ನವದೆಹಲಿ : ಚಳಿಗಾಲ (Winter) ಬಂದ ತಕ್ಷಣ ನಾವು ನೀರು ಕುಡಿಯುವುದನ್ನು ಕಡಿಮೆ ಮಾಡಿ ಬಿಡುತ್ತೇವೆ. ಚಳಿಗಾಲ ಎಂದ ಕೂಡಲೇ ನೀರು ಕುಡಿಯದಿದ್ದರೂ (Water drinking habit) ಸಮಸ್ಯೆಯಿಲ್ಲ ಎಂದು ಕೊಳ್ಳುವವರೇ ಹೆಚ್ಚು. ಆದರೆ ಚಳಿಗಾಲ ಎಂದು ಕಡಿಮೆ ನೀರು ಕುಡಿಯುವ ಅಭ್ಯಾಸ ನಿಮಗೂ ಇದ್ದಾರೆ ಎಚ್ಚೆತ್ತುಕೊಳ್ಳಿ. ನಿಮ್ಮ ಈ ಅಭ್ಯಾಸ ಸಮಸ್ಯೆಗೆ ಕಾರಣವಾಗಬಹುದು.  ನೀರು ಕಡಿಮೆ ಕುಡಿಯುವುದು ಅಂದರೆ  ದೇಹವು ನಿರ್ಜಲೀಕರಣಗೊಳ್ಳಲು (Dehydrate) ಪ್ರಾರಂಭಿಸುತ್ತದೆ. ಇದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತದೆ. 


COMMERCIAL BREAK
SCROLL TO CONTINUE READING

ತಲೆನೋವು :
ದೇಹದಲ್ಲಿ ನೀರಿನ ಕೊರತೆಯಿಂದ ಆಗಾಗ ತಲೆನೋವು ಸಮಸ್ಯೆ (Head ache) ಎದುರಾಗುತ್ತದೆ. ನಮ್ಮ ಮೆದುಳು ಶೇಕಡಾ 90 ರಷ್ಟು ನೀರಿನಿಂದ ಕೂಡಲ್ಪಟ್ಟಿರುವುದರಿಂದ ದೇಹದ ಹೈಡ್ರೇಶೇನ್ ಲೆವೆಲ್ ಕಡಿಮೆಯಾದಾಗ ತಲೆನೋವಿನ ಸಮಸ್ಯೆ ಕಾಡುತ್ತದೆ.  


ಇದನ್ನೂ ಓದಿ : Weight Loss: ತೂಕ ಕಡಿಮೆ ಮಾಡಲು ನೀವು ಹಾಲು ಕುಡಿಯುವುದಿಲ್ಲವೇ? ಅದರ ಅಪಾಯಕಾರಿ ಪರಿಣಾಮದ ಬಗ್ಗೆ ಗೊತ್ತಿದೆಯೇ?


ಹೊಟ್ಟೆಯ ಸಮಸ್ಯೆಗಳು :
ದೇಹದಲ್ಲಿ ನೀರಿನ ಕೊರತೆಯು ಮಲಬದ್ಧತೆ (Constipation), ಆಸಿಡಿಟಿ  ಮತ್ತು ಎದೆಯುರಿ ಸಮಸ್ಯೆ ಉಂಟುಮಾಡಬಹುದು. 


ಸುಸ್ತು :  
ಏನು ಕೆಲಸ ಮಾಡಿದರೂ, ಕೆಲಸ ಮಾಡದೆ ಇದ್ದರು ಸುಸ್ತಾಗುತ್ತಿರುವುದು. ಪದೇ  ಪದೇ ಆರಾಮ ಬೇಕೆನಿಸುವುದು ಕೂಡಾ ದೇಹದಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವ ಸಂಕೇತವಾಗಿರಬಹುದು. 


ಒಣ ಚರ್ಮದ ಸಮಸ್ಯೆ :
ದೇಹದಲ್ಲಿ ನೀರಿನ ಕೊರತೆಯು ಚರ್ಮದಲ್ಲಿ ಶುಷ್ಕತೆಯನ್ನು (Dry skin) ಉಂಟುಮಾಡುತ್ತದೆ. ಒಣ ಚರ್ಮದ ಸಮಸ್ಯೆ ಇದ್ದರೆ, ಅದು ನಿರ್ಜಲೀಕರಣದ ಲಕ್ಷಣವಾಗಿರಬಹುದು.


ಕೀಲು ನೋವಿನ ಸಮಸ್ಯೆ :
ನಿರ್ಜಲೀಕರಣವು ಕೀಲು ನೋವನ್ನು ಉಂಟು ಮಾಡುತ್ತದೆ. ಈಗಾಗಲೇ ಸಮಸ್ಯೆ ಇದ್ದರೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ. 


ಇದನ್ನೂ ಓದಿ : Methi Seeds Benefits : ಪುರುಷರ ದೇಹ ಶಕ್ತಿಗೆ ಪ್ರಯೋಜನಕಾರಿ ಮೆಂತ್ಯ ಬೀಜ : ಹೀಗೆ ಈ ರೀತಿ ಸೇವಿಸಿ!


ಏಕಾಗ್ರತೆಯ ಕೊರತೆ  :
ದೇಹದಲ್ಲಿ ನೀರಿನ ಕೊರತೆಯಿಂದಾಗಿ, ಯಾವ ಕೆಲಸದ ಮೇಲೆಯೂ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ  ನೀವು ದೀರ್ಘಕಾಲ ಏನನ್ನೂ ನೆನಪಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಸಂವಹನ ಸಂದರ್ಭದಲ್ಲಿ ಕಷ್ಟಪಡಬೇಕಾಗುತ್ತದೆ. 


ಹೀಗೆ ದೇಹವನ್ನು ಹೈಡ್ರೆಟ್  ಮಾಡಿ : 
ಬೇಸಿಗೆಗಿಂತ ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ. ಹಾಗಾಗಿ ಕಡಿಮೆ ನೀರನ್ನು ಕುಡಿಯಬೇಕಾಗುತ್ತದೆ. ಆದರೆ ಈ ಅಭ್ಯಾಸವು ನಿಮಗೆ ಹಾನಿ ಉಂಟು ಮಾಡುತ್ತದೆ. ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವುದರಿಂದ ನಿಮ್ಮ ದೇಹವನ್ನು ನಿರ್ಜಲೀಕರಣಗೊಳಿಸಬಹುದು. ಈ ಋತುವಿನಲ್ಲಿ ಹೆಚ್ಚು ಬೆವರು ಬೀಳುವುದಿಲ್ಲ. ಆದರೆ ನಿಮ್ಮ ದೇಹವು ತೇವಾಂಶವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. 


ಚಳಿಗಾಲದಲ್ಲಿ ಹೈಡ್ರೀಕರಿಸುವ ವಿಧಾನಗಳನ್ನು ತಿಳಿಯಿರಿ:


1. ನೀರು ಕುಡಿಯಲು ರಿಮೈನ್ದರ್ ಸೆಟ್ ಮಾಡಿಕೊಳ್ಳಿ. ದಿನವಿಡೀ ತುಂಬಾ ನೀರು ಕುಡಿಯಬೇಕು ಎಂಬ ಗುರಿಯನ್ನು ಇಟ್ಟುಕೊಂಡು  ಇದನ್ನು ಅನುಸರಿಸಿ..
2.ಆಹಾರದಲ್ಲಿ ಸಾಕಷ್ಟು ಹಣ್ಣುಗಳನ್ನು ಸೇರಿಸಿ. ಕಿತ್ತಳೆ (Orange), ಅನಾನಸ್ ಮತ್ತು ಪೀಚ್‌ಗಳಂತಹ ಹಣ್ಣುಗಳನ್ನು ಸಾಕಷ್ಟು ಸೇವಿಸಿ. ಬ್ರೊಕೊಲಿಯನ್ನು ಸಹ ಆಹಾರದಲ್ಲಿ ಸೇರಿಸಿಕೊಳ್ಳಬಹುದು. 
3. ತರಕಾರಿಗಳಿಂದ ತಯಾರಿಸಿದ ಸೂಪ್ (Soup)ಅನ್ನು ಕುಡಿಯಿರಿ.  
4. ಆಲ್ಕೋಹಾಲ್ ಸೇವನೆಯನ್ನು ತಪ್ಪಿಸಿ. ಇದು ನಿರ್ಜಲೀಕರಣದ ಸಮಸ್ಯೆಗೂ ಕಾರಣವಾಗಬಹುದು. 
5.ದೇಹದಲ್ಲಿ ನೀರಿನ ಅಂಶ ಬಹಳ ಕಡಿಮೆಯಾದಾಗ ಬಾಯಾರಿಕೆಯಾಗುತ್ತದೆ. ಆದ್ದರಿಂದ, ದಿನವಿಡೀ ಸ್ವಲ್ಪ ಸ್ವಲ್ಪ ನೀರೂ ಕುಡಿಯಲೇ ಬೇಕು.  


ಸರಾಸರಿಯಾಗಿ, ಒಬ್ಬ ವ್ಯಕ್ತಿಯು 3.7 ಲೀಟರ್ ಅಥವಾ ಸ್ವಲ್ಪ ಹೆಚ್ಚು ನೀರನ್ನು ಕುಡಿಯುವುದು ಅವಶ್ಯಕ. ನೀರಿನ ಪ್ರಮಾಣದ ಬೇಡಿಕೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಇದು ನಿಮ್ಮ ಚಟುವಟಿಕೆ ಮತ್ತು ವಾಸಿಸುವ ಪರಿಸರವನ್ನು ಅವಲಂಬಿಸಿರುತ್ತದೆ. ದೇಹವು ಸರಿಯಾಗಿ ಕಾರ್ಯನಿರ್ವಹಿಸಲು, ಯಾವುದೇ ಋತುವಿನಲ್ಲಿ 4 ರಿಂದ 5 ಲೀಟರ್ ನೀರನ್ನು ಕುಡಿಯಿರಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.