ಹೃದಯಾಘಾತ ಸಂಭವಿಸುವ ಮೊದಲು ಕಂಡುಬರುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ:  ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ ಜನರ ಜೀವನವು ನಿರಂತರವಾಗಿ ಬದಲಾಗುತ್ತಿದೆ. ಹೆಚ್ಚಿನ ಜನರು ಹೃದಯಾಘಾತಕ್ಕೆ ಬಲಿಯಾಗಲು ಇದೇ ಕಾರಣ. ಕೆಲವರಲ್ಲಿ ಹೃದಯಾಘಾತಕ್ಕೂ ಮೊದಲು ಹಲವು ಸೌಮ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಆದರೆ, ಹಲವು ಸಂದರ್ಭಗಳಲ್ಲಿ ಬಹುತೇಕ ಮಂದಿ ಇದರಿಂದ ಏನೂ ಆಗುವುದಿಲ್ಲ ಎಂದು ಅವುಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ, ಇದು ನಿಮ್ಮನ್ನು ಅಪಾಯದ ಅಂಚಿಗೆ ದೂಡಬಹುದು. ಹಾಗಾಗಿ ಹೃದಯಾಘಾತದ ಮೊದಲು ಕಂಡು ಬರುವ ಕೆಲವು ಸಾಮಾನ್ಯ ಚಿಹ್ನೆಗಳು ಯಾವುವು ಎಂದು  ತಿಳಿದುಕೊಳ್ಳುವುದು ಬಹಳ ಮುಖ್ಯ.  


COMMERCIAL BREAK
SCROLL TO CONTINUE READING

ಹೃದಯಾಘಾತ ಯಾವಾಗ ಸಂಭವಿಸುತ್ತದೆ?
ಹೃದಯದ ಒಂದು ಭಾಗಕ್ಕೆ ರಕ್ತ ಪೂರೈಕೆ ಸ್ಥಗಿತಗೊಂಡಾಗ ಹೃದಯಾಘಾತ ಸಂಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದೀರ್ಘಕಾಲದವರೆಗೆ ರಕ್ತದ ಹರಿವು ಅಡ್ಡಿಪಡಿಸಿದಾಗ, ನಂತರ ಹೃದಯ ಸ್ನಾಯು ಹಾನಿಯಾಗಲು ಪ್ರಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹೃದಯಾಘಾತವಾಗುವ ಸಂಭವ ಹೆಚ್ಚು ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Green Leaves For Diabetes: ಮಧುಮೇಹಿಗಳಿಗೆ ಪರಿಹಾರ ನೀಡಲಿವೆ ಈ ಮೂರು ಹಸಿರು ಎಲೆಗಳು


ಹೃದಯಾಘಾತದ ಮೊದಲು ಕಂಡು ಬರುವ ಲಕ್ಷಣಗಳು:
* ಅಧಿಕ ರಕ್ತದೊತ್ತಡ:
ಅಧಿಕ ರಕ್ತದೊತ್ತಡವನ್ನು ಯಾವುದೇ ಕಾರಣವಿಲ್ಲದೆ ಮೂಕ ಕೊಲೆಗಾರ ಎಂದು ಕರೆಯಲಾಗುತ್ತದೆ. ಬಿಪಿ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಮಾರಣಾಂತಿಕವೆಂದು ಸಾಬೀತುಪಡಿಸಬಹುದು ಮತ್ತು ಕೆಟ್ಟ ಸಂದರ್ಭಗಳಲ್ಲಿ ಇದು ಹೃದಯಾಘಾತ, ಹೃದಯ ವೈಫಲ್ಯ, ರಕ್ತನಾಳ, ಪಾರ್ಶ್ವವಾಯು, ಮೆಮೊರಿ ಸಮಸ್ಯೆಗಳು ಅಥವಾ ಬುದ್ಧಿಮಾಂದ್ಯತೆಯನ್ನು ಉಂಟುಮಾಡಬಹುದು. ಗಂಭೀರ ಕಾಯಿಲೆಗಳ ಅಪಾಯವನ್ನು ತಪ್ಪಿಸಲು ರಕ್ತದೊತ್ತಡವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವುದು ಅತ್ಯಗತ್ಯ.


* ಆಯಾಸ: ನಿಮ್ಮ ದಿನ ನಿತ್ಯದ ಕೆಲಸಗಳನ್ನು ಸುಲಭವಾಗಿ ಮಾಡಲು ನಿಮಗೆ ಸಾಧ್ಯವಾಗುತ್ತಿಲ್ಲವೇ ಆಗ ಇದು ಅಧಿಕ ರಕ್ತದೊತ್ತಡದ ಕಾರಣದಿಂದಾಗಿರಬಹುದು. ಯಾವುದೇ ಕೆಲಸ ಮಾಡಿದರೂ ದಣಿದ ಅನುಭವವಾಗುತ್ತಿದ್ದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.  


ಇದನ್ನೂ ಓದಿ- Health Tips: ಎದೆಯುರಿ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಈ ಮನೆಮದ್ದು ಟ್ರೈ ಮಾಡಿ...


* ಯಾವುದೇ ಕಾರಣವಿಲ್ಲದೆ ಪದೇ ಪದೇ ಇದ್ದಕ್ಕಿದ್ದಂತೆ ತಲೆತಿರುಗುವಿಕೆ ಹಾಗೂ ದೌರ್ಬಲ್ಯ ಉಂಟಾಗುವುದು ಕೂಡ ಹೃದಯಾಘಾತದ ಲಕ್ಷಣವಾಗಿರಬಹುದು. ಹಾಗಾಗಿ ಇಂತಹ ಲಕ್ಷಣಗಳು ಕಂಡು ಬಂದರೆ ಎಚ್ಚರದಿಂದಿರಬೇಕು. 


* ಏನೂ ಕಾರಣ ಇಲ್ಲದಿದ್ದರೂ ಮತ್ತೆ ಮತ್ತೆ ಕಾಣಿಸಿಕೊಳ್ಳುವ ತೀವ್ರವಾದ ತಲೆನೋವು , ತುಂಬಾ ಬೆವರುವುದು, ಆಯಾಸ, ವಾಕರಿಕೆ ಮತ್ತು ವಾಂತಿಯಾಗುವುದು ಸಹ ಹೃದಯಾಘಾತದ ಮೊದಲು ಕಂಡು ಬರುವ ರೋಗಲಕ್ಷಣಗಳಾಗಿರಬಹುದು. ಸಾಮಾನ್ಯವಾಗಿ ಇಂತಹ ಲಕ್ಷಣಗಳು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಎಂದು ಹೇಳಲಾಗುತ್ತದೆ. 
 
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.