ಉಗುರಿನ ಬಣ್ಣವೂ ತಿಳಿಸುತ್ತೆ ನಿಮ್ಮ ಆರೋಗ್ಯದ ಗುಟ್ಟು!
ಕಣ್ಣಿನಲ್ಲಿ ಹಳದಿ ಬಣ್ಣವು ಕಾಮಾಲೆ ರೋಗವನ್ನು ಸೂಚಿಸುವಂತೆ, ಉಗುರಿನ ಬಣ್ಣವು ನಮ್ಮ ಆರೋಗ್ಯ ಸ್ಥಿತಿಯನ್ನು ಸೂಚಿಸುತ್ತದೆ.
Health Tips: ಕೈ ಬೆರಳಿನ ಉಗುರುಗಳು ನಮ್ಮ ಆರೋಗ್ಯ ಸ್ಥಿತಿಯನ್ನು ಸಹ ಸಂಕೇತಿಸುತ್ತವೆ. ಉಗುರುಗಳಲ್ಲಿ ಕಂಡುಬರುವ ಕೆಲವು ಲಕ್ಷಣಗಳು ನಮ್ಮ ದೇಹದಲ್ಲಿ ಕೆಲ ರೋಗ ಲಕ್ಷಣಗಳ ಬಗ್ಗೆ ಎಚ್ಚರಿಕೆಯ ಗಂಟೆಯಾಗಿರುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಉಗುರು ಯಾವ ಬಣ್ಣದಲ್ಲಿದ್ದರೆ ಇದು ಯಾವ ಅನಾರೋಗ್ಯದ ಸಂಕೇತವಾಗಿರುತ್ತದೆ ಎಂದು ತಿಳಿಯೋಣ...
ಉಗುರುಗಳ ಮೇಲೆ ಕಂಡು ಬರುವ ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ:-
ಬಲಹೀನ ಉಗುರುಗಳು:
ವೀಕ್ ಆಗಿರುವ ಉಗುರುಗಳು (Weak Nails) ನಮ್ಮ ದೇಹದಲ್ಲಿ ವಿಟಮಿನ್ ಎ, ವಿಟಮಿನ್ ಸಿ ಕೊರತೆಯನ್ನು ಸೂಚಿಸುತ್ತದೆ.
ಹಳದಿ ಉಗುರುಗಳು:
ಹಳದಿ ಬಣ್ಣದ ಉಗುರುಗಳು (Yellow Nails) ಮಧುಮೇಹ, ಥೈರಾಯ್ಡ್ ಹಾಗೂ ಫಂಗಸ್ ಲಕ್ಷಣಗಳನ್ನು ಸೂಚಿಸುತ್ತದೆ.
ಇದನ್ನೂ ಓದಿ- Cinnamon Water: ಮೆದುಳಿನಿಂದ ಹೃದಯದವರೆಗೂ ತುಂಬಾ ಲಾಭದಾಯಕ ಈ ಆಯುರ್ವೇದ ಪಾನೀಯ
ಉಗುರಿನ ಮೇಲೆ ಕಪ್ಪು ಗೆರೆ:
ಉಗುರಿನ ಮೇಲೆ ಕಪ್ಪುಗೆರೆಗಳಿದ್ದರೆ ಅದು ರಕ್ತನಾಳಗಳು, ಹೃದಯದ ಸೋಂಕು ಹಾಗೂ ಚರ್ಮದ ಸಮಸ್ಯೆಯ ಸಂಕೇತವಾಗಿದೆ.
ಉಗುರಿನ ಮೇಲೆ ಉದ್ದ ರೇಖೆಗಳು:
ಉಗುರಿನ ಮೇಲೆ ಉದ್ದ ರೇಖೆಗಳು ಕಂಡು ಬಂದರೆ ಇದು ದೇಹದಲ್ಲಿ ಕಬ್ಬಿಣದ ಕೊರತೆ, ರಕ್ತ ಹೀನತೆಯ ಸಾಮಾನ್ಯ ಲಕ್ಷಣವಾಗಿದೆ.
ಇದನ್ನೂ ಓದಿ- Beetroot: ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಇಷ್ಟೊಂದು ಆರೋಗ್ಯ ಪ್ರಯೋಜನಗಳಿವೆ
ಉಗುರಿನ ಮೇಲೆ ಅಡ್ಡರೇಖೆಗಳು:
ದೇಹದಲ್ಲಿ ಜಿಂಕ್ ಕೊರತೆ, ಮೂತ್ರಪಿಂಡದ ತೊಂದರೆಯಂತಹ ಸಮಸ್ಯೆಗಳಿದ್ದರೆ ಉಗುರುಗಳ ಮೇಲೆ ಅದ್ದರೇಖೆಗಳು ಕಾಣಿಸಿಕೊಳ್ಳುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.