Vitamin Deficiency In Diabetes : ಸಕ್ಕರೆ ಅಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಮಧುಮೇಹ ಉಂಟಾಗುತ್ತದೆ.  ಹೆಚ್ಚು ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ವಸ್ತುಗಳನ್ನು ತಿನ್ನುವುದರಿಂದ, ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಮಧುಮೇಹವನ್ನು ನಿಯಂತ್ರಿಸಬೇಕಾದರೆ ನಿತ್ಯ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಸಮಸ್ಯೆ ಉಲ್ಬಣಿಸಿ ಬೇರೆ ಬೇರೆ ಕಾಯಿಲೆಗಳಿಗೆ ಕಾರಣವಾಗಬಹುದು. ಕೆಲವೊಮ್ಮೆ ಔಷಧಿ ಸೇವಿಸಿದ ನಂತರವೂ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುವುದಿಲ್ಲ. ದೇಹದಲ್ಲಿ ಕೆಲವು  ವಿಟಮಿನ್ ಗಳ ಕೊರತೆಯಿದ್ದರೆ ಹೀಗಾಗುತ್ತದೆ. 


COMMERCIAL BREAK
SCROLL TO CONTINUE READING

ವಿಟಮಿನ್ ಬಿ 1 ಕೊರತೆ :
ವಿಟಮಿನ್ ಬಿ 1 ಕೊರತೆಯಿಂದಾಗಿ, ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗಬಹುದು. ವಿಟಮಿನ್ ಬಿ 1 ಕೊರತೆ ಎದುರಿಸುತ್ತಿದ್ದರೆ, ಒಣ ಹಣ್ಣುಗಳು ಮತ್ತು ಧಾನ್ಯಗಳನ್ನು ಸೇವಿಸಬೇಕು. ಮೊಟ್ಟೆ ಮತ್ತು ಹೂಕೋಸುಗಳಲ್ಲಿ ವಿಟಮಿನ್ ಬಿ 1 ಹೇರಳವಾಗಿ ಕಂಡು ಬರುತ್ತದೆ. 


ಇದನ್ನೂ ಓದಿ :  ಬೆಳಗ್ಗೆ Running ಮಾಡುವಾಗ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪುಗಳನ್ನು


ವಿಟಮಿನ್ ಬಿ 12 ಕೊರತೆ :
ವಿಟಮಿನ್ ಬಿ 12 ದೇಹಕ್ಕೆ ಅತ್ಯಗತ್ಯ. ಇದರ ಕೊರತೆಯು ರಕ್ತದಲ್ಲಿನ ಸಕ್ಕರೆಯ ಮಟ್ಟದ  ಮೇಲೆ ಪರಿಣಾಮ ಬೀರಬಹುದು. ವಿಟಮಿನ್ ಬಿ 12 ಕೊರತೆಯನ್ನು ನೀಗಿಸಲು, ಡೈರಿ ಉತ್ಪನ್ನಗಳು, ಮೊಟ್ಟೆ, ಕೋಳಿ ಮತ್ತು ಮೀನು ಸೇವಿಸಬೇಕು. 


ವಿಟಮಿನ್ ಸಿ ಕೊರತೆ  : 
ವಿಟಮಿನ್ ಸಿ ಮಧುಮೇಹ ರೋಗಿಗಳಿಗೆ ಅತ್ಯಗತ್ಯವಾಗಿದೆ. ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಸಿಟ್ರಸ್ ಹಣ್ಣುಗಳು,  ಮೊಳಕೆ ಕಾಳು, ಕೋಸುಗಡ್ಡೆ, ಎಲೆಕೋಸು ಮತ್ತು ಕ್ಯಾಪ್ಸಿಕಂನಲ್ಲಿ ಹೇರಳವಾಗಿ ಇರುತ್ತದೆ. ವಿಟಮಿನ್ ಸಿ ಕೊರತೆಯನ್ನು  ನೀಗಿಸಲು ಮೇಲೆ ತಿಳಿಸಿದ ಎಲ್ಲಾ ವಸ್ತುಗಳನ್ನು ಸೇವಿಸಬಹುದು. ಅವುಗಳ ಗ್ಲೈಸೆಮಿಕ್ ಇಂಡೆಕ್ಸ್ ಮಟ್ಟವೂ ಕಡಿಮೆಯಾಗಿದೆ.  


ವಿಟಮಿನ್ ಡಿ ಕೊರತೆ :
ವಿಟಮಿನ್ ಡಿ ಇನ್ಸುಲಿನ್ ಸ್ರವಿಸುವಿಕೆಗೆ ಸಹಾಯ ಮಾಡುತ್ತದೆ. ವಿಟಮಿನ್ ಡಿ ಕೊರತೆಯಿದ್ದರೆ, ಇನ್ಸುಲಿನ್ ಸ್ರವಿಸುವಿಕೆಯು ಕಡಿಮೆಯಾಗುತ್ತದೆ. ಹೀಗಾದಾಗ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ವಿಟಮಿನ್ ಡಿ ಕೊರತೆಯನ್ನು ನೀಗಿಸಲು ಹಾಲು, ಮೊಟ್ಟೆ ಮತ್ತು ಮಾಂಸವನ್ನು ಸೇವಿಸಬೇಕು. ಇನ್ನು ಸೂರ್ಯನ ಕಿರಣ ಬೀಳುವಲ್ಲಿ ಮೈಯೊಡ್ಡಿ ಕುಳಿತುಕೊಳ್ಳುವುದರಿಂದಲೂ  ವಿಟಮಿನ್ ಡಿ ಕೊರತೆಯನ್ನು ಹೋಗಲಾಡಿಸಬಹುದು. 


ಇದನ್ನೂ ಓದಿ :  Tea Addiction : ಚಹಾ ಕುಡಿಯುವ ಚಟ ಬಿಡಲಾಗುತ್ತಿಲ್ಲವೇ, ಹಾಗಿದ್ರೆ, ಈ 3 ಸುಲಭ ಮಾರ್ಗ ಅನುಸರಿಸಿ


ವಿಟಮಿನ್ ಇ ಕೊರತೆ :
ವಿಟಮಿನ್ ಇ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಇ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಒಣ ಹಣ್ಣುಗಳು, ಧಾನ್ಯಗಳು, ಹಸಿರು ತರಕಾರಿಗಳು ಮತ್ತು ಕಿವಿಯಂತಹ ಹಣ್ಣುಗಳಲ್ಲಿ ವಿಟಮಿನ್ ಇ ಉತ್ತಮ ಪ್ರಮಾಣದಲ್ಲಿರುತ್ತದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.