Diabetes Control Tips: ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ನಿಮ್ಮ ಆಹಾರದಲ್ಲಿರಲಿ ಈ ಎಣ್ಣೆ!
Taming Blood Sugar: ಮಧುಮೇಹಿಗಳು ಆಲಿವ್ ಎಣ್ಣೆಯನ್ನು ಸೇವಿಸಬಹುದು. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಅನೇಕ ಇತರ ಪ್ರಯೋಜನಗಳನ್ನು ನೀಡುತ್ತದೆ.(Health News In Kannada)
ಬೆಂಗಳೂರು: ಮಧುಮೇಹವು ಒಂದು ಗಂಭೀರ ಕಾಯಿಲೆಯಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, "ದೇಹದಲ್ಲಿ ರಕ್ತದಲ್ಲಿನ ಗ್ಲೂಕೋಸ್ ಹೆಚ್ಚಾದಾಗ ಒಬ್ಬ ವ್ಯಕ್ತಿಗೆ ಮಧುಮೇಹ ಬರುತ್ತದೆ. ನಾವು ಅದನ್ನು ಬ್ಲಡ್ ಷುಗರ್ ಎಂದೂ ಕೂಡ ಕರೆಯುತ್ತೇವೆ. ಗ್ಲೂಕೋಸ್ ಅನ್ನು ನಮ್ಮ ದೇಹದ ಶಕ್ತಿಯ ಮುಖ್ಯ ಮೂಲವೆಂದು ಪರಿಗಣಿಸಲಾಗುತ್ತದೆ. ದೇಹವು ಗ್ಲೂಕೋಸ್ ಅನ್ನು ತಯಾರಿಸಬಹುದು. ಆದರೆ, ನೀವು ತಿನ್ನುವ ಆಹಾರದಿಂದ ಗ್ಲೂಕೋಸ್ ಅನ್ನು ಸಹ ಪಡೆಯಬೌದು.ಇನ್ಸುಲಿನ್ ಮೇದೋಜ್ಜೀರಕ ಗ್ರಂಥಿಯಿಂದ ಉತ್ಪತ್ತಿಯಾಗುವ ಹಾರ್ಮೋನ್ ಆಗಿದೆ, ಇದು ಗ್ಲೂಕೋಸ್ ಗೆ ಜೀವಕೋಶಗಳಿಗೆ ಹೋಗಲು ಸಹಾಯ ಮಾಡುತ್ತದೆ. ಯಾರಿಗಾದರೂ ಮಧುಮೇಹ ಇದ್ದರೆ, ಅವರ ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸುತ್ತಿಲ್ಲ ಎಂದರ್ಥ ಅಥವಾ ಇನ್ಸುಲಿನ್ ಅನ್ನು ಸರಿಯಾಗಿ ಬಳಸಲು ದೇಹದಿಂದ ಸಾಧ್ಯವಾಗುತ್ತಿಲ್ಲ ಎಂದರ್ಥ. ಇಂತಹ ಪರಿಸ್ಥಿತಿಯಲ್ಲಿ, ಗ್ಲೂಕೋಸ್ ರಕ್ತದಲ್ಲಿ ಸಂಗ್ರಹವಾಗುತ್ತದೆ ಮತ್ತು ಜೀವಕೋಶಗಳನ್ನು ತಲುಪಲು ಅದಕ್ಕೆ ಸಾಧ್ಯವಾಗುವುದಿಲ್ಲ. ಮಧುಮೇಹದಿಂದಾಗಿ ಇಡೀ ದೇಹವು ಪ್ರಭಾವಕ್ಕೆ ಒಳಗಾಗುತ್ತದೆ. ಇದು ಮೂತ್ರಪಿಂಡಗಳು, ನರಮಂಡಲ ಮತ್ತು ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ, ಅದನ್ನು ಸೈಲೆಂಟ್ ಕಿಲ್ಲರ್ ಎಂದೂ ಕೂಡ ಕರೆಯುತ್ತಾರೆ. ಮಧುಮೇಹವನ್ನು ನಿಯಂತ್ರಿಸಲು, ತಜ್ಞರು ಆರೋಗ್ಯಕರ ಜೀವನಶೈಲಿ ಮತ್ತು ಉತ್ತಮ ಆಹಾರ ಪದ್ಧತಿಯನ್ನು ಶಿಫಾರಸು ಮಾಡುತ್ತಾರೆ. ಸಾಮಾನ್ಯವಾಗಿ ಜನರು ತಮ್ಮ ಮಧುಮೇಹವನ್ನು ನಿಯಂತ್ರಿಸಲು ಆಲಿವ್ ಎಣ್ಣೆಯನ್ನು ಸೇವಿಸುತ್ತಾರೆ. ಹಾಗಾದರೆ ಆಲಿವ್ ಎಣ್ಣೆಯ ಸಹಾಯದಿಂದ ಮಧುಮೇಹವನ್ನು ನಿಜವಾಗಿಯೂ ನಿರ್ವಹಿಸಬಹುದೇ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ (Health News In Kannada)
ಮಧುಮೇಹದಲ್ಲಿ ಆಲಿವ್ ಎಣ್ಣೆಯ ಪ್ರಯೋಜನಗಳು
ಆಲಿವ್ ಎಣ್ಣೆಯಲ್ಲಿ ಹಲವು ವಿಧಗಳಿವೆ. ಇದರಲ್ಲಿ ಎಕ್ಸ್‌ಟ್ರಾ ವರ್ಜಿನ್ ಆಲಿವ್ ಆಯಿಲ್, ಪ್ಯೂರ್ ಆಲಿವ್ ಆಯಿಲ್, ವರ್ಜಿನ್ ಆಲಿವ್ ಆಯಿಲ್, ರಿಫೈನ್ಡ್ ಆಲಿವ್ ಆಯಿಲ್ ಇತ್ಯಾದಿಗಳು ಶಾಮೀಳಾಗಿವೆ. ಮಧುಮೇಹದ ಸಂದರ್ಭದಲ್ಲಿ, ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆಯನ್ನು ಸೇವಿಸಲಾಗುತ್ತದೆ. ಇತರ ರೀತಿಯ ಕೊಬ್ಬಿನೊಂದಿಗೆ ಹೋಲಿಸಿದರೆ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಇದು ಸಹಾಯಕ ಎಂದು ಪರಿಗಣಿಸಲಾಗುತ್ತದೆ. ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ವಿಶೇಷವಾಗಿ ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಇದಲ್ಲದೆ, ಆಲಿವ್ ಎಣ್ಣೆಯಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ, ಇದನ್ನು ಆಲಿವ್ ಎಣ್ಣೆ ಎಂದೂ ಕರೆಯುತ್ತಾರೆ. ಆಲಿವ್ ಎಣ್ಣೆಯು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಹೆಚ್ಚಿನ ಸಕ್ಕರೆಯಿಂದಾಗಿ ಆಕ್ಸಿಡೇಟಿವ್ ಒತ್ತಡ ಹೆಚ್ಚಾಗುತ್ತದೆ. ಇದೆ ವೇಳೆ, ಉತ್ಕರ್ಷಣ ನಿರೋಧಕಗಳು ಅದರ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ರೀತಿ ನೋಡಿದರೆ ಆಲೀವ್ ಎಣ್ಣೆ ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು. ಅಷ್ಟೇ ಅಲ್ಲ, ಮಧುಮೇಹದ ಕಾರಣದಿಂದ ದೇಹದಲ್ಲಿ ಅನೇಕ ಬಾರಿ ಊತ ಉಂಟಾಗುತ್ತದೆ. ಆದರೆ ಆಲಿವ್ ಎಣ್ಣೆಯಲ್ಲಿರುವ ಗುಣಲಕ್ಷಣಗಳು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಜೀವಕೋಶಗಳಿಗೆ ಹಾನಿಯಾಗದಂತೆ ತಡೆಯಲು ಸಹಾಯ ಮಾಡುತ್ತದೆ.
ದಿನದಲ್ಲಿ ಎಷ್ಟು ಆಲೀವ್ ಎಣ್ಣೆ ಸೇವನೆ ಪ್ರಯೋಜನಕಾರಿಯಾಗಿದೆ?
1 ಚಮಚ ಆಲಿವ್ ಎಣ್ಣೆಯು ಸುಮಾರು 14 ಗ್ರಾಂ ಒಟ್ಟು ಕೊಬ್ಬನ್ನು ಹೊಂದಿರುತ್ತದೆ. ಆದರೆ ಇದು ಫೈಬರ್ ಮತ್ತು ಸಕ್ಕರೆಯನ್ನು ಹೊಂದಿರುವುದಿಲ್ಲ. ಇದು ವಿಟಮಿನ್ ಇ ಮತ್ತು ಕೆ ಯ ಉತ್ತಮ ಮೂಲವಾಗಿದೆ. ಆಲಿವ್ ಎಣ್ಣೆಯಲ್ಲಿ ಫೈಟೊಸ್ಟೆರಾಲ್ ಇರುತ್ತದೆ. ಇದು ಒಂದು ರೀತಿಯ ಸಸ್ಯ ಪದಾರ್ಥವಾಗಿದೆ, ಇದು ಕೊಲೆಸ್ಟ್ರಾಲ್ಗೆ ಹೋಲುತ್ತದೆ. ಇದರ ಹೊರತಾಗಿಯೂ, ಇದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಏಕೆಂದರೆ ಇದು ನಮ್ಮ ಆಹಾರದಿಂದ ಕೊಲೆಸ್ಟ್ರಾಲ್ ಅನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ ಮತ್ತು ಹೃದ್ರೋಗಕ್ಕೆ ಸಂಬಂಧಿಸಿದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಆದರೆ, ಒಂದು ದಿನದಲ್ಲಿ ನೀವು ಎಷ್ಟು ಸೇವಿಸುತ್ತೀರಿ ಎಂಬುದು ಮುಖ್ಯ. ನೀವು ದಿನಕ್ಕೆ 3 ರಿಂದ 4 ಟೀ ಚಮಚ ಆಲಿವ್ ಎಣ್ಣೆಯನ್ನು ಮಾತ್ರ ಸೇವಿಸಬೇಕು.
ಇದನ್ನೂ ಓದಿ-weight loss tips: ಅಧಿಕ ಬಿಪಿ, ಕೊಲೆಸ್ಟ್ರಾಲ್, ತೂಕ ಇಳಿಕೆಗೆ ರಾಮಬಾಣ ಈ ಬೀಜಗಳು!
ಆಲಿವ್ ಎಣ್ಣೆಯ ಇತರ ಪ್ರಯೋಜನಗಳು
>> ಆಲಿವ್ ಎಣ್ಣೆ ಉರಿಯೂತವನ್ನು ಕಡಿಮೆ ಮಾಡುತ್ತದೆ.
>> ಆಲಿವ್ ಎಣ್ಣೆಯು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ.
>> ಆಲಿವ್ ಎಣ್ಣೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.
>> ಇದು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
>> ಆಲಿವ್ ಎಣ್ಣೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
>> ಆಲಿವ್ ಎಣ್ಣೆಯ ಸೇವನೆಯು ಆಲ್ಝೈಮರ್ನ ಅಪಾಯವನ್ನು ಕಡಿಮೆ ಮಾಡುತ್ತದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ