ನವದೆಹಲಿ :  Best Milk Options For Diabetes : ಮಧುಮೇಹವು ಇಂದಿನ ಕಾಲದ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ಪ್ರಪಂಚದಾದ್ಯಂತ ಅದೆಷ್ಟೋ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಧುಮೇಹವು ದೇಹದ ಇನ್ಸುಲಿನ್ ಮಟ್ಟದ ಮೇಲೆ  ನೇರವಾಗಿ ಪರಿಣಾಮ ಬೀರುತ್ತದೆ. ಮಧುಮೇಹ ರೋಗಿಗಳಿಗೆ ಅನೇಕ ರೀತಿಯ ಆಹಾರ (food fr diabetec) ಮತ್ತು ಪಾನೀಯಗಳನ್ನು ನೀಡುವುದಿಲ್ಲ. ಮಧುಮೇಹ ರೋಗಿಗಳು ಎಲ್ಲಾ ಸಮಯದಲ್ಲೂ ತಮ್ಮ ಆಹಾರದ ಬಗ್ಗೆ ಜಾಗರೂಕರಾಗಿರಬೇಕು. ವಾಸ್ತವವಾಗಿ ಮಧುಮೇಹಕ್ಕೆ ಯಾವುದೇ ಚಿಕಿತ್ಸೆ ಇಲ್ಲ, ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಇದನ್ನು ನಿಯಂತ್ರಿಸಬಹುದು. ಮಧುಮೇಹಿಗಳು ವಿಶೇಷವಾಗಿ ಸಿಹಿ ಮತ್ತು ಮೈದದಿಂದ ತಯಾರಿಸಿದ ಆಹಾರಗಳಿಂದ ದೂರವಿರಬೇಕು. ಹಾಲು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ (benefits of milk) ಎಂದು ಪರಿಗಣಿಸಲಾಗುತ್ತದೆ. ಹಾಲಿನೊಂದಿಗೆ ಈ ಮೂರು ವಸ್ತುಗಳನ್ನು ಸೇವಿಸುವುದನ್ನು ಮಧುಮೇಹಿಗಳಿಗೆ ಉತ್ತಮ ಪರಿಣಾಮ ಬೀರಲಿದೆ. 


COMMERCIAL BREAK
SCROLL TO CONTINUE READING

 1. ಅರಿಶಿನ ಸೇವಿಸಿದ ಹಾಲು :  ಅರಿಶಿನ ಬೆರೆಸಿದ ಹಾಲು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು (benefits of turmeric milk). ಅರಿಶಿನ ಹಾಲನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.  ಅರಿಶಿನದಲ್ಲಿ ಇಂತಹ ಅನೇಕ ಅಂಶಗಳು ಕಂಡುಬರುತ್ತವೆ, ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಅರಿಶಿನ  ಆಂಟಿ-ಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ, ಆಂಟಿ ಇನಫ್ಲಮೆಟರಿ ಗುಣಗಳಿಂದ  ಸಮೃದ್ಧವಾಗಿದೆ. ಅರಿಶಿನ ಹಾಲು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ. 


ಇದನ್ನೂ ಓದಿ : ಬೆಳಗೆದ್ದು ಈ ಆಹಾರಗಳನ್ನು ಯಾವತ್ತು ಸೇವಿಸಬಾರದು


2. ದಾಲ್ಚಿನ್ನಿ ಹಾಲು: ದಾಲ್ಚಿನ್ನಿ ಅಂದರೆ ಒಂದು ರೀತಿಯ ಮಸಾಲೆ. ಇದನ್ನು ಯಾವುದೇ ಆಹಾರದ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ದಾಲ್ಚಿನ್ನಿ (cinamon) ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಮ್, ಜೀವಸತ್ವಗಳು, ಬೀಟಾ ಕ್ಯಾರೋಟಿನ್, ಆಲ್ಫಾ ಕ್ಯಾರೋಟಿನ್, ಲೈಕೋಪೀನ್, ಆಂಟಿ-ಆಕ್ಸಿಡೆಂಟ್,  ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ದಾಲ್ಚಿನ್ನಿ ಹಾಲು (cinamonmilk) ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು. 


3. ಬಾದಾಮಿ ಹಾಲು: ಬಾದಾಮಿ ಕೂಡ ಆರೋಗ್ಯಕ್ಕೆ (benefits of almond) ಬಹಳ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಫೈಬರ್, ಪ್ರೋಟೀನ್‌ನ ಗುಣಲಕ್ಷಣಗಳು ಕಂಡುಬರುತ್ತವೆ. ಇವು ದೇಹವನ್ನು ಅನೇಕ ಸಮಸ್ಯೆಗಳಿಂದ ರಕ್ಷಿಸಲು ಸಹಕಾರಿಯಾಗಿದೆ. ಬಾದಾಮಿ ಹಾಲನ್ನು ಕುಡಿಯುವುದರಿಂದ, ಮೆದುಳು ತೀಕ್ಷ್ಣವಾಗುತ್ತದೆ.  ರೋಗ ನಿರೋಧಕ ಶಕ್ತಿ (immunity) ಹೆಚ್ಚುತ್ತದೆ. ಅಲ್ಲದೆ  ಮಧುಮೇಹ ಕೂಡಾ ನಿಯಂತ್ರಣಕ್ಕೆ ಬರುತ್ತದೆ


ಇದನ್ನೂ ಓದಿ : Honey Real Or Fake: ಅಸಲಿ ಜೇನು ತುಪ್ಪವನ್ನು ಗುರುತಿಸುವುದು ಹೇಗೆ ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.