Desi Ghee Health Benefits - ಆರೋಗ್ಯದ ಜೊತೆಗೆ ಕೂದಲಿಗೂ ಕೂಡ ಲಾಭಕಾರಿ ದೇಸಿ ತುಪ್ಪ
Desi Ghee Health Benefits - ಬಿಸಿ ಬಿಸಿ ರೊಟ್ಟಿಯ ಮೇಲೆ ಅಥವಾ ಬೆಳೆಯಲ್ಲಿ ತುಪ್ಪ ಬರೆಸಿ ನೀವು ನಿತ್ಯ ಸೇವಿಸುತ್ತಿರಬಹುದು. ಆದರೆ, ಕೂದಲಿಗೆ ಎಂದಾದರೂ ತುಪ್ಪ ಅನ್ವಯಿಸಿದ್ದೀರಾ? ಇಲ್ಲ ಎಂದಾದರೆ, ನಿಮ್ಮ ಕೂದಲಿಗೂ ಸಹ ತುಪ್ಪ ಹೇಗೆ ಲಾಭಕಾರಿಯಾಗಿದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.
ನವದೆಹಲಿ: Desi Ghee Health Benefits - ತುಪ್ಪ ಸೇವನೆಯಿಂದ ತೂಕ ಹೆಚ್ಚಾಗುತ್ತದೆ ಎಂಬುದು ಬಹುತೇಕರ ಅನಿಸಿಕೆಯಾಗಿದೆ. ಹೀಗಾಗಿ ಅವರು ತುಪ್ಪ ಸೇವಿಸುವುದರಿಂದ ದೂರ ಉಳಿಯುತ್ತಾರೆ. ಆದರ ವಾಸ್ತವದಲ್ಲಿ ಶುದ್ಧ ತುಪ್ಪ ಸೇವಿಸುವುದು ಹಲವು ಆರೋಗ್ಯಕರ ಲಾಭಗಳನ್ನು ನೀಡುತ್ತದೆ. ಶುದ್ಧ ತುಪ್ಪ ಪಚನಕ್ರಿಯೆಯನ್ನು ಹೆಚ್ಚಿಸುತ್ತದೆ. ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ನಿದ್ರಾಹೀನತೆ ಸಮಸ್ಯೆ ಪರಿಹರಿಸುತ್ತದೆ. ಉದರ ಹಾಗೂ ಅಕ್ಕಪಕ್ಕದ ಭಾಗಗಳಲ್ಲಿ ಶೇಖರಣೆಯಾದ ಬೊಜ್ಜು ಕಡಿಮೆ ಮಾಡುತ್ತದೆ ಹಾಗೂ ಕಣ್ಣುಗಳ ದೃಷ್ಟಿ ಉತ್ತಮಗೊಳಿಸುತ್ತದೆ. ಇದರಲ್ಲಿರುವ ಹೇರಳ ಪ್ರಮಾಣದ ಆಂಟಿ ಆಕ್ಸಿಡೆಂಟ್, ಆಂಟಿ ಇನ್ಫ್ಲೇಮೆಟರಿ ಗುಣಗಳ ಕಾರಣ ಆಯುರ್ವೇದದಲ್ಲಿ ಹಲವು ದಶಕಗಳಿಂದ ತುಪ್ಪವನ್ನು ಬಳಕೆ ಮಾಡಲಾಗುತ್ತಿದೆ.
ಕೂದಲಿಗೆ ದೇಸಿ ತುಪ್ಪದಿಂದಾಗುವ ಲಾಭಗಳು
ಅಮೆರಿಕಾದ ವೆಬ್ ಸೈಟ್ healthline.com ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ದೇಸಿ ತುಪ್ಪ ಆರೋಗ್ಯದ (Health) ಜೊತೆಗೆ ಕೂದಲಿನ ಆರೋಗ್ಯಕ್ಕೂ ಕೂಡ ಉತ್ತಮವಾಗಿದೆ. ದಟ್ಟನೆಯ ಹಾಗೂ ಸೊಂಪಾಗಿ ಕೂದಲು ಬೆಳೆಯಲು ಇದು ಸಹಕರಿಸುತ್ತದೆ. ಕೂದಲಿನ ಬುಡಗಳನ್ನು ಉತ್ತಮವಾಗಿಡಲು ಇದು ಸಹಕರಿಸುತ್ತದೆ. ಕೂದಲಿನ ಆರೋಗ್ಯಕ್ಕೆ ಇದು ಹೇಗೆ ಉತ್ತಮ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
1. ಕೂದಲನ್ನು ಮೃದುಗೊಳಿಸುತ್ತದೆ ದೇಸಿ ತುಪ್ಪ
ತುಪ್ಪವನ್ನು ತಿನ್ನುವುದರ ಜೊತೆಗೆ ಅದನ್ನು ನಿಮ್ಮ ಕೂದಲು ಹಾಗೂ ಕೂದಲಿನ ಬುಡಕ್ಕೆ ಅನ್ವಯಿಸುವುದರಿಂದ ಕೂದಲು ಮೃದುವಾಗಿ ರೇಷ್ಮೆಯಂತೆ ಹೊಳೆಯಲಾರಂಭಿಸುತ್ತವೆ. ಹಸುವಿನ ಹಾಲಿನಿಂದ ತಯಾರಾಗಿರುವ ಶುದ್ಧ ದೇಸಿ ತುಪ್ಪದಲ್ಲಿ ಆಂಟಿ ಆಕ್ಸಿಡೆಂಟ್ ಕಂಪೌಂಡಗಳಿರುತ್ತವೆ. ಇವು ಕೂದಲಿನ ವಿಷಪದಾರ್ಥಗಳನ್ನು ತೆಗೆದುಹಾಕುವ ಕೆಲಸ ಮಾಡುತ್ತವೆ. ಈ ವಿಷ ಪದಾರ್ಥಗಳ ಕಾರಣ ಕೂದಲು ಗಂಟಿಕ್ಕಿ ಮುರಿದು ಬೀಳುತ್ತವೆ.
2. ಕೂದಲನ್ನು ದಟ್ಟವಾಗಿಸುತ್ತದೆ ದೇಸಿ ತುಪ್ಪ
ದೇಸಿ ತುಪ್ಪ ವಿಟಮಿನ್ ಹಾಗೂ ಪ್ರೋಟೀನ್ ಗಳ ಆಗರವಾಗಿರುತ್ತದೆ. ಹೀಗಾಗಿ ಇದನ್ನು ಕೂದಲಿಗೆ ಅನ್ವಯಿಸುವುದರಿಂದ ಕೂದಲು ದಟ್ಟವಾಗಿರುವ ಅನುಭವ ನಿಮಗೆ ಕೆಲವೇ ನಿಮಿಷಗಳಲ್ಲಿ ಆಗುತ್ತದೆ. ದೇಸಿ ತುಪ್ಪ ಕೂದಲಿನ ಬುಡಗಳನ್ನು ಗಟ್ಟಿಗೊಳಿಸುತ್ತದೆ. ದೇಸಿ ತುಪ್ಪ ಬಳಸಿ ನೀವು ಸುಲಭವಾಗಿ ಬೇರೆ ಬೇರೆ ಸ್ಟೈಲ್ ನಲ್ಲಿ ಕೇಶವನ್ನು ವಿನ್ಯಾಸಗೊಳಿಸಬಹುದು. ಆದರೆ ಇದನ್ನು ಸಾಬೀತುಪಡಿಸಲು ಇದುವರೆಗೆ ಯಾವುದೇ ಅಧ್ಯಯನ ಅಸ್ತಿತ್ವದಲ್ಲಿಲ್ಲ.
ಇದನ್ನೂ ಓದಿ- Helth Tips: ನಿತ್ಯ ಬೆಳಿಗ್ಗೆ ತಾಮ್ರದ ಪಾತ್ರೆಯಲ್ಲಿರುವ ನೀರು ಸೇವಿಸಿ, ಉತ್ತಮ ಆರೋಗ್ಯ ನಿಮ್ಮದಾಗಿಸಿ
3. ಕೂದಲು ಸೊಂಪಾಗಿ ಬೆಳೆಯುತ್ತವೆ
ನಿಮ್ಮ ಕೂದಲು ಗಟ್ಟಿಯಾದರೆ ಅವು ಮುರಿದುಬೀಳುವ ಸಾಧ್ಯತೆ ಕೂಡ ಕಡಿಮೆಯಾಗಿರುತ್ತದೆ. ಇದಲ್ಲದೆ ಕೂದಲುದುರುವ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. ಹೀಗಾಗಿ ಇದಕ್ಕಾಗಿ ನೀವು ಕೂದಲು ಬೆಳೆಸಬೇಕು. ಕೂದಲಿಗೆ ತುಪ್ಪ ಬಳಸುವುದರಿಂದ ಕೂದಲು ಸೊಂಪಾಗಿ ಬೆಳೆಯಲಾರಂಭಿಸುತ್ತವೆ.
ಇದನ್ನೂ ಓದಿ- Curd for Health: ಈ 7 ಕಾರಣಗಳಿಗೆ ಬೇಸಿಗೆಯಲ್ಲಿ ಪುರುಷರು ಮೊಸರು ತಿನ್ನಬೇಕು..!
4.ಕೂದಲಿಗೆ ತುಪ್ಪ ಅನ್ವಯಿಸುವ ಸರಿಯಾದ ಪದ್ಧತಿ
ಒಂದು ವೇಳೆ ನೀವು ಹೇಯರ್ ಮಾಸ್ಕ್ ರೀತಿಯಲ್ಲಿ ತುಪ್ಪವನ್ನು ಬಳಸಲು ಬಯಸುತ್ತಿದ್ದರೆ, ಇದಕ್ಕಾಗಿ ಮೊದಲು ನೀವು 10 ಸೆಕೆಂಡ್ ಗಳ ಕಾಲ ದೇಸಿ ತುಪ್ಪವನ್ನು ಗ್ಯಾಸ್ ಮೇಲೆ ಅಥವಾ ಓವನ್ ನಲ್ಲಿ ಬಿಸಿ ಮಾಡಿಕೊಳ್ಳಬೇಕು. ಬೇಕಾದರೆ ನೀವು ತುಪ್ಪವನ್ನು ಅಂಗೈಯಲ್ಲಿ ಹಾಕಿ ಎರಡೂ ಕೈಗಳಿಂದ ಉಜ್ಜಿ ಬಿಸಿ ಮಾಡಿಕೊಳ್ಳಬಹುದು. ನಂತರ ಅದನ್ನು ನೇರವಾಗಿ ಕೂದಲಿಗೆ ಅನ್ವಯಿಸಬೇಕು. ಇದಲ್ಲದೆ ಕೂದಲಿನ ಬುಡಕ್ಕೆ ಎಣ್ಣೆಯನ್ನು ಹಚ್ಚಿ ನಿಧಾನಕ್ಕೆ ಮಸಾಜ್ ಮಾಡಿ. ಸೀಳಿರುವ ಕೂದಲುಗಳಿಗೂ ಕೂಡ ಅನ್ವಯಿಸಬಹುದು. ಸುಮಾರು 1 ರಿಂದ 2 ಗಂಟೆಗಳ ಕಾಲ ಹಾಗೆಯೇ ಬಿಟ್ಟು ಬಳಿಕ ರೆಗ್ಯೂಲರ್ ಮೈಲ್ಡ್ ಶಾಂಪೂ ಬಳಸಿ ಕೂದಲುಗಳನ್ನು ತೊಳೆದುಕೊಳ್ಳಿ.
ಇದನ್ನೂ ಓದಿ-Health Tips - ತೋಟ-ಗದ್ದೆಗಳಲ್ಲಿ ಬರಿಗಾಲಲ್ಲಿ ನಡೆಯುವುದರ ಲಾಭಗಳಿವು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.