curd side effects: ಬೇಸಿಗೆ ಬಂದಿದೆ ಎಂದರೆ ನಮ್ಮ ದೇಹದಲ್ಲಿ ಶಾಖ ಹೆಚ್ಚು ಉತ್ಪತ್ತಿಯಾಗುತ್ತದೆ. ಇದು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದಕ್ಕೇ ಬೇಸಿಗೆಯಲ್ಲಿ ಮೊಸರು ತಿನ್ನಬೇಕು ಎಂದು ಮನೆಯಲ್ಲಿ ದೊಡ್ಡವರು ಹೇಳುತ್ತಲೇ ಇರುತ್ತಾರೆ. ಇದು ಅನೇಕ ರೀತಿಯ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇದು ಸತ್ಯ ಕೂಡ ಹೌದು. ಕರುಳಿನ ಆರೋಗ್ಯವನ್ನು ಮೊಸರು ಸುಧಾರಿಸುತ್ತದೆ. ಹಲವಾರು ಆರೋಗ್ಯ ಪ್ರಯೋಜನಗಳ ಹೊರತಾಗಿಯೂ, ಮೊಸರನ್ನು ಕೆಲವು ಆಹಾರಗಳೊಂದಿಗೆ ಬೆರೆಸಬಾರದು.  


COMMERCIAL BREAK
SCROLL TO CONTINUE READING

ಎಣ್ಣೆಯುಕ್ತ ಆಹಾರಗಳು: ಕರಿದ ಪದಾರ್ಥ, ಪರಾಠಾ, ಚಪಾತಿ, ಪೂರಿಗಳ ಜೊತೆ ಮೊಸರನ್ನು ಸೇವಿಸಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. 


ಮೀನು ಮತ್ತು ಮೊಸರು : ಮಾಂಸಾಹಾರವನ್ನು ಮೊಸರಿನ ಜೊತೆ ಸೇವಿಸಬಾರದು. ಮೀನು ಮತ್ತು ಮೊಸರು ಎಂದಿಗೂ ಒಟ್ಟಿಗೆ ಹೋಗುವುದಿಲ್ಲ. ಅತಿಯಾಗಿ ತಿನ್ನುವುದರಿಂದ ಹೊಟ್ಟೆಯ ಸಮಸ್ಯೆ ಉಂಟಾಗುತ್ತದೆ.


ಇದನ್ನೂ ಓದಿ: Diabetes: ನಿಂಬೆ ರಸವನ್ನು ಇದರಲ್ಲಿ ಬೆರೆಸಿ ಕುಡಿಯಿರಿ ಸಾಕು.. ರಕ್ತದಲ್ಲಿ ಶುಗರ್ ಲೆವೆಲ್ ಹೆಚ್ಚಾಗೋದೇ ಇಲ್ಲ !


ಹಾಲು: ಹಾಲು ನಮ್ಮ ದೇಹದಲ್ಲಿ ಆಸಿಡಿಟಿ ಹೆಚ್ಚಿಸುತ್ತದೆ. ಹಾಗಾಗಿ ಮೊಸರಿನ ಜೊತೆ ತಿಂದರೆ ಹೊಟ್ಟೆ ಉರಿ, ಗ್ಯಾಸ್ ಸಮಸ್ಯೆ ಕಾಡುತ್ತದೆ. ಹಾಗಾಗಿ ಹಾಲು ಮತ್ತು ಮೊಸರನ್ನು ಒಟ್ಟಿಗೆ ತಿನ್ನಬಾರದು.


ಈರುಳ್ಳಿ: ಅನೇಕರು ಈರುಳ್ಳಿ ಮತ್ತು ಮೊಸರು ಎರಡನ್ನೂ ಒಟ್ಟಿಗೆ ತಿನ್ನುತ್ತಾರೆ. ಆದರೆ ಇವೆರಡೂ ಒಂದಕ್ಕೊಂದು ಹೊಂದಿಕೆಯಾಗುವುದಿಲ್ಲ ಎಂದು ಹಲವರು ಹೇಳುತ್ತಾರೆ. ಹಾಗೆ ತಿನ್ನುವುದರಿಂದ ಚರ್ಮದ ಅಲರ್ಜಿ ಉಂಟಾಗುತ್ತದೆ. ಹಾಗಾಗಿ ಈ ಎರಡನ್ನೂ ಒಟ್ಟಿಗೆ ತಿನ್ನಬೇಡಿ.


ಮಾವು: ಮಾವು ಉಷ್ಣ ಗುಣವನ್ನು ಹೊಂದಿದೆ. ಆದರೆ ಮೊಸರು ದೇಹವನ್ನು ತಂಪಾಗಿಸುತ್ತದೆ. ಆದುದರಿಂದ ಇವೆರಡೂ ಸೇರಿದರೆ ಅಜೀರ್ಣವಾಗುವ ಸಂಭವ ಹೆಚ್ಚು.


ಇದನ್ನೂ ಓದಿ: ಮೂಲವ್ಯಾಧಿಗೆ ಒಂದೇ ಮದ್ದು ಅನ್ನದ ಗಂಜಿ.. ಈ ರೀತಿ ಸೇವಿಸಿದರೆ ಆರೋಗ್ಯಕ್ಕಿದೆ ಭರಪೂರ ಲಾಭ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.