Diabetes Test: ನಿಖರವಾದ ರಿಸಲ್ಟ್‌ಗಾಗಿ ಶುಗರ್ ಟೆಸ್ಟ್ ಮಾಡಲು ಇದು ಬೆಸ್ಟ್ ಟೈಮ್
Diabetes Test: ಮಧುಮೇಹ ರೋಗಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಬೇಕು ಇಲ್ಲದಿದ್ದರೆ ಅನೇಕ ಇತರ ಕಾಯಿಲೆಗಳಿಗೆ ತುತ್ತಾಗಬಹುದು.
ಮಧುಮೇಹ ಪರೀಕ್ಷೆ: ಪ್ರಸ್ತುತ ಜೀವನಶೈಲಿಯಿಂದಾಗಿ ಅತಿ ಚಿಕ್ಕ ವಯಸ್ಸಿನ ಜನರಿಗೂ ಮಧುಮೇಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಡಯಾಬಿಟಿಸ್ ಇರುವವರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲವೇ, ಭವಿಷ್ಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಇನ್ನೂ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಾತ್ರವಲ್ಲ ಮಧುಮೇಹ ರೋಗಿಗಳು ಆಗಾಗ್ಗೆ ತಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಪರೀಕ್ಷಿಸುವುದು ಒಳ್ಳೆಯದು. ನಿಯಮಿತವಾಗಿ ರಕ್ತ ಪರೀಕ್ಷೆ ಮಾಡುವುದು ಮಾತ್ರವಲ್ಲ, ಅದನ್ನು ಸರಿಯಾದ ಸಮಯದಲ್ಲಿ ಮಾಡುವುದು ಸಹ ಅಗತ್ಯ. ಹಾಗಿದ್ದರೆ, ಮಧುಮೇಹಿಗಳು ಯಾವಾರ ಬ್ಲಡ್ ಟೆಸ್ಟ್ ಮಾಡಿಸುವುದು ಉತ್ತಮ ಎಂದು ತಿಳಿಯಲು ಮುಂದೆ ಓದಿ.
ವಾಸ್ತವವಾಗಿ, ಮಧುಮೇಹ ರೋಗಿಗಳು ನಿಯಮಿತವಾಗಿ ರಕ್ತವನ್ನು ಪರೀಕ್ಷಿಸುವ ಮೂಲಕ ತಮ್ಮ ಆರೋಗ್ಯದ ಮೇಲ್ವಿಚಾರಣೆ ಮಾಡಬಹುದು. ಜೊತೆಗೆ ಮುಂದಾಗಬಹುದಾದ ಬೇರೆ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು. ಮೊದಲೆಲ್ಲಾ ಮಧುಮೇಹ ರೋಗಿಗಳು ಬ್ಲಡ್ ಟೆಸ್ಟ್ ಮಾಡಿಸಲು ಪ್ಯಾಥೋಲಜಿ ಲ್ಯಾಬ್‌ಗಳಿಗೆ ಹೋಗಬೇಕಾಗಿತ್ತು, ಆದರೆ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅನೇಕ ಪೋರ್ಟಬಲ್ ರಕ್ತದ ಗ್ಲೂಕೋಸ್ ಮೀಟರ್‌ಗಳು ಲಭ್ಯವಿದ್ದು, ಮನೆಯಲ್ಲಿಯೇ ಈ ಟೆಸ್ಟ್ ಮಾಡಬಹುದಾಗಿದೆ. ಇಂದು ನಾವು ನಿಮಗೆ ಶುಗರ್ ಟೆಸ್ಟ್ ಮಾಡಲು ಉತ್ತಮ ಸಮಯ ಯಾವುದು ಮತ್ತು ನಿಮ್ಮ ಸಕ್ಕರೆಯ ಮಟ್ಟ ಹೇಗಿರಬೇಕು ಎಂದು ಮಾಹಿತಿ ನೀಡಲಿದ್ದೇವೆ.
ಇದನ್ನೂ ಓದಿ- ಡಯಾಬಿಟೀಸ್ ರೋಗಿಗಳು ಈ ಚಹಾವನ್ನು ಕುಡಿದರೆ ಸದಾ ನಿಯಂತ್ರಣದಲ್ಲಿರುತ್ತದೆ ಬ್ಲಡ್ ಶುಗರ್
ರಕ್ತದಲ್ಲಿನ ಸಕ್ಕರೆ ಮಟ್ಟ ಪರೀಕ್ಷಿಸಲು ಸರಿಯಾದ ಸಮಯ ಯಾವುದು?
ಮಧುಮೇಹಿಗಳು ನಿರಂತರ ಮೇಲ್ವಿಚಾರಣೆಯನ್ನು ಇರಿಸಿಕೊಳ್ಳಲು ನೀವು ದಿನಕ್ಕೆ ಹಲವಾರು ಬಾರಿ ರಕ್ತದಲ್ಲಿನ ಸಕ್ಕರೆ ಪರೀಕ್ಷೆಯನ್ನು ಮಾಡಬಹುದು, ಆದರೆ ಇದನ್ನು ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ. ಆದಾಗ್ಯೂ, ನೀವು ನಿಖರವಾದ ರಿಸಲ್ಟ್‌ಗಾಗಿ ಶುಗರ್ ಟೆಸ್ಟ್ ಮಾಡಲು ಸರಿಯಾದ ಸಮಯದ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ.
ಮಧುಮೇಹ ಪರೀಕ್ಷೆ ಮಾಡಿಸಲು ಇದು ಸರಿಯಾದ ಸಮಯ :
ಮಧುಮೇಹಿಗಳು ನಿಖರವಾದ ರಿಸಲ್ಟ್‌ಗಾಗಿ ಬೆಳಗಿನ ಉಪಾಹಾರ ಮತ್ತು ಭೋಜನದ
ಮೊದಲು ಶುಗರ್ ಟೆಸ್ಟ್ ಮಾಡಿಸುವುದು ಹೆಚ್ಚು ಸೂಕ್ತ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Almond Benefits : ಮಧುಮೇಹಿಗಳಿಗೆ ಪ್ರಯೋಜನಕಾರಿ 'ಬಾದಾಮಿ' : ಹೇಗೆ ಇಲ್ಲಿದೆ ಮಾಹಿತಿ!
ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ (ADA) ಪ್ರಕಾರ, ನಿಮ್ಮ ಸಕ್ಕರೆಯ ಮಟ್ಟವು ಊಟಕ್ಕೆ ಮೊದಲು 80 ರಿಂದ 130 mg / dL ಆಗಿರಬೇಕು. ಎಡಿಎ ಪ್ರಕಾರ, ನಿಮ್ಮ ರಕ್ತದಲ್ಲಿನ ಸಕ್ಕರೆಯು ಊಟದ ನಂತರ 2 ಗಂಟೆಗಳ ನಂತರ 180 mg/dL ಆಗಿರಬೇಕು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ