ನವದೆಹಲಿ: ಪ್ರಪಂಚದಲ್ಲಿ ಮಧುಮೇಹದ ಕಾಯಿಲೆಯಿಂದ ಕೋಟ್ಯಂತರ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಭಾರತವನ್ನು ಮಧುಮೇಹದ ರಾಜಧಾನಿ ಎಂದೂ ಕರೆಯುತ್ತಾರೆ. ಏಕೆಂದರೆ ಈ ಕಾಯಿಲೆಯ ರೋಗಿಗಳ ಸಂಖ್ಯೆ ಇಲ್ಲಿ ತುಂಬಾ ಹೆಚ್ಚಾಗಿದೆ. ಯಾರಿಗಾದರೂ ಒಮ್ಮೆ ಈ ಕಾಯಿಲೆ ಬಂದರೆ ಸಾಕು ಅದು ಜೀವನವಿಡೀ ಕಾಡುತ್ತದೆ. ಹೀಗಾಗಿ ಹೆಚ್ಚಿನ ಜನರು ಇದರಿಂದ ಭಯಭೀತರಾಗಿದ್ದಾರೆ, ತಮ್ಮ ಶತ್ರುಗಳಿಗೂ ಈ ಕಾಯಿಲೆ ಬರಬಾರದು ಅಂತಾ ಪ್ರಾರ್ಥಿಸುತ್ತಾರೆ.


COMMERCIAL BREAK
SCROLL TO CONTINUE READING

ಮಧುಮೇಹ ಕಾಯಿಲೆಯಿಂದ ಕಿಡ್ನಿ ಕಾಯಿಲೆ ಹಾಗೂ ಹೃದಯಾಘಾತವಾಗುವ ಅಪಾಯವೂ ಇದೆ. ನಿಮಗೆ ಮಧುಮೇಹ ಬರಬಾರದು ಅಂತಾ ನೀವು ಬಯಸಿದರೆ ದೈನಂದಿನ ಜೀವನದ ಕೆಲವು ಅಭ್ಯಾಸಗಳನ್ನು ಬದಲಾಯಿಸಬೇಕಾಗುತ್ತದೆ. ಈ ಕೆಟ್ಟ ಅಭ್ಯಾಸಗಳನ್ನು ನೀವು ಇಂದಿನಿಂದಲೇ ನಿಲ್ಲಿಸಬೇಕು. ಇಲ್ಲದಿದ್ರೆ ನಿಮ್ಮ ಜೀವಕ್ಕೆ ಅಪಾಯ ಗ್ಯಾರಂಟಿ.


ಇದನ್ನೂ ಓದಿ: Diet Tips For Diabetic : ಮಧುಮೇಹಿಗಳೆ ಇಂದೇ ಈ ಆಹಾರಗಳನ್ನು ಸೇವಿಸಿ, ಸಕ್ಕರೆ ಮಟ್ಟವು ಹೆಚ್ಚಾಗುವುದಿಲ್ಲ


ಮಧುಮೇಹ ತಪ್ಪಿಸಲು ಈ ಅಭ್ಯಾಸಗಳಿಂದ ದೂರವಿರಿ  


ಮಧುಮೇಹವು ಆನುವಂಶಿಕ ಕಾರಣಗಳಿಂದ ಉಂಟಾಗಬಹುದು, ಆದರೆ ಸಾಮಾನ್ಯವಾಗಿ ಇದು ವಿಚಿತ್ರ ಜೀವನಶೈಲಿ ಮತ್ತು ಆಹಾರ ಪದ್ಧತಿಗಳಿಂದ ಉಂಟಾಗುತ್ತದೆ. ಇದಕ್ಕಾಗಿಯೇ ನಿಮ್ಮ ಅಭ್ಯಾಸಗಳಲ್ಲಿ ಕೆಲವು ಸುಧಾರಣೆಗಳನ್ನು ಮಾಡುವುದು ಉತ್ತಮ, ಇದರಿಂದ ನೀವು ಈ ಕಾಯಿಲೆಯಿಂದ ತಪ್ಪಿಸಿಕೊಳ್ಳಬಹುದು. 


1) ಸಾಕಷ್ಟು ನಿದ್ದೆ ಮಾಡದಿರುವುದು


ಒಬ್ಬ ಆರೋಗ್ಯವಂತ ವಯಸ್ಕನು ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ನಿದ್ದೆಯನ್ನು ಮಾಡಬೇಕು. ಹೀಗೆ ಮಾಡದಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಪೈಕಿ ಮಧುಮೇಹವೂ ಒಂದು. ಕಡಿಮೆ ನಿದ್ರೆ ಮಾಡುವುದು ಹಸಿವನ್ನು ನಿಯಂತ್ರಿಸುವ ಮತ್ತು ರಕ್ತದಲ್ಲಿನ ಗ್ಲೂಕೋಸ್ ನಿರ್ವಹಿಸುವ ಹಾರ್ಮೋನುಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇದರಿಂದ ದೇಹದಲ್ಲಿ ಬೊಜ್ಜು ಹೆಚ್ಚಾಗುತ್ತದೆ ಮತ್ತು ಮಧುಮೇಹದ ಅಪಾಯವು ಉಂಟಾಗುತ್ತದೆ.


2) ಬೆಳಗಿನ ಉಪಾಹಾರ ಬಿಡುವುದು


ಇಂದಿನ ದಿನಗಳಲ್ಲಿ ಅನೇಕರು ಶಾಲೆ-ಕಾಲೇಜು ಅಥವಾ ಕಚೇರಿಗೆ ಹೋಗುವ ಆತುರದಲ್ಲಿ ಬೆಳಗಿನ ಉಪಾಹಾರವನ್ನು ಬಿಟ್ಟುಬಿಡುತ್ತಾರೆ. ಆದರೆ ಇದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಯಾಗುತ್ತದೆ ಅಪ್ಪಿತಪ್ಪಿಯೂ ನೀವು ಈ ತಪ್ಪನ್ನು ಮಾಡಬೇಡಿ, ಇಲ್ಲದಿದ್ದರೆ ನೀವು ಶೀಘ್ರವೇ ಮಧುಮೇಹಕ್ಕೆ ಬಲಿಯಾಗಬಹುದು. ಬೆಳಗಿನ ಉಪಾಹಾರ ಬಿಡುವುದರಿಂದ ನೀವು ಊಟದ ಸಮಯದವರೆಗೆ ಹಸಿವಿನಿಂದ ಇರುತ್ತೀರಿ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.


3) ರಾತ್ರಿ ಊಟದ ನಂತರ ತಿನ್ನುವ ಅಭ್ಯಾಸ


ರಾತ್ರಿ ಊಟದ ನಂತರ ಮತ್ತೆ ಆಹಾರ ಸೇವಿಸುವ ಮತ್ತು ಕುಡಿಯುವ ಅಭ್ಯಾಸವು ಮಧುಮೇಹಕ್ಕೆ ಹೆಚ್ಚಾಗಿ ಕಾರಣವಾಗುತ್ತದೆ. ರಾತ್ರಿಯ ಊಟದಲ್ಲಿ ಆರೋಗ್ಯಕರವಾದ ಆಹಾರ ಸೇವಿಸಬೇಕು. ಊಟದ ನಂತರ ರಾತ್ರಿಯಲ್ಲಿ ಏನಾದರೂ ತಿನ್ನುವ ಅಭ್ಯಾಸವಿದ್ದರೆ ಅದನ್ನು ಇಂದೇ ನಿಲ್ಲಿಸಿ. ಆಹಾರದ ಮಾದರಿಗಳು ರಕ್ತದಲ್ಲಿನ ಸಕ್ಕರೆಯ ಏರಿಕೆಗೆ ಕಾರಣವಾಗಬಹುದು ಎಂದು ಹೆಚ್ಚಿನ ಆರೋಗ್ಯ ತಜ್ಞರು ನಂಬುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಇನ್ಸುಲಿನ್ ಸ್ರವಿಸುವಿಕೆಯು ಸಹ ನಿಲ್ಲುತ್ತದೆ. ನೀವು ತಡರಾತ್ರಿಯಲ್ಲಿ ಹಸಿವಿನ ಬಯಕೆ ಹೊಂದಿದ್ದರೆ ಅನಾರೋಗ್ಯಕರ ಚಿಪ್ಸ್ ಅಥವಾ ತಿಂಡಿಗಳನ್ನು ತಿನ್ನುವ ಬದಲು ಡ್ರೈ ಫ್ರೂಟ್ಸ್ ತಿನ್ನಿರಿ. ಸಿಹಿ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ.


ಇದನ್ನೂ ಓದಿ: Women's Health : ಮಹಿಳೆಯರಿಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನ ಈ 3 ವಿಧದ ಜ್ಯೂಸ್..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.