ನವದೆಹಲಿ: DCGI Apporves Emergency Use Of Corbevax For Children  - ಕೊರೊನಾ ವಿರುದ್ಧ ನಡೆಯುತ್ತಿರುವ ಸಮರಕ್ಕೆ ಇದೀಗ ಭಾರತಕ್ಕೆ ಮತ್ತೊಂದು ಹೊಸ ಅಸ್ತ್ರ ಸಿಕ್ಕಿದೆ. ಮಕ್ಕಳ ವ್ಯಾಕ್ಸಿನೇಷನ್ ಅನ್ನು ತ್ವರಿತಗೊಳಿಸುವ ಸಲುವಾಗಿ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಬಯಾಲಾಜಿಕಲ್  ಇ ಲಿಮಿಟೆಡ್ ನ (Biological E Limited) ಕರೋನಾ ಲಸಿಕೆ ಕೋರ್ಬೆವಾಕ್ಸ್ಗೆ (Corbevax Vaccine) ಅಂತಿಮ ಅನುಮೋದನೆಯನ್ನು (Final Approval) ನೀಡಿದೆ. ದೇಶದಲ್ಲಿ, ಈ ಲಸಿಕೆಯನ್ನು (Covid-19 Vaccine) 12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತದೆ.

COMMERCIAL BREAK
SCROLL TO CONTINUE READING

12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗಾಗಿ ವ್ಯಾಕ್ಸಿನ್
ಲಸಿಕೆ ತಯಾರಕ ಬಯೋಲಾಜಿಕಲ್ ಇ ಲಿಮಿಟೆಡ್, 12 ರಿಂದ 18 ವರ್ಷದೊಳಗಿನ ಮಕ್ಕಳ ತುರ್ತು ಬಳಕೆಗಾಗಿ ಸ್ಥಳೀಯ ಲಸಿಕೆಯನ್ನು DCGI ಅನುಮೋದಿಸಿದೆ ಎಂದು ಹೇಳಿದೆ. ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಈಗಾಗಲೇ ವಯಸ್ಕರಿಗೆ ಕಾರ್ಬೆವಾಕ್ಸ್ ತುರ್ತು ಬಳಕೆಯನ್ನು ಅನುಮೋದನೆ ನೀಡಿದೆ ಎಂಬುದು ಇಲ್ಲಿ ಗಮನಾರ್ಹ. Corbevax ಕರೋನಾ ವಿರುದ್ಧ ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ RBD ಪ್ರೊಟೀನ್ ಉಪ-ಘಟಕ ಲಸಿಕೆಯಾಗಿದೆ.


Russia-Ukraine ಮಹಾಯುದ್ದ ಆರಂಭವಾಯಿತೇ? ಯುಕ್ರೇನ್ ಬಾಂಬ್ ದಾಳಿಗೆ ತನ್ನ ಗಡಿ ಪೋಸ್ಟ್ ಸ್ಪೋಟಗೊಂಡಿದೆ ಎಂದ ರಷ್ಯಾ!

28 ದಿನಗಳಲ್ಲಿ ಎರಡು ಡೋಸ್ ತೆಗೆದುಕೊಳ್ಳಬೇಕು
ಈ ಕುರಿತು ಮಾಹಿತಿ ನೀಡಿರುವ ಕಂಪನಿಯ ಗುಣಮಟ್ಟ ಮತ್ತು ನಿಯಂತ್ರಣ ವ್ಯವಹಾರಗಳ ಮುಖ್ಯಸ್ಥ ಶ್ರೀನಿವಾಸ್ ಕೊಸರಾಜು, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಐದರಿಂದ 18 ವರ್ಷ ವಯಸ್ಸಿನ ಮಕ್ಕಳ ಮೇಲೆ ಕಾರ್ಬೆವಾಕ್ಸ್‌ನ II-III ಕ್ಲಿನಿಕಲ್ ಪ್ರಯೋಗಕ್ಕಾಗಿ ಕಂಪನಿಯು ಅನುಮತಿ ಪಡೆದಿದೆ. ಕಾರ್ಬೆವಾಕ್ಸ್ ಲಸಿಕೆಯನ್ನು ಸ್ನಾಯುಗಳ ಮೂಲಕ ದೇಹಕ್ಕೆ ತಲುಪಿಸಲಾಗುತ್ತದೆ ಮತ್ತು 28 ದಿನಗಳಲ್ಲಿ ಎರಡು ಡೋಸ್‌ಗಳಲ್ಲಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ-ಒಂದಲ್ಲ ಎರಡಲ್ಲ 85 ಹುಡುಗಿಯರೊಂದಿಗೆ ಈ ಕೆಲಸ ಮಾಡುತ್ತಿರುವ ಭೂಪ!

ಕಳೆದ ವಾರವಷ್ಟೇ, ಕೆಲವು ಷರತ್ತುಗಳೊಂದಿಗೆ 12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ತುರ್ತು ಬಳಕೆಗಾಗಿ ಬಯಾಲಾಜಿಕಲ್-ಇ ಕರೋನಾ ಲಸಿಕೆ ಕಾರ್ಬೆವಾಕ್ಸ್‌ನ ಅನುಮೋದನೆಯನ್ನು ಕೇಂದ್ರ ಔಷಧ ನಿಯಂತ್ರಕರ ವಿಷಯ ತಜ್ಞರ ಸಮಿತಿ (SEC) ಶಿಫಾರಸು ಮಾಡಿತ್ತು . ಇದರ ನಂತರ ಅದನ್ನು ಅಂತಿಮ ಅನುಮೋದನೆಗಾಗಿ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಗೆ ಕಳುಹಿಸಲಾಗಿತ್ತು.

ಇದನ್ನೂ ಓದಿ-Russia-Ukraine Conflict: Nuclear Drill ನಡೆಸಿ ಶಕ್ತಿ ಪ್ರದರ್ಶಿಸಿದ Vladimir Putin, ಕಪ್ಪು ಸಮುದ್ರದಲ್ಲಿನ ಹಲ್-ಚಲ್ ನಿಂದ ಮತ್ತಷ್ಟು ಆಳವಾದ ಉಕ್ರೇನ್ ಬಿಕ್ಕಟ್ಟು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ