ಮಧುಮೇಹಿಗಳು ಬೆಳಿಗ್ಗೆ ಎದ್ದ ಕೂಡಲೇ ಈ ವಸ್ತುವನ್ನು ಸೇವಿಸಿದರೆ ಸಿಗುವುದು ಅದ್ಭುತ ಪ್ರಯೋಜನ
ಮಧುಮೇಹವು ಗಂಭೀರವಾದ ಕಾಯಿಲೆಯಾಗಿದ್ದು, ಈ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ತಮ್ಮ ಆಹಾರದ ಅತಿಯಾದ ಕಾಳಜಿ ವಹಿಸಬೇಕಾಗುತ್ತದೆ. ಅಲ್ಲದೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಮಧುಮೇಹದಿಂದ ಉಲ್ಬಣಿಸಬಹುದಾದ ಅಪಾಯವನ್ನು ತಪ್ಪಿಸಬಹುದು.
ಬೆಂಗಳೂರು : ಮಧುಮೇಹ ಒಮ್ಮೆ ಕಾಣಿಸಿಕೊಂಡರೆ ಸಾಕು ನಂತರ ಜೀವನ ಪರ್ಯಂತ ಕಾಡುತ್ತಿರುತ್ತದೆ. ಇದು ಚಯಾಪಚಯ ಅಸ್ವಸ್ಥತೆಯಾಗಿದ್ದು, ಇದರಲ್ಲಿ ರೋಗಿಯ ದೇಹದ ರಕ್ತದಲ್ಲಿ ಗ್ಲೂಕೋಸ್ ಮಟ್ಟವು ಅಧಿಕವಾಗಲು ಆರಂಭವಾಗುತ್ತದೆ. ಆ ಸಂದರ್ಭದಲ್ಲಿ ವ್ಯಕ್ತಿಯ ದೇಹವು ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ ಮತ್ತು ದೇಹದ ಜೀವಕೋಶಗಳು ಇನ್ಸುಲಿನ್‌ಗೆ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ. ಇನ್ಸುಲಿನ್ ಉತ್ಪಾದನೆಯು ದೇಹಕ್ಕೆ ಬಹಳ ಮುಖ್ಯವಾಗಿರುತ್ತದೆ. ಗ್ಲೂಕೋಸ್ ಅನ್ನು ರಕ್ತದ ಮೂಲಕ ದೇಹದ ಜೀವಕೋಶಗಳಿಗೆ ಸಾಗಿಸಲು ಇನ್ಸುಲಿನ್ ಉತ್ಪಾದನೆ ಬಹಳ ಮುಖ್ಯವಾಗಿರುತ್ತದೆ. ದೇಹದಲ್ಲಿ ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗದಿದ್ದಾಗ, ಅದು ದೇಹದ ಚಯಾಪಚಯ ಕ್ರಿಯೆಯ ಮೇಲೆಯೂ ಪರಿಣಾಮ ಬೀರುತ್ತದೆ.
ಮಧುಮೇಹವು ಗಂಭೀರವಾದ ಕಾಯಿಲೆಯಾಗಿದ್ದು, ಈ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ತಮ್ಮ ಆಹಾರದ ಅತಿಯಾದ ಕಾಳಜಿ ವಹಿಸಬೇಕಾಗುತ್ತದೆ. ಅಲ್ಲದೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಮಧುಮೇಹದಿಂದ ಉಲ್ಬಣಿಸಬಹುದಾದ ಅಪಾಯವನ್ನು ತಪ್ಪಿಸಬಹುದು.
ಇದನ್ನೂ ಓದಿ : Coconut Health Benefits: ತೆಂಗು - ಇಂಗು ಇದ್ದರೆ ಮಂಗ ಸಹ ಚೆನ್ನಾಗಿ ಅಡುಗೆ ಮಾಡಬಲ್ಲದು: ಆದ್ರೆ ತೆಂಗಿನ ಕಾಯಿ ಉಪಯೋಗ ಬಲ್ಲಿರಾ..
ಮಧುಮೇಹ ರೋಗಿಗಳು ಇದರ ಸೇವನೆ ಮೂಲಕ ದಿನ ಆರಂಭಿಸಿ :
ಒಣ ಹಣ್ಣುಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರ ಸೇವನೆ ಮೂಲಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದು ಸಾಧ್ಯವಾಗುತ್ತದೆ. ಇದು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಅದರಲ್ಲೂ ನೀರಿನಲ್ಲಿ ನೆನೆಸಿಟ್ಟ ಒಣಹಣ್ಣು ಗಳೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿದರೆ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಾಗುವುದು.
ನೆನೆಸಿದ ಡ್ರೈ ಫ್ರುಟ್ಸ್ ಸೇವಿಸುವುದರಿಂದ ಆಗುವ ಪ್ರಯೋಜನಗಳು :
ಚರ್ಮದ ಆರೋಗ್ಯಕ್ಕೆ :
ವಾಲ್‌ನಟ್ಸ್ ಮತ್ತು ಬಾದಾಮಿ ಫ್ರೀ ರಾಡಿಕಲ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅವುಗಳಿಂದ ಪಡೆದ ಪೋಷಕಾಂಶಗಳು ಜೀವಕೋಶಗಳನ್ನು ಹಾನಿಯಾಗದಂತೆ ರಕ್ಷಿಸುತ್ತದೆ. ಚರ್ಮವನ್ನು ಯೌವನವಾಗಿ ಕಾಣುವಂತೆ ಮಾಡಲು, ಡ್ರೈ ಫ್ರುಟ್ಸ್ ಅನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಅವುಗಳನ್ನು ಸೇವಿಸಿ. ನೆನೆಸಿದ ಡ್ರೈ ಫ್ರುಟ್ಸ್ ನೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿದರೆ, ಅದು ಚರ್ಮದ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಇದನ್ನೂ ಓದಿ : Dark Chocolate : ಡಾರ್ಕ್ ಚಾಕೊಲೇಟ್ ಈ ಸಮಸ್ಯೆಗೆ ರಾಮಬಾಣ.. ಕೆಲವೇ ಸೆಕೆಂಡುಗಳಲ್ಲಿ ನೀಡುತ್ತೆ ಪರಿಹಾರ
ಮಧುಮೇಹದಲ್ಲಿ ಪ್ರಯೋಜನಕಾರಿ :
ಮಧುಮೇಹ ರೋಗಿಗಳು ತಮ್ಮ ದಿನವನ್ನು ನೆನೆಸಿದ ಡ್ರೈ ಫ್ರುಟ್ಸ್ ನೊಂದಿಗೆ ಪ್ರಾರಂಭಿಸಬೇಕು. ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಮಧುಮೇಹ ರೋಗಿಗಳಾಗಿದ್ದರೆ, ನೆನೆಸಿದ ಡ್ರೈ ಫ್ರುಟ್ಸ್ ಅನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದನ್ನು ಮರೆಯದಿರಿ.
ತೂಕ ಇಳಿಕೆಗೆ ಸಹಕಾರಿ :
ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಿಕೊಳ್ಳಲು ಬಯಸುವುದಾದರೆ ನೆನೆಸಿದ ಡ್ರೈ ಫ್ರುಟ್ಸ್ ಅನ್ನು ತಿನ್ನುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ. ಹೀಗೆ ಮಾಡುವುದರಿಂದ ತೂಕವನ್ನು ಸುಲಭವಾಗಿ ಕಳೆದು ಕೊಳ್ಳಬಹುದು. ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರು ಪ್ರತಿನಿತ್ಯ ನಟ್ಸ್ ತಿಂದರೆ ಒಳ್ಳೆಯದು.
ಇದನ್ನೂ ಓದಿ : Health Tips: ಊಟದ ನಂತರವೂ ಮತ್ತೆ ಮತ್ತೆ ಹಸಿವಾಗುತ್ತಾ? ಅದು ಈ ಕಾಯಿಲೆಗಳ ಮುನ್ಸೂಚನೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ