ಕಿವಿ ಸ್ವಚ್ಛಗೊಳಿಸಲು ಸಲಹೆ:  ಕಿವಿಯ ಉತ್ತಮ ಆರೋಗ್ಯಕ್ಕಾಗಿ ಆಗಾಗ್ಗೆ ಕಿವಿಯನ್ನು ಸ್ವಚ್ಚಗೊಳಿಸಬೇಕು. ಇಲ್ಲವೇ, ಶ್ರವಣ ಸಮಸ್ಯೆಗಳು ಉದ್ಭವವಾಗುತ್ತವೆ. ಕಿವಿಯನ್ನು ಸ್ವಚ್ಛಗೊಳಿಸುವುದು ಮಾತ್ರವಲ್ಲ ಈ ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಸಹ ಬಹಳ ಮುಖ್ಯ. ಇಲ್ಲದಿದ್ದರೆ, ದೇಹದ ಈ ನಿರ್ದಿಷ್ಟ ಭಾಗವು ತೀವ್ರವಾಗಿ ಹಾನಿಗೊಳಗಾಗಬಹುದು.  


COMMERCIAL BREAK
SCROLL TO CONTINUE READING

ಕಿವಿ ಮೇಣದ ರಚನೆಯು ಒಂದು ಸಾಮಾನ್ಯ ಪ್ರಕ್ರಿಯೆಯಾಗಿದೆ, ಇದು ವಾಸ್ತವವಾಗಿ ನಮ್ಮ ಕಿವಿಯೋಲೆಯನ್ನು ರಕ್ಷಿಸುತ್ತದೆ, ಆದರೆ ಅದು ಹೆಚ್ಚು ಸಂಗ್ರಹವಾದರೆ ಶ್ರವಣ ಸಮಸ್ಯೆ ಉಂಟಾಗುತ್ತದೆ. ಅದಕ್ಕಾಗಿಯೇ, ನಿಯಮಿತವಾಗಿ ಕಿವಿ ಕ್ಲೀನ್ ಮಾಡುತ್ತಿರಬೇಕು. ಆದರೆ, ಜನರು ಈ ಸಮಯದಲ್ಲಿ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುತ್ತಾರೆ. ಇದು ಕಿವಿಯ ಮೇಲೆ ಗಂಭೀರ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಅಂತಹ ತಪ್ಪುಗಳ ಬಗ್ಗೆ ತಿಳಿಯೋಣ...


ಕಿವಿಯನ್ನು ಸ್ವಚ್ಛಗೊಳಿಸುವಾಗ ಇಂತಹ ತಪ್ಪು ಮಾಡಬೇಡಿ:
ಈ ವಸ್ತುಗಳನ್ನು ಕಿವಿಯಲ್ಲಿ ಹಾಕಬೇಡಿ:

ನಮ್ಮಲ್ಲಿ ಹಲವರು ಕಿವಿ ಸ್ವಚ್ಛಗೊಳಿಸಲು  ಟೂತ್ಪಿಕ್ಸ್, ಸೇಫ್ಟಿ ಪಿನ್ಗಳು, ಕೀಗಳು, ಹೇರ್ ಕ್ಲಿಬ್ ಗಳನ್ನು ಬಳಸುತ್ತಾರೆ. ಆದರೆ, ಇದರಿಂದ ಕಿವಿಯಲ್ಲಿ ಗಾಯ ಅಥವಾ ರಕ್ತಸ್ರಾವದಂತಹ ಅಪಾಯಗಳಾಗಬಹುದು. ಇದರಿಂದ ಕಿವಿಯೋಲೆಗಳು ಹಾನಿಗೊಳಗಾಗುತ್ತವೆ. ಹಲವು ಸಂದರ್ಭದಲ್ಲಿ ಇದು ಕಿವುಡಿನ ಸಮಸ್ಯೆಗೂ ಕಾರಣವಾಗಬಹುದು.


ಇದನ್ನೂ ಓದಿ- Cholesterol ಹೆಚ್ಚಾಗುವುದು ಎಚ್ಚರಿಕೆಯ ಕರೆಗಂಟೆ, ಈ 6 ಸಂಗತಿಗಳ ಬಗ್ಗೆ ಎಚ್ಚರಿಕೆವಹಿಸಿ


ಹತ್ತಿ ಸ್ವ್ಯಾಬ್ ಬಳಕೆ ಅಪಾಯಕಾರಿ:
ಕಿವಿ ಕ್ಲೀನ್ ಮಾಡಲು ಅನೇಕ ಜನರು ವಿವೇಚನೆಯಿಲ್ಲದೆ ಹತ್ತಿ ಸ್ವ್ಯಾಬ್ ಅನ್ನು ಬಳಸುತ್ತಾರೆ, ಆದರೆ ಕಿವಿಯನ್ನು ಸ್ವಚ್ಛಗೊಳಿಸಲು ಇದು ಸರಿಯಾದ ಮಾರ್ಗವಲ್ಲ. ಇದು ಕಿವಿಯ ಮೇಣವನ್ನು ಒಳಕ್ಕೆ ತಳ್ಳುತ್ತದೆ, ಇದು ಇಯರ್ ಡ್ರಮ್ ಅಂದರೆ ಕಿವಿ ತಮಟೆ  ಛಿದ್ರವಾಗುವ ಅಪಾಯವನ್ನು ಸೃಷ್ಟಿಸುತ್ತದೆ. 


ಇಯರ್ ಕ್ಯಾಂಡ್ಲಿಂಗ್ ಅನ್ನು ತಪ್ಪಿಸಿ:
ಸಾಮಾಜಿಕ ಮಾಧ್ಯಮದ ಯುಗದಲ್ಲಿ, ಇಯರ್ ಕ್ಯಾಂಡ್ಲಿಂಗ್ ಈ ದಿನಗಳಲ್ಲಿ ಬಹಳ ಜನಪ್ರಿಯವಾಗುತ್ತಿದೆ, ಆದರೆ ಹೆಚ್ಚಿನ ಓಟೋಲರಿಂಗೋಲಜಿಸ್ಟ್ಗಳು ಅದನ್ನು ಪರಿಣಾಮಕಾರಿ ಎಂದು ಪರಿಗಣಿಸುವುದಿಲ್ಲ. ಅಲ್ಲದೆ, ಈ ವಿಧಾನವು ಅಪಾಯದಿಂದ ಮುಕ್ತವಾಗಿಲ್ಲ, ಏಕೆಂದರೆ ಇದು ಮುಖ, ಕೂದಲು, ಹೊರ ಕಿವಿ ಮತ್ತು ಕಿವಿಯ ಒಳಭಾಗವನ್ನು ಸುಡುತ್ತದೆ.


[[{"fid":"249296","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇದನ್ನೂ ಓದಿ- Diabetes: ಮಧುಮೇಹ ಕಾಯಿಲೆಗೆ ನಿಮ್ಮ ಅಡುಗೆಮನೆಯ ಈ ಮಸಾಲೆ ರಾಮಬಾಣ


ಕಿವಿ ಸ್ವಚ್ಛಗೊಳಿಸಲು ಆರೋಗ್ಯಕರ ವಿಧಾನ:
ನೀವೇ ಕಿವಿಯನ್ನು ಸ್ವಚ್ಛಗೊಳಿಸದೆ ಓಟೋಲರಿಂಗೋಲಜಿಸ್ಟ್ಗಳ ಸಹಾಯವನ್ನು ತೆಗೆದುಕೊಳ್ಳುವುದು ಉತ್ತಮ. ಒಂದೊಮ್ಮೆ ನೀವೇ ಕಿವಿ ಕ್ಲೀನ್ ಮಾಡಬೇಕಿದ್ದರೆ, ನಂತರ ಗ್ಲಿಸರಿನ್, ಖನಿಜ ತೈಲ ಅಥವಾ ಸಾಸಿವೆ ಎಣ್ಣೆಯ ಕೆಲವು ಹನಿಗಳನ್ನು ನಿಮ್ಮ ಕಿವಿಗೆ ಹಾಕುವ ಮೂಲಕ ಇಯರ್ವಾಕ್ಸ್ ಅನ್ನು ಮೃದುಗೊಳಿಸಿ ನಂತರ ಮೃದುವಾದ ಸ್ವಚ್ಚವಾದ ವಸ್ತುವಿನ ಸಹಾಯದಿಂದ ಅದನ್ನು ಸ್ವಚ್ಛಗೊಳಿಸಿ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.