ನವದೆಹಲಿ : ಮಧುಮೇಹಿಗಳು ತಮ್ಮ ಜೀವನಶೈಲಿ (Lifestyle) ಮತ್ತು ಆಹಾರ ಪದ್ಧತಿಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಇದರಿಂದ ರಕ್ತದಲ್ಲಿನ ಸಕ್ಕರೆ (Blood Sugar) ಮಟ್ಟವು ನಿಯಂತ್ರಣದಲ್ಲಿರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ನೈಸರ್ಗಿಕ ವಿಧಾನಗಳಿವೆ. ತಜ್ಞರ ಪ್ರಕಾರ, ತುಳಸಿ (tulsi), ಆಲಿವ್ ಮತ್ತು ಮಧುನಾಶಿನಿ ಮುಂತಾದ ಸಸ್ಯಗಳ ಹಸಿರು ಎಲೆಗಳು ಮಧುಮೇಹದ ಸಮಸ್ಯೆ ನಿಯಂತ್ರಿಸಲು ಸಹಾಯ ಮಾಡುತ್ತದೆ.


COMMERCIAL BREAK
SCROLL TO CONTINUE READING

ಆಲಿವ್ ಎಲೆಗಳು :
ಟೈಪ್ 2 ಡಯಾಬಿಟಿಸ್ (Type2 Diabetes) ರೋಗಿಗಳು ಮುಂಜಾನೆ ಎದ್ದ ಕೂಡಲೇ ಆಲಿವ್ ಎಲೆಗಳನ್ನು (Olive leave) ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 2013 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಆಲಿವ್ ಎಲೆಗಳ ಸೇವನೆಯು ಇನ್ಸುಲಿನ್ ಪ್ರತಿರೋಧದಲ್ಲಿ ಸುಧಾರಣೆಯನ್ನು ತರುತ್ತದೆ ಎನ್ನುವುದು ಸಾಬೀತಾಗಿದೆ. ಈ ಅಧ್ಯಯನದಲ್ಲಿ, 46 ಜನರಿಗೆ ತಿನ್ನಲು ಆಲಿವ್ ಎಲೆಗಳನ್ನು ನೀಡಲಾಗಿತ್ತು. 12 ವಾರಗಳ ನಂತರ ಮತ್ತೆ ಪರೀಕ್ಷಿಸಿದಾಗ, ಇದು ಮಧುಮೇಹ ರೋಗಿಗಳಿಗೆ (Diabetic Diet) ಪ್ರಯೋಜನಕಾರಿ ಎನ್ನುವ ಅಂಶ ಬೆಳಕಿಗೆ ಬಂದಿದೆ. 


ಇದನ್ನೂ ಓದಿ :  Almond Side Effects : ನೀವು ಈ ಸಮಸ್ಯೆಗಳಿಂದ ಬಳಲುತ್ತಿದ್ದರೆ ತಿನ್ನಬೇಡಿ 'ಬಾದಾಮಿ' : ತಿಂದರೆ ಅಪಾಯ ತಪ್ಪಿದಲ್ಲ!


ಸಿಹಿ ತುಳಸಿ :
ಸ್ಟೀವಿಯಾ ಅಂದರೆ ಸಿಹಿ ತುಳಸಿ (Tulsi benefits) ಮಧುಮೇಹ ರೋಗಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. 2018 ರ ಅಧ್ಯಯನದಲ್ಲಿ, ಸಿಹಿ ತುಳಸಿ ಸೇವಿಸುವ ರೋಗಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನುವುದು ತಿಳಿದು ಬಂದಿದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​(AHA) ಮತ್ತು ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ​​(ADA) ಪ್ರಕಾರ, ಸಿಹಿ ತುಳಸಿ ಎಲೆಗಳ ಸೇವನೆಯು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.


ಟರ್ನಿಪ್ ಎಲೆಗಳು :
ಟರ್ನಿಪ್ ಅಥವಾ ಗಡ್ಡೆ ಕೋಸಿನ ಸೊಪ್ಪಿನಲ್ಲಿ (Turnip leave) ನಾರಿನ ಪ್ರಮಾಣ ಹೆಚ್ಚಾಗಿರುತ್ತದೆ. ಅಧ್ಯಯನದ ಪ್ರಕಾರ, ಟೈಪ್ 1 ಮಧುಮೇಹ ಹೊಂದಿರುವ ಜನರು ಫೈಬರ್ ಅನ್ನು ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Blood sugar) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಟರ್ನಿಪ್ ಎಲೆಗಳನ್ನು ಮುಂಜಾನೆ ಜಗಿಯುವುದರಿಂದ ಟೈಪ್ 2 ಡಯಾಬಿಟಿಸ್ (Type2 Diabetes) ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ, ಲಿಪಿಡ್ ಮತ್ತು ಇನ್ಸುಲಿನ್ ಮಟ್ಟವನ್ನು ಸುಧಾರಿಸಬಹುದು.


ಇದನ್ನೂ ಓದಿ : Black Pepper With Ghee: ಉತ್ತಮ ಆರೋಗ್ಯಕ್ಕಾಗಿ ನಿತ್ಯ ಬೆಳಿಗ್ಗೆ ಕರಿಮೆಣಸನ್ನು ತುಪ್ಪದೊಂದಿಗೆ ಸೇವಿಸಿ


ಮಧುನಾಶಿನಿ ಎಲೆ :
ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಮಧುನಾಶಿನಿ ಎಲೆ  ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. 2013 ರ ಅಧ್ಯಯನದ ಪ್ರಕಾರ, ಟೈಪ್ 1 ಮತ್ತು ಟೈಪ್ 2 ರೋಗಿಗಳಿಗೆ 18 ತಿಂಗಳ ಕಾಲ ಮಧುನಾಶಿನಿ ಎಲೆಗಳನ್ನು ನೀಡಿದಾಗ, ಇನ್ಸುಲಿನ್ ತೆಗೆದುಕೊಂಡವರಿಗಿಂತ ಅವರಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.