White Hair Problem: ನೈಸರ್ಗಿಕವಾಗಿ ಕೂದಲು ಕಪ್ಪಾಗಿಸಲು ಈ ವಿಧಾನಗಳನ್ನು ಎಂದಿಗೂ ಅನುಸರಿಸಬೇಡಿ
White Hair Home Remedies: ತಲೆಗೂದಲನ್ನು ಕಪ್ಪಾಗಿಸಲು ನಾವು ನೈಸರ್ಗಿಕ ವಿಧಾನಗಳನ್ನು ಅನುಸರಿಸಬಹುದು. ಆದರೆ, ಕೆಲ ಉಪಾಯಗಳನ್ನು ನಾವು ಎಂದಿಗೂ ಕೂಡ ಅನುಸರಿಸಬಾರದು ಏಕೆಂದರೆ ಇವುಗಳಿಂದ ಕೂದಲುಗಳು ಎಂದಿಗೂ ಕಪ್ಪಾಗುವುದಿಲ್ಲ
Premature White Hair Problem Solution: ಇತ್ತೀಚಿನ ದಿನಗಳಲ್ಲಿ ತುಂಬಾ ಕಿರಿಯ ವಯಸ್ಸಿನಲ್ಲಿಯೇ ಯುವಕರ ಕೂದಲು ಬಿಳಿಯಾಗಲಾರಂಭಿಸಿವೆ, ಇದರಿಂದ ಯುವಕರು ಕಡಿಮೆ ಆತ್ಮವಿಶ್ವಾಸ ಮತ್ತು ಮುಜುಗರವನ್ನು ಎದುರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಉತ್ಪನ್ನಗಳು ಮತ್ತು ಹೇರ್ ಡೈಗಳನ್ನು ಬಳಸುವುದರಿಂದ ಲಾಭದ ಬದಲು ಹಾನಿಯೇ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ.
ನೈಸರ್ಗಿಕವಾಗಿ ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಿ
ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಮನೆಯಲ್ಲಿಯೇ ಇರುವ ಕೆಲ ವಸ್ತುಗಳನ್ನು ಬಳಸಲಾಗುತ್ತದೆ, ಇದರಿಂದ ನೀವು ಬಯಸಿದ ಫಲಿತಾಂಶವನ್ನು ಕೂಡ ನೀವು ಕಾಣಬಹುದು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಕೆಲವರು ಕಪ್ಪು ಕೂದಲನ್ನು ಮರಳಿ ಪಡೆಯಲು ಅಡುಗೆ ಮನೆಯಲ್ಲಿ ಬಳಸುವ ವಸ್ತುಗಳನ್ನು ಬಳಸುತ್ತಾರೆ, ಇದರಿಂದ ಯಾವುದೇ ಪ್ರಯೋಜನವಿಲ್ಲ. ಹೌದು, ಇದರಿಂದ ನೀವು ನಿಮ್ಮ ಸಮಯವನ್ನು ವ್ಯರ್ಥ ಮಾಡದೆ ಇರುವುದು ಉತ್ತಮ.
ಈ 3 ವಸ್ತುಗಳಿಂದ ಬಿಳಿ ಕೂದಲು ಹೋಗುವುದಿಲ್ಲ
1. ಈರುಳ್ಳಿ
ಸಾಮಾನ್ಯವಾಗಿ ಕೂದಲಿನ ಬಲವರ್ಧನೆ ಮತ್ತು ಕೂದಲಿನ ಬೆಳವಣಿಗೆಗೆ ಈರುಳ್ಳಿ ಪರಿಣಾಮಕಾರಿ ಔಷಧವೆಂದು ಪರಿಗಣಿಸಲಾಗುತ್ತದೆ, ಇದರಲ್ಲಿರುವ ಗಂಧಕವು ಕೂದಲು ಉದುರುವಿಕೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಆದರೆ, ಅನೇಕ ಜನರು ಈ ತರಕಾರಿಯನ್ನು ಬಿಳಿ ಕೂದಲಿಗೆ ಪರಿಹಾರವೆಂದು ತಪ್ಪಾಗಿ ಭಾವಿಸುತ್ತಾರೆ, ಆದರೆ ಸತ್ಯವೆಂದರೆ ಕೂದಲು ಕಪ್ಪಾಗಿಸಲು ಈರುಳ್ಳಿ ಉಪಯುಕ್ತವಲ್ಲ.
2. ಮೊಸರು
ಮೊಸರಿನ ಔಷಧೀಯ ಗುಣಗಳ ಬಗ್ಗೆ ನಮಗೆಲ್ಲರಿಗೂ ಇಳಿದೆ ಇದೆ, ಮೊಸರಿನ ಬ್ಯಾಕ್ಟೀರಿಯಾ ವಿರೋಧಿ ಗುಣವು ತಲೆಹೊಟ್ಟು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ ವಿಪರ್ಯಾಸ ಎಂಬಂತೆ ತಲೆಗೂದಲು ಕಪ್ಪಾಗುತ್ತದೆ ಎಂಬ ಆಸೆಯಿಂದ ಕೆಲವರು ಸ್ನಾನ ಮಾಡುವಾಗ ಮೊಸರನ್ನು ತಲೆಗೆ ಹಚ್ಚಿಕೊಳ್ಳುತ್ತಾರೆ ಆದರೆ ಅಂತಹದ್ದೇನೂ ಆಗುವುದಿಲ್ಲ.
3. ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಸಲ್ಫರ್ ಅಂಶವಿದೆ, ಇದು ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಆದರೆ ನೀವು ಪೇಸ್ಟ್ ತಯಾರಿಸಿ ತಲೆಗೆ ಹಚ್ಚಿದರೆ ಅದು ಎಂದಿಗೂ ನಿಮ್ಮ ತಲೆ ಕೂದಳಲು ಕಪ್ಪಾಗುವುದಿಲ್ಲ, ನೀವೂ ಕೂಡ ಒಂದು ವೇಳೆ ಈ ರೀತಿ ಪ್ರಯತ್ನಿಸುತ್ತಿದ್ದರೆ, ಅದನ್ನು ಇಂದೇ ಬಿಟ್ಟುಬಿಡಿ.
ಇದನ್ನೂ ಓದಿ-Copper Utensils In Winter: ಚಳಿಗಾಲದಲ್ಲಿ ತಾಮ್ರದ ಪಾತ್ರೆಯಲ್ಲಿನ ನೀರು ಸೇವನೆ ಎಷ್ಟು ಉಚಿತ?
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.