High-Fiber Foods : ಮಧುಮೇಹ ರೋಗಿಗಳು ಯಾವಾಗಲೂ ಆರೋಗ್ಯಕರ ಆಹಾರವನ್ನು ಸೇವಿಸುವಂತೆ ಸಲಹೆ ನೀಡಲಾಗುತ್ತದೆ. ಇದರಿಂದಾಗಿ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅದರಲ್ಲೂ ಫೈಬರ್-ಭರಿತ ಮಧುಮೇಹ ರೋಗಿಗಳಿಗೆ ಹೆಚ್ಚು ಉಪಯುಕ್ತವಾಗಿದೆ. ಫೈಬರ್‌ನಲ್ಲಿ ಎರಡು ವಿಧಗಳಿವೆ.  ಕರಗಬಲ್ಲ ಮತ್ತು ಕರಗದ ಫೈಬರ್. ಈ ಪೈಕಿ ಕರಗುವ ಫೈಬರ್ ಮಧುಮೇಹ ರೋಗಿಗಳಿಗೆ ಹೆಚ್ಚು ಪ್ರಯೋಜನಕಾರಿ. ಏಕೆಂದರೆ ಇದು ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ. 


COMMERCIAL BREAK
SCROLL TO CONTINUE READING

ಮಧುಮೇಹ ರೋಗಿಗಳು ಫೈಬರ್ ಭರಿತ ಆಹಾರವನ್ನು ಸೇವಿಸಿ :
1. ಅಗಸೆ ಬೀಜಗಳು
ಅಗಸೆ ಬೀಜಗಳು ಸೂಪರ್‌ಫುಡ್‌ನಂತೆ ಕಾರ್ಯ ನಿರ್ವಹಿಸುತ್ತದೆ. ಇದು ಕರಗದ ಫೈಬರ್‌ನ ಸಮೃದ್ಧ ಮೂಲವಾಗಿದೆ. ನಿಯಮಿತವಾಗಿ ಅಗಸೆ ಬೀಜಗಳನ್ನು ಸೇವಿಸುತ್ತಾ ಬಂದರೆ ಮಧುಮೇಹ ರೋಗಿಗಳಿಗೆ ಹೆಚ್ಚು ಪ್ರಯೋಜನವಾಗುವುದು. ಇದು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. 


ಇದನ್ನೂ ಓದಿ : Curd Benefits: ಉಪ್ಪು ಅಥವಾ ಸಕ್ಕರೆ: ಮೊಸರನ್ನು ಯಾವುದರ ಜೊತೆ ತಿಂದರೆ ಆರೋಗ್ಯಕ್ಕೆ ಉತ್ತಮ! ತಜ್ಞರು ಹೇಳೋದೇನು?


2. ದ್ವಿದಳ ಧಾನ್ಯ
 ದ್ವಿದಳ ಧಾನ್ಯ ಪ್ರೋಟೀನ್‌ನ ಶ್ರೀಮಂತ ಮೂಲ. ಆದರೆ ಅವುಗಳು ಫೈಬರ್‌ನಲ್ಲಿ ಕೂಡಾ ಸಮೃದ್ಧವಾಗಿವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


3. ಹೋಲ್ ಗ್ರೇನ್
ಓಟ್ಸ್, ಬ್ರೌನ್ ರೈಸ್, ಹೋಲ್ ಗ್ರೇನ್ ಫ್ಲೋರ್ ಮುಂತಾದವುಗಳು ಫೈಬರ್ ಭರಿತವಾಗಿವೆ. ಇದು ನಿಧಾನವಾಗಿ ಜೀರ್ಣವಾಗುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ವೇಗವಾಗಿ ಹೆಚ್ಚಾಗುವುದಿಲ್ಲ. 


4. ಪೇರಳೆ ಹಣ್ಣು 
 ಪೇರಳೆ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಹಣ್ಣಾಗಿದೆ.  ಇದು ಫೈಬರ್‌ನ ಸಮೃದ್ಧ ಮೂಲವಾಗಿದೆ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. 
 
 ಇದನ್ನೂ ಓದಿ : Diabetes: ಖಾಲಿ ಹೊಟ್ಟೆ ತುಪ್ಪದಲ್ಲಿ ಬೆರೆಸಿ ಈ ಪದಾರ್ಥ ಸೇವಿಸಿ, ನೈಸರ್ಗಿಕವಾಗಿ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ!


5. ಮೆಂತ್ಯೆ ಬೀಜಗಳು
ಮೆಂತ್ಯೆ ಬೀಜಗಳಲ್ಲಿ ಫೈಬರ್ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ.  ಮೆಂತ್ಯೆ ಸೊಪ್ಪು ಕೂಡಾ  ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಮೆಂತ್ಯೆಯನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿ ಬೆಳಿಗ್ಗೆ ನೀರನ್ನು ಫಿಲ್ಟರ್ ಮಾಡಿ ಕುಡಿಯಿರಿ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.