ಬೆಂಗಳೂರು: ಚಳಿಗಾಲದ ಋತುವಿನಲ್ಲಿ ಸನ್ ಬಾಥ್ ಮಾಡಲು ಹಲವರಿಗೆ ಇಷ್ಟ. ಇದಲ್ಲದೆ, ಬಿಸಿಲಿನಲ್ಲಿ ನಿಂತು ಕಡಲೇಕಾಯಿ ತಿನ್ನುವುದು ಕೂಡ ಹಲವರಿಗೆ ಇಷ್ಟವಾಗುತ್ತದೆ. ಚಳಿಗಾಲದಲ್ಲಿ ಅತ್ಯುತ್ತಮ ತಿನುಸುಗಳಲ್ಲಿ ಕಡಲೆಕಾಯಿ ಮೊದಲ ಸ್ಥಾನದಲ್ಲಿದೆ. ಏಕೆಂದರೆ ಅದರೊಳಗೆ ಅಂತಹ ಅನೇಕ ಪೌಷ್ಟಿಕಾಂಶಗಳಿವೆ ಮತ್ತು ಇದು ಆರೋಗ್ಯಕ್ಕೆ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಆದರೆ ನಿಮಗೂ ಒಂದು ವೇಳೆ ಚಳಿಗಾಲದಲ್ಲಿ ದಿನವಿಡೀ ಕಡಲೆಕಾಯಿ ತಿನ್ನುವ ಅಭ್ಯಾಸವಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ, ಹೌದು, ನೀವು ತಕ್ಷಣ ಈ ಅಭ್ಯಾಸವನ್ನು ಬಿಡುವುದು ಒಳಿತು.  ಏಕೆಂದರೆ ನೀವು ಒಂದೇ ಬಾರಿಗೆ ಅಗತ್ಯಕ್ಕಿಂತ ಹೆಚ್ಚು ಕಡಲೆಕಾಯಿಯನ್ನು ಸೇವಿಸಿದರೆ, ನಿಮಗೆ ಹೊಟ್ಟೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಎದುರಾಗಬಹುದು. ಉದಾಹರಣೆಗೆ ಹೊಟ್ಟೆ ಉಬ್ಬರ, ಅತಿಸಾರ ಮತ್ತು ಮಲಬದ್ಧತೆ ಇತ್ಯಾದಿಗಳು. ಇದಲ್ಲದೇ ಶೇಂಗಾ ತಿನ್ನುವುದರಿಂದ ಪಾರ್ಶ್ವವಾಯು, ಹೃದಯಾಘಾತ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳೂ ಬರಬಹುದು (Lifestyle News In Kannada).


COMMERCIAL BREAK
SCROLL TO CONTINUE READING

ಚಳಿಗಾಲದಲ್ಲಿ ಒಂದೇ ಬಾರಿ ಅತಿಯಾದ ಕಡಲೆ ಕಾಯಿ ತಿನ್ನಬಾರದು
ಮೊದಲನೆಯದಾಗಿ, ನೀವು ದಿನಕ್ಕೆ ಒಂದು ಹಿಡಿ ಕಡಲೆಕಾಯಿಯನ್ನು ಮಾತ್ರ ತಿನ್ನಬೇಕು. ಕಡಲೆಕಾಯಿಯನ್ನು ತಿನ್ನಲು ಉತ್ತಮ ಸಮಯವೆಂದರೆ ಹಗಲು ಮತ್ತು ಸಂಜೆ. ನೀವು ಕಡಲೆಕಾಯಿಯನ್ನು ಅತಿಯಾಗಿ ಸೇವಿಸಿದರೆ, ದೇಹದಲ್ಲಿ ಅಲರ್ಜಿಯ ಸಮಸ್ಯೆಗಳು ಉಂಟಾಗಬಹುದು ಮತ್ತು ಮಲಬದ್ಧತೆ, ಅತಿಸಾರ ಮತ್ತು ಹೊಟ್ಟೆ ಉಬ್ಬರದ ಸಾಧ್ಯತೆಯೂ ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ಕಡಲೆಕಾಯಿ ತಿನ್ನುವುದಕ್ಕೂ ಮತ್ತು ನಿಮ್ಮ ತೂಕ ಹೆಚ್ಚಳಕ್ಕೆ ಯಾವುದೇ ಸಂಬಂಧವಿಲ್ಲ ಎಂದು ನೀವು ಭಾವಿಸುತ್ತಿದ್ದರೆ, ಅದು ತಪ್ಪು. ಕನಿಷ್ಠ ಒಂದು ಹಿಡಿ ಕಡಲೆಕಾಯಿಯಲ್ಲಿ 170 ಕ್ಯಾಲೊರಿಗಳಿರುತ್ತವೆ, ಆದ್ದರಿಂದ ಒಂದೇ ದಿನದಲ್ಲಿ ಹೆಚ್ಚು ಕಡಲೆಕಾಯಿ ಸೇವನೆಯನ್ನು ಆದಷ್ಟು ತಪ್ಪಿಸಿ.


ಇದನ್ನೂ ಓದಿ-ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಮಟ್ಟಕ್ಕೆ ಕಡಿವಾಣ ಹಾಕುತ್ತೆ ಈ ಆಯುರ್ವೇದ ಗಿಡಮೂಲಿಕೆ!


ಅಧಿಕ ರಕ್ತದೊತ್ತಡದಂತಹ ಸಮಸ್ಯೆ ಇರಬಹುದು!
ಚಳಿಗಾಲದಲ್ಲಿ ಅಗ್ಗದ ದರದಲ್ಲಿ ಸಿಗುವ ದ್ವಿದಳ ಧಾನ್ಯಗಳಲ್ಲಿ ಕಡಲೆಕಾಯಿಯೂ ಕೂಡ ಒಂದು. ಆದರೆ ಇದರಲ್ಲಿ ರಂಜಕ ಅತಿ ಹೆಚ್ಚು  ಪ್ರಮಾಣದಲ್ಲಿರುತ್ತದೆ, ಹೀಗಾಗಿ ನೀವು ಅವುಗಳನು ಅತಿಯಾಗಿ ಸೇವಿಸಿದರೆ ನಿಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆ ಎದುರಾಗಬಹುದು. ನಮ್ಮ ದೇಹದ ಅನೇಕ ಭಾಗಗಳಲ್ಲಿ ಅಲರ್ಜಿಯಂತಹ ಸಮಸ್ಯೆಗಳು ಎದುರಾಗಬಹುದು ಮತ್ತು ಇದಕ್ಕೆ ಕಾರಣ ನಿಮ್ಮ ಕಡಲೆಕಾಯಿಯೂ ಆಗಿರಬಹುದು. ಏಕೆಂದರೆ ಕಡಲೆಕಾಯಿ ಒಂದು ಬಿಸಿ ಗುಣಧರ್ಮದ ಪದಾರ್ಥವಾಗಿದೆ. ನೀವು ದೇಹದಲ್ಲಿ ನಿಮ್ಮ ದೇಹದಲ್ಲಿಯೂ ಕೂಡ ಇಂತಹ ಸಮಸ್ಯೆಗಳು ಕಾಣಿಸಿಕೊಂಡರೆ, ಕಡಲೆಕಾಯಿಯನ್ನು ತಿನ್ನುವುದನ್ನು ತಕ್ಷಣಕ್ಕೆ ನಿಲ್ಲಿಸಿ ಅಥವಾ ಸೇವನೆಯ ಪ್ರಾಮಾನವನ್ನು ಕಡಿಮೆ ಮಾಡಿ. ಯಾವುದನ್ನಾದರೂ ಅತಿಯಾಗಿ ತಿನ್ನುವುದು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.


ಇದನ್ನೂ ಓದಿ-ಕೇವಲ ಈ ಒಂದು ಬಿಳಿ ಪದಾರ್ಥ ಬಳಸಿ ಚಿಟಿಕೆ ಹೊಡೆಯೋದ್ರಲ್ಲಿ ನೈಸರ್ಗಿಕವಾಗಿ ನಿಮ್ಮ ಬಿಳಿ ಕೂದಲುಗಳನ್ನು ಕಪ್ಪಾಗಿಸಿ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.