ನವದೆಹಲಿ: ಭಾರತ ಸೇರಿದಂತೆ ವಿಶ್ವದಲ್ಲಿ ಹೃದ್ರೋಗಿಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಹೃದಯಾಘಾತದಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆಗೇನೂ ಕಡಿಮೆ ಇಲ್ಲ. ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಯೇ ಇದಕ್ಕೆ ಕಾರಣ. ತಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿರುವ ಜನರು ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಕ್ರಮ ಅನುಸರಿಸುತ್ತಾರೆ. ಯಾವುದೇ ವ್ಯಕ್ತಿ ಕೂಡ ಹೃದ್ರೋಗವನ್ನು ಲಘುವಾಗಿ ಪರಿಗಣಿಸಬಾರದು. ಇದರ ಸರಿಯಾದ ಮಾಹಿತಿ ತಿಳಿದುಕೊಳ್ಳುವುದು ನಿಮ್ಮ ಅಮೂಲ್ಯ ಜೀವ ಉಳಿಯುತ್ತದೆ.


COMMERCIAL BREAK
SCROLL TO CONTINUE READING

ಹೃದಯಾಘಾತ ಏಕೆ ಸಂಭವಿಸುತ್ತದೆ?


ನಾವು ಹೆಚ್ಚು ಎಣ್ಣೆಯುಕ್ತ ಆಹಾರ ಸೇವಿಸಿದಾಗ ಮತ್ತು ದೈಹಿಕ ಚಟುವಟಿಕೆಗಳಿಗೆ ಗಮನ ಕೊಡದಿದ್ದರೆ ನಮ್ಮ ಅಪಧಮನಿಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಇದರಿಂದ ರಕ್ತನಾಳಗಳಲ್ಲಿ ಅಡಚಣೆ ಪ್ರಾರಂಭವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರಕ್ತವು ಹೃದಯ ತಲುಪಲು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಇದರಿಂದಾಗಿ ರಕ್ತದೊತ್ತಡವು ಹೆಚ್ಚಾಗುತ್ತದೆ ಮತ್ತು ನಂತರ ಹೃದಯಾಘಾತವಾಗುತ್ತದೆ. ಸರಿಯಾದ ಸಮಯಕ್ಕೆ ಇದರ ಅಪಾಯ ಗುರುತಿಸುವುದು ಹೇಗೆ ಎಂದು ತಿಳಿದುಕೊಳ್ಳಿರಿ.  


ಇದನ್ನೂ ಓದಿ: Heart Health: ಹೃದಯವನ್ನು ಹೆಲ್ದಿಯಾಗಿಡಲು ಈ ಪೇಯಗಳು ನಿಮ್ಮ ಆಹಾರದಲ್ಲಿರಲಿ


1. ಹೃದಯ ಬಡಿತ


ರಕ್ತನಾಳಗಳಲ್ಲಿ ಅಥವಾ ಹೃದಯದ ಸುತ್ತ ರಕ್ತ ಹೆಪ್ಪುಗಟ್ಟಿದಾಗ ಹೃದಯ ಬಡಿತವು ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಆರೋಗ್ಯಕರ ವಯಸ್ಕ ಹೃದಯವು ಒಂದು ನಿಮಿಷದಲ್ಲಿ 70 ರಿಂದ 72 ಬಾರಿ ಬಡಿಯುತ್ತದೆ. ಹೀಗಾಗಿ ಇದರ ಬಗ್ಗೆ ನಾವು ಹೆಚ್ಚಿನ ಗಮನ ಕೊಡಬೇಕು. ಆಗ ಮಾತ್ರ ಹೃದಯಾಘಾತದ ಅಪಾಯವನ್ನು ತಪ್ಪಿಸಬಹುದು.


2. ನಿಶ್ಯಕ್ತಿ


ಸಾಮಾನ್ಯವಾಗಿ ನಾವು ನಿರಂತರವಾಗಿ ಕೆಲಸ ಮಾಡುವ ಮೂಲಕ ಸುಸ್ತಾಗುತ್ತೇವೆ. ಆದರೆ ಕಡಿಮೆ ಕೆಲಸದ ಹೊರೆಯ ಹೊರತಾಗಿಯೂ ನೀವು ಆಯಾಸ ಅನುಭವಿಸುತ್ತಿದ್ದರೆ ನಿಮ್ಮ ಆರೋಗ್ಯದಲ್ಲಿ ಏನೋ ಆಗಿದೆ ಅಂತಾನೇ ಅರ್ಥ. ಇದರರ್ಥ ರಕ್ತನಾಳಗಳಲ್ಲಿನ ಅಡಚಣೆಯಿಂದ ರಕ್ತವು ದೇಹದ ಅನೇಕ ಭಾಗಗಳನ್ನು ಸರಿಯಾಗಿ ತಲುಪಲು ಸಾಧ್ಯವಾಗುವುದಿಲ್ಲವೆಂಬುದು. ಈ ಕಾರಣದಿಂದ ನಿಶ್ಯಕ್ತಿಯಿಂದ ಬಳಲಿ ದೊಡ್ಡ ಸಮಸ್ಯೆ ಎದುರಾಗುತ್ತದೆ. ಈ ರೀತಿಯ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದಲ್ಲಿ ತಕ್ಷಣವೇ ನೀವು ವೈದ್ಯರನ್ನು ಭೇಟಿ ಮಾಡಬೇಕು.  


ಇದನ್ನೂ ಓದಿ: Health Tips: ಕಣ್ಣು ಉರಿ ಸಮಸ್ಯೆಗೆ ಇಲ್ಲಿದೆ ಸರಳ ಮನೆ ಮದ್ದು.!


3. ಎದೆ ನೋವು


ಎದೆ ನೋವಿಗೆ ಅನೇಕ ಕಾರಣಗಳಿರಬಹುದು. ಹೊಟ್ಟೆಯಲ್ಲಿ ಗ್ಯಾಸ್, ಒತ್ತಡದಿಂದ ಅಸ್ವಸ್ಥತೆ ಹೀಗೆ ಅನೇಕ ಕಾರಣಗಳಿಂದ ವ್ಯಕ್ತಿಗೆ ಎದೆನೋವು ಕಾಣಿಸಿಕೊಳ್ಳುತ್ತದೆ. ಆದರೆ ಇದು ಹೃದ್ರೋಗದ ಲಕ್ಷಣವಾಗಿರಬಹುದು. ಎದೆ ನೋವು ಭುಜಗಳು, ತೋಳುಗಳು ಮತ್ತು ಬೆನ್ನಿನವರೆಗೂ ಹರಡಬಹುದು. ನಿಮ್ಮ ದೇಹದಲ್ಲಿ ಇಂತಹ ಲಕ್ಷಣಗಳು ಕಂಡುಬಂದಾಗ ಅದನ್ನು ನಿರ್ಲಕ್ಷಿಸುವ ಬದಲು ತಕ್ಷಣವೇ ಪರೀಕ್ಷೆಯನ್ನು ಮಾಡಿಸಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.