಜನರು ಹಲಸು ತಿನ್ನಲು ಇಷ್ಟಪಡುತ್ತಾರೆ, ಅದನ್ನು ತಿಂದ ನಂತರ ಅವರು ತಾವು ಹಲಸು ಸೇವಿಸಿರುವುದನ್ನು ಸೇವಿಸುವುದನ್ನು ಮರೆತುಬಿಡುತ್ತಾರೆ. ಹೆಚ್ಚಿನವರು ಹಲಸಿನ ಹಣ್ಣು ಮತ್ತು ಅದರ ಉಪ್ಪಿನಕಾಯಿಯನ್ನು ತುಂಬಾ ಇಷ್ಟಪಡುತ್ತಾರೆ. ಫೈಬರ್, ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ ಮುಂತಾದ ಅನೇಕ ಪೋಷಕಾಂಶಗಳು ಹಲಸಿನ ಹಣ್ಣಿನಲ್ಲಿ .


COMMERCIAL BREAK
SCROLL TO CONTINUE READING

ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ (Avoide These Foods After Eating Jack Fruit)
ಹಲಸು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಅನೇಕ ರೋಗಗಳಿಂದ ನಮ್ಮನ್ನು ಕಾಪಾಡುತ್ತದೆ. ಆದರೆ, ಅನೇಕ ಬಾರಿ ಆರೋಗ್ಯಕರ ಆಹಾರದ ಅನ್ವೇಷಣೆಯಲ್ಲಿ, ನಾವು ಆರೋಗ್ಯಕ್ಕೆ ಪ್ರಯೋಜನವನ್ನು ನೀಡುವ ಬದಲು ಹಾನಿಯನ್ನುಂಟುಮಾಡುವ ಕೆಲವು ಆಹಾರ ಸಂಯೋಜನೆಯನ್ನು ಸೇವಿಸುತ್ತೇವೆ. ಈ ಆಹಾರ ಸಂಯೋಜನೆಗಳಲ್ಲಿ ಒಂದು ಹಲಸು. ಹಾಗಾದರೆ ಹಲಸಿನ ಹಣ್ಣಿನೊಂದಿಗೆ ಯಾವ ಆಹಾರ ಪದಾರ್ಥಗಳನ್ನು ಸೇವಿಸಬಾರದು ತಿಳಿದುಕೊಳ್ಳೋಣ ಬನ್ನಿ.


ಹಲಸು ತಿಂದ ನಂತರ ಹಾಲು ಕುಡಿಯಬೇಡಿ (Precautions Of Eating Jack Fruit)
ಹಲಸು ತಿಂದ ತಕ್ಷಣ ಹಾಲನ್ನು ಸೇವಿಸಬಾರದು. ಅಷ್ಟೇ ಅಲ್ಲ ಹಾಲು ಕುಡಿದ ನಂತರವೂ ಹಲಸಿನ ಹಣ್ಣನ್ನು ಸೇವಿಸಬಾರದು. ಇದರಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಾಗಬಹುದು. ಇದು ತುರಿಕೆ, ಬಿಳಿ ಚುಕ್ಕೆಗಳು, ಮೊಡವೆ ಇತ್ಯಾದಿ ಸಮಸ್ಯೆಗೆ ಕಾರಣವಾಗಬಹುದು. ಇದಲ್ಲದೆ, ಪಚನಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯವೂ ಎದುರಾಗಬಹುದು.


ಜೇನುತುಪ್ಪವನ್ನು ತಿನ್ನಬೇಡಿ
ಹಲಸಿನ ಹಣ್ಣನ್ನು ಸೇವಿಸಿದ ನಂತರ ಅನೇಕ ಜನರು ಜೇನುತುಪ್ಪವನ್ನು (Eating Honey) ಸೇವಿಸುತ್ತಾರೆ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎನ್ನಲಾಗಿದೆ. ಹಲಸಿನ ಹಣ್ಣನ್ನು ತಿಂದ ನಂತರ ಜೇನುತುಪ್ಪವನ್ನು ಸೇವಿಸಿದರೆ, ಅದು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಹಣ್ಣಾದ ಹಲಸಿನ ಹಣ್ಣು ತಿಂದರೂ ಜೇನು ತುಪ್ಪವನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ.


ಇದನ್ನೂ ಓದಿ -ಈ ಸಮಸ್ಯೆಗಳಿಗೆ ಚಮತ್ಕಾರಿ ಪರಿಹಾರ ನೀಡುತ್ತದೆ ಪೇರಳೆ ಹಣ್ಣು


ಪಪ್ಪಾಯಿ ತಿನ್ನಬೇಡಿ
ಹಲಸಿನ ಹಣ್ಣಿನ ಪಲ್ಲೆ ಅಥವಾ ಬೇಯಿಸಿದ ಹಲಸು ತಿಂದ ನಂತರವೂ ಪಪ್ಪಾಯಿಯ ಸೇವನೆಯನ್ನು ತಪ್ಪಿಸಬೇಕು. ಇದು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ ಎನ್ನಲಾಗುತ್ತದೆ.


ಇದನ್ನೂ ಓದಿ -High BP ಇದ್ದರೆ ಕೇವಲ ಉಪ್ಪು ಕಡಿಮೆ ತಿಂದರೆ ಸಾಲದು, ಈ ಐದು ಆಹಾರ ವಸ್ತುಗಳಿಂದ ದೂರವಿರಿ

(Disclaimer - ಈ ಲೇಖನ ಕೇವಲ ಸಾಮಾನ್ಯ ಮಾಹಿತಿಗಾಗಿ ಬರೆಯಲಾಗಿದೆ. ಇದು ಯಾವುದೇ ವಿಧದಲ್ಲಿ ಯಾವುದೇ ಒಂದು ಕಾಯಿಲೆ ಅಥವಾ ಔಷಧಿಯ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ನುರಿತ ವೈದ್ಯರನ್ನು ಸಂಪರ್ಕಿಸಿ)


ಇದನ್ನೂ ಓದಿ-Milk Drinking : ನಿಂತು ಅಥವಾ ಕುಳಿತು ಹಾಲು ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟು ಲಾಭ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ