Black Fruits Health Benefits : ಎಲ್ಲಾ ಹಣ್ಣುಗಳು ಪೋಷಕಾಂಶಗಳಿಂದ ತುಂಬಿರುತ್ತವೆ. ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕೆಲವೊಂದು ಕಾಯಿಲೆಗಳಲ್ಲಿ ಕೆಲವೊಂದು ಹಣ್ಣುಗಳನ್ನು ಸೇವಿಸುವುದು ಸಹಕಾರಿಯಾಗಿರುತ್ತದೆ. ಆದರೆ ಮತ್ತೊಂದೆಡೆ ಕೆಲವೊಂದು ಕಾಯಿಲೆಗಳಲ್ಲಿ  ಕೆಲವು ಹಣ್ಣುಗಳ ಸೇವನೆ ಹಾನಿಕಾರಕವಾಗಿ ಕೂಡಾ ಪರಿಣಮಿಸುತ್ತದೆ. ಈ ಪೈಕಿ ಕಪ್ಪು ಹಣ್ಣುಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇವುಗಳಲ್ಲಿರುವ ಪೋಷಕಾಂಶಗಳು ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತವೆ. 


COMMERCIAL BREAK
SCROLL TO CONTINUE READING

ಕಪ್ಪು ದ್ರಾಕ್ಷಿಗಳು :
ದ್ರಾಕ್ಷಿಗಳು ರುಚಿಯಲ್ಲಿ ಹುಳಿಯಾಗಿರಬಹುದು. ಆದರೆ ಅವು ಆರೋಗ್ಯಕ್ಕೆ ತುಂಬಾ ಸಿಹಿಯಾಗಿರುತ್ತವೆ. ದ್ರಾಕ್ಷಿಯಲ್ಲಿ ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇವುಗಳ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆ ಮತ್ತು ಕೂದಲಿಗೆ ಕೂಡಾ ಪ್ರಯೋಜನಕಾರಿ.


ಇದನ್ನೂ ಓದಿ : ಅಡುಗೆ ಮಾಡುವಾಗ ಈ ಮಸಾಲೆಯನ್ನು ಬಳಸಿದರೆ ಹೊಟ್ಟೆಯ ಸಮಸ್ಯೆ ಎದುರಾಗುವುದಿಲ್ಲ !


ಕಪ್ಪು ಅಂಜೂರದ ಹಣ್ಣುಗಳು : 
ಕಪ್ಪು ಅಂಜೂರದ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇವುಗಳಲ್ಲಿರುವ ಪ್ರೋಬಯಾಟಿಕ್ ಗುಣಲಕ್ಷಣಗಳು ಜೀರ್ಣಕ್ರಿಯೆಗೆ ಬಹಳ ಪ್ರಯೋಜನಕಾರಿ. ಅಂಜೂರದಲ್ಲಿ ಫೈಬರ್ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತವೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 


ಬ್ಲಾಕ್ಬೆರಿ :
ಬ್ಲ್ಯಾಕ್ ಬೆರ್ರಿಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ವಿಟಮಿನ್ ಸಿ, ಫೈಬರ್ ಮತ್ತು ಮ್ಯಾಂಗನೀಸ್ ನಂತಹ ಪೋಷಕಾಂಶಗಳು ಇವುಗಳಲ್ಲಿ ಸಾಕಷ್ಟು ಕಂಡುಬರುತ್ತವೆ. ಅವರು ಮೆದುಳನ್ನು ಆರೋಗ್ಯಕರವಾಗಿಡುವ ಕೆಲಸ ಮಾಡುತ್ತದೆ. ಬ್ಲ್ಯಾಕ್ ಬೆರ್ರಿ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. 


ಇದನ್ನೂ ಓದಿ Health Tips: ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲು ಈ ಹಿಟ್ಟಿನ ದೋಸೆ ಸೇವಿಸಿ: ಒಂದು ವಾರದಲ್ಲಿ ಮಧುಮೇಹ ಮಾಯ!


ಕಪ್ಪು ಚೆರ್ರಿ ಹಣ್ಣು :
ಸಾಮಾನ್ಯವಾಗಿ ಜನರಿಗೆ  ಕೆಂಪು ಬಣ್ಣದ ಚೆರ್ರಿ ಹಣ್ಣಿನ ಬಗ್ಗೆ ತಿಳುವಳಿಕೆ ಇರುತ್ತದೆ. ಕಪ್ಪು ಚೆರ್ರಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.  ಸಂಧಿವಾತ ಮತ್ತು ಜೀರ್ಣಕ್ರಿಯೆಯಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಇದು ಪ್ರಯೋಜನಕಾರಿಯಾಗಿದೆ.


ಕಪ್ಪು ಒಣದ್ರಾಕ್ಷಿ :
ಕಪ್ಪು ಒಣದ್ರಾಕ್ಷಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಮತ್ತು ಕಬ್ಬಿಣಾಂಶ ಹೇರಳವಾಗಿದೆ. ಕಪ್ಪು ಒಣದ್ರಾಕ್ಷಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನು ತಿಂದರೆ ಮೂಳೆಗಳೂ ಗಟ್ಟಿಯಾಗುತ್ತವೆ. ಕಪ್ಪು ಒಣದ್ರಾಕ್ಷಿ ರಕ್ತಹೀನತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.