ಬೆಂಗಳೂರು : Harmful Vegetables for Type 2 Diabetes Patients: ಮಧುಮೇಹ ರೋಗಿಗಳು ತಮ್ಮ ಆಹಾರದತ್ತ ಹೆಚ್ಚಿನ ಗಮನ ಹರಿಸಬೇಕು. ತಮ್ಮ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಕೆಲವು ಆಹಾರಗಳಿಂದ ದೂರವಿರಬೇಕು. ಮಧುಮೇಹ ರೋಗಿಗಳು ಹೆಚ್ಚಿನ ಅಪಾಯವನ್ನು ತಪ್ಪಿಸುವ ಸಲುವಾಗಿ, ನಾಲ್ಕು ತರಕಾರಿಗಳನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ.


COMMERCIAL BREAK
SCROLL TO CONTINUE READING

ಮಧುಮೇಹಿಗಳು ಈ ತರಕಾರಿಗಳನ್ನು ತಿನ್ನಬಾರದು :
ಆಲೂಗಡ್ಡೆ :
ಆಲೂಗಡ್ಡೆಯನ್ನು ತರಕಾರಿಗಳ ರಾಜ ಎಂದು ಕರೆಯಲಾಗುತ್ತದೆ. ಹೆಚ್ಚಿನ ತರಕಾರಿಗಳ ಜೊತೆ ಆಲೂಗಡ್ಡೆಯನ್ನು ಸೇರಿಸಲಾಗುತ್ತದೆ. ಆದರೆ, ಮಧುಮೇಹ ರೋಗಿಗಳು ಇದನ್ನು ತಿನ್ನಬಾರದು.  ಏಕೆಂದರೆ ಅದರಲ್ಲಿ ಕಾರ್ಬೋಹೈಡ್ರೇುಟ್ ಗಳು ಮತ್ತು ಪಿಷ್ಟದ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ. ಇದರೊಂದಿಗೆ ಚಿಪ್ಸ್, ಫ್ರೆಂಚ್ ಫ್ರೈಸ್, ಆಲೂ ಟಿಕ್ಕಿ ಮುಂತಾದ ಮಸಾಲೆ ಪದಾರ್ಥಗಳನ್ನು ಕೂಡಾ ಆದಷ್ಟು ಕಡಿಮೆ ಮಾಡಬೇಕು. 


ಇದನ್ನೂ ಓದಿ : Health Care Tips : ಪುರುಷರ ಆರೋಗ್ಯಕ್ಕೆ ತುಂಬಾ ಪ್ರಯೋಜನ ಲವಂಗದ ಎಣ್ಣೆ : ಈ ರೀತಿ ಬಳಸಿ


ಮೆಕ್ಕೆಜೋಳ : 
ಜೋಳವನ್ನು ಬೆಂಕಿಯಲ್ಲಿ ಸುಟ್ಟು ತಿನ್ನುವುದು ಅಥವಾ ಬೇಯಿಸಿ ತಿನ್ನಲಾಗುತ್ತದೆ. ಇದರ ರುಚಿ ಜನರನ್ನು ಆಕರ್ಷಿಸುತ್ತದೆ. ಆದರೆ, ಇದು ಮಧುಮೇಹ ರೋಗಿಗಳಿಗೆ ಹಾನಿಕಾರಕವಾಗಿದೆ. ಏಕೆಂದರೆ ಇದು ಕಾರ್ಬೋಹೈಡ್ರೇಟ್‌ಗಳ ಸಮೃದ್ಧ ಮೂಲವಾಗಿದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.


ಸಿಹಿ ಗೆಣಸು  :
ಸಿಹಿ ಗೆಣಸು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಮಧುಮೇಹಿಗಳು ಸಿಹಿ ಗೆಣಸು ತಿನ್ನಬಾರದು. ಇದರಲ್ಲಿರುವ ಕಾರ್ಬೋಹೈಡ್ರೇಟ್‌ಗಳು ಮತ್ತು ಬೀಟಾ ಕ್ಯಾರೋಟಿನ್ ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಇದು ಸಿಹಿ ಪದಾರ್ಥವಾಗಿರುವುದರಿಂದ ಮಧುಮೇಹದಲ್ಲಿ ಇದನ್ನು ತಿನ್ನುವುದು ಸರಿಯಲ್ಲ.


ಇದನ್ನೂ ಓದಿ : Flax seeds : ಮಹಿಳೆಯರೆ ಅಪ್ಪಿತಪ್ಪಿಯೂ ಸೇವಿಸಬೇಡಿ 'ಅಗಸೆ ಬೀಜ'!


ಬಟಾಣಿ :
ಬಟಾಣಿಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಅದರ ರುಚಿ ಹೆಚ್ಚಾಗುತ್ತದೆ. ಆದರೆ ಈ ತರಕಾರಿಯನ್ನು ಕಾರ್ಬೋಹೈಡ್ರೇಟ್‌ಗಳು ಮತ್ತು ಪಿಷ್ಟದ ಶ್ರೀಮಂತ ಮೂಲ ಎಂದು  ಹೇಳಲಾಗುತ್ತದೆ. ಇದರಿಂದಾಗಿ ಬಟಾಣಿ ತಿನ್ನುವುದರಿಂದ ಮಧುಮೇಹಿಗಳ ಜೀರ್ಣಕ್ರಿಯೆ ಕೆಡುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.