Diabetes Control Fruits: ಮಧುಮೇಹ ನಿಯಂತ್ರಣಕ್ಕೆ ಈ ಐದು ಹಣ್ಣುಗಳು ಸೂಪರ್ ಫುಡ್ ಗಳಾಗಿವೆ!
Diabetes Control Tips: ನೋಡಲು ಗಾತ್ರದಲ್ಲಿ ಚಿಕ್ಕದಾಗಿ ಕಾಣಿಸುವ ಈ ಹಣ್ಣುಗಳು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ತುಂಬಾ ಪ್ರಯೋಜನಕಾಗಿಯಾಗಿವೆ, ಇಂದು ನಾವು ನಿಮಗೆ ಆ ಹಣ್ಣುಗಳ ಕುರಿತು ಮಾಹಿತಿಯನ್ನು ನೀಡುತಿದ್ದು, ಅವು ಮಧುಮೆಹಿಗಳಿಗೆ ಒಂದು ವರದಾನ ಎಂದರೆ ತಪ್ಪಾಗಲಾರದು. (Health News In Kannada)
These Fruits Can Control Diabetes: ಮಧುಮೇಹ ರೋಗಿಗಳಿಗೆ, ಸರಿಯಾದ ಆಹಾರ ಸೇವನೆ ಮತ್ತು ಕ್ರಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಔಷಧಿಗಳಷ್ಟೇ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಮಧುಮೇಹ ರೋಗಿಗಳ ಆಹಾರದಲ್ಲಿ ಆದಷ್ಟು ಹೆಚ್ಚು ಹಣ್ಣುಗಳನ್ನು ಸೇರಿಸಲಾಗುತ್ತದೆ. ಏಕೆಂದರೆ ಅವುಗಳು ಇತರ ಪೋಷಕಾಂಶಗಳನ್ನು ಒಳಗೊಂಡಿರುವಷ್ಟು ಸಕ್ಕರೆಯನ್ನು ಹೊಂದಿರುವುದಿಲ್ಲ ಮತ್ತು ಆ ಪೋಷಕಾಂಶಗಳು ಮಧುಮೇಹ ರೋಗಿಗಳಿಗೆ ಅನೇಕ ವಿಭಿನ್ನ ರೀತಿಯ ಪ್ರಯೋಜನಗಳನ್ನು ನೀಡುತ್ತವೆ. ಆದಾಗ್ಯೂ, ಎಲ್ಲಾ ಹಣ್ಣುಗಳು ಪ್ರಯೋಜನಕಾರಿ ಎಂಬುದು ಇದರರ್ಥವಲ್ಲ. ಕೆಲವು ಹಣ್ಣುಗಳನ್ನು ಮಧುಮೇಹ ರೋಗಿಗಳು ಸೇವಿಸಬಾರದು ಅಥವಾ ಕನಿಷ್ಠ ಪ್ರಮಾಣದಲ್ಲಿ ಸೇವಿಸಬೇಕು ಎಂದು ಸಲಹೆ ನೀಡಲಾಗುತ್ತದೆ. ಮಧುಮೇಹ ರೋಗಿಗಳು ಜಾಸ್ತಿ ತಿನ್ನಬಹುದಾದ ಕೆಲವು ಹಣ್ಣುಗಳಿವೆ ಮತ್ತು ಈ ಹಣ್ಣುಗಳಲ್ಲಿ ಕೆಲ ಗಾತ್ರದಲ್ಲಿ ನೋಡಲು ಚಿಕ್ಕದಾಗಿರುವ ಹಣ್ಣುಗಳು ಶಾಮೀಲಾಗಿವೆ. ಈ ಲೇಖನದಲ್ಲಿ, ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಅಂತಹ ಚಿಕ್ಕ ಹಣ್ಣುಗಳ (Super Food For Diabetics) ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. (Health News In Kannada)
1. ಫುಲ್ಶಾ ಹಣ್ಣು ಅಥವಾ ಗ್ರೇವಿಯಾ ಏಷ್ಯಾಟಿಕ್ ಹಣ್ಣು
ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹಣ್ಣುಗಳಲ್ಲಿ ಫುಲ್ಶಾ ಹಣ್ಣು ಕೂಡ ಶಾಮಿಲಾಗಿದೆ, ಇದರ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವು ಹೆಚ್ಚುತ್ತಿರುವ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪುಲ್ಶಾ ಹಣ್ಣಿನಲ್ಲಿರುವ ಪಾಲಿಫಿನಾಲ್‌ಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
2. ಪ್ಲಮ್ ಹಣ್ಣುಗಳು
ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೀವು ಪ್ಲಮ್ ಅನ್ನು ಸಹ ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಬಹುದು. ಪ್ಲಮ್‌ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
3. ಬೆರ್ರಿ ಹಣ್ಣುಗಳು
ಮಧುಮೇಹವನ್ನು ನಿಯಂತ್ರಿಸುವ ಹಣ್ಣುಗಳ ಹೆಸರು ಬಂದಾಗಲೆಲ್ಲಾ ಅವುಗಳಲ್ಲಿ ಬೆರ್ರಿ ಹಣ್ಣುಗಳ ಹೆಸರೂ ಕೂಡ ಕೇಳಿ ಬರುತ್ತದೆ. ಜಾಮೂನ್, ಒಂದೇ ಹಣ್ಣಾಗಿದ್ದರೂ, ಅಧಿಕ ರಕ್ತದ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಹಣ್ಣಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಆದ್ದರಿಂದ ಮಧುಮೇಹ ರೋಗಿಗಳು ಇದನ್ನು ಹೇರಳವಾಗಿ ಸೇವಿಸಬೇಕು.
4. ಮಲ್ಬೆರಿ ಹಣ್ಣು
ಹೆಚ್ಚುತ್ತಿರುವ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಹಿಪ್ಪುನೇರಳೆ ಹಣ್ಣನ್ನು ಸೇವಿಸುವುದು ಉತ್ತಮ ಆಯ್ಕೆಯಾಗಿದೆ ಮತ್ತು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ಅದು ಮಧುಮೇಹವನ್ನು ನಿಯಂತ್ರಿಸಲು ನಿಮಗೆ ಸಹಾಯ ಮಾಡುತ್ತದೆ. ಇದಲ್ಲದೆ, ಇದು ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ಇದನ್ನೂ ಓದಿ-Piles Management: ಮೂಲವ್ಯಾಧಿ ಸಮಸ್ಯೆ ಇರುವವರಿಗೆ ಈ ಆಹಾರಗಳು ವಿಷಕ್ಕೆ ಸಮಾನ!
5. ವಾಟರ್ ಚೆಸ್ಟ್ನಟ್ ಅಥವಾ ಸಿಂಘಾರಾ ಹಣ್ಣು
ಅಧಿಕ ರಕ್ತದ ಸಕ್ಕರೆಯಿಂದ ಬಳಲುತ್ತಿರುವ ರೋಗಿಗಳು ವಾಟರ್ ಚೆಸ್ಟ್ನಟ್ ಅನ್ನು ಸಹ ಸೇವಿಸಬಹುದು, ಈ ಸಣ್ಣ ಗಾತ್ರದ ಹಣ್ಣಾಗಿದ್ದು ಮಧುಮೇಹವನ್ನು ನಿಯಂತ್ರಿಸುವಲ್ಲಿ ಉತ್ತಮ ಕೊಡುಗೆ ನೀಡುತ್ತದೆ. ವಾಟರ್ ಚೆಸ್ಟ್ನಟ್ನಲ್ಲಿ ಸಾಕಷ್ಟು ಫೈಬರ್ ಕಂಡುಬರುತ್ತದೆ, ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ವೇಗವಾಗಿ ಹೆಚ್ಚಾಗುವಿಕೆಯಿಂದ ತಡೆಯುತ್ತದೆ.
ಇದನ್ನೂ ಓದಿ-Joint Pain Management: ಕೀಲು ನೋವು ಸಮಸ್ಯೆ ನಿವಾರಣೆಗೆ ಮನೆಯಲ್ಲಿಯೇ ತಯಾರಿಸಿದ ಈ ಎಣ್ಣೆ ರಾಮಬಾಣ!
(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ