Diabetes Symptoms In Men: ಮಧುಮೇಹದಲ್ಲಿ ಬಾಯಾರಿಕೆ,  ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ಹಠಾತ್ ತೂಕ ನಷ್ಟದಂತಹ ರೋಗಲಕ್ಷಣಗಳು ಸರ್ವೇ ಸಾಮಾನ್ಯ. ಇದಲ್ಲದೆ, ಪುರುಷರಲ್ಲಿ ಕಾಲುಗಳು ಮತ್ತು ಪಾದಗಳಲ್ಲಿ ಕಂಡು ಬರುವ ಕೆಲವು ಚಿಹ್ನೆಗಳು ಮಧುಮೇಹದ ಆರಂಭಿಕ ಲಕ್ಷಣಗಳಾಗಿರಬಹುದು ಎಂದು ನಿಮಗೆ ತಿಳಿದಿದೆಯೇ? ಅಂತಹ ಲಕ್ಷಣಗಳೆಂದರೆ... 


COMMERCIAL BREAK
SCROLL TO CONTINUE READING

ಪುರುಷರ ಕಾಲುಗಳು, ಪಾದಗಳಲ್ಲಿ ಕಾಣಿಸುವ ಈ ಲಕ್ಷಣಗಳು ಮಧುಮೇಹದ ಸಂಕೇತವೂ ಆಗಿರಬಹುದು! 
* ಕಾಲು ಮರಗಟ್ಟುವಿಕೆ: 

ದೀರ್ಘ ಸಮಯದವರೆಗೆ ಕಾಲು ಮಡಚಿ ಕುಳಿತಾಗ ಕಾಲು ಮರಗಟ್ಟುವುದು ಸಾಮಾನ್ಯ ಸಂಗತಿ. ಆದರೆ, ಸದಾಕಾಲ ಕಾಲು ನಿರಂತರವಾದ ಜುಮ್ಮೆನಿಸುವಿಕೆ ಸಂವೇದನೆ ಅಥವಾ ಕಾಲುಗಳು ಮತ್ತು ಪಾದಗಳಲ್ಲಿ ಮರಗಟ್ಟುವಿಕೆ ಕಂಡು ಬರುತ್ತಿದ್ದರೆ ಇದು ಮಧುಮೇಹದಿಂದ ನರಗಳ ಹಾನಿಯ ಆರಂಭಿಕ ಸೂಚಕಗಳಲ್ಲಿ ಒಂದು. 


* ಸುಡುವ ಸಂವೇದನೆ: 
ಪುರುಷರು ವಿಶೇಷವಾಗಿ ತಮ್ಮ ಪಾದಗಳ ಅಡಿಭಾಗದಲ್ಲಿ ಸುಡುವ ಸಂವೇದನೆಯನ್ನು ಅನುಭವಿಸುತ್ತಿದ್ದರೆ ಇದನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ. 


ಇದನ್ನೂ ಓದಿ- ರಾತ್ರಿ ಊಟಕ್ಕೆ ಮುನ್ನ ಈ ಹಣ್ಣು ತಿನ್ನಿ… ಬ್ಲಡ್ ಶುಗರ್ ಲೆವೆಲ್ ಯಾವತ್ತೂ ನಿಯಂತ್ರಣದಲ್ಲಿರುತ್ತೆ! ಎಂದೂ ಹೆಚ್ಚಾಗೋದಿಲ್ಲ


* ಸಣ್ಣ ಗಾಯವೂ ಬೇಗ ಗುಣವಾಗದಿರುವುದು: 
ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿದ್ದರೆ ಇದು ರಕ್ತಪರಿಚಲನೆಯನ್ನು ದುರ್ಬಲಗೊಳಿಸುತ್ತದೆ. ಅಷ್ಟೇ ಅಲ್ಲದೆ, ಸಣ್ಣ-ಪುಟ್ಟ ಗಾಯಗಳೂ ಕೂಡ ಬೇಗನೆ ಗುಣವಾಗುವುದಿಲ್ಲ. ಪುರುಷರಲ್ಲಿ ಇಂತಹ ಲಕ್ಷಣಗಳು ಕಂಡು ಬಂದರೆ ಇದು ಮಧುಮೇಹದ ಸೂಚನೆಯೂ ಆಗಿರಬಹುದು. ಇಂತಹ ಸಂದರ್ಭದಲ್ಲಿ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ. 


* ಕಾಲಿನ ಸೆಳೆತ: 
ಕಾಲಿನ ಸೆಳೆತಕ್ಕೆ ವಿವಿಧ ಕಾರಣಗಳಿರಬಹುದು. ಆದರೆ, ಡಯಾಬಿಟಿಸ್ ಇರುವ ಪುರುಷರಲ್ಲಿ ಆಗಾಗ್ಗೆ ತೀವ್ರವಾದ ಕಾಲಿನ ಸೆಳೆತ ಕಾಣಿಸಿಕೊಳ್ಳುತ್ತದೆ. ಅದರಲ್ಲೂ, ರಾತ್ರಿ ವೇಳೆಯಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- Bad Cholesterol: ಶರೀರದಿಂದ ಕೆಟ್ಟ ಕೊಲೆಸ್ಟ್ರಾಲ್ ಕಿತ್ತೆಸೆಯುವ ಸಾಮರ್ಥ್ಯ ಹೊಂದಿವೆ ಈ ತರಕಾರಿಗಳು!


* ಕಡಿಮೆ ಸಂವೇದನೆ: 
ಮಧುಮೇಹದಿಂದಾಗಿ ಕಾಲುಗಳು ಮತ್ತು ಪಾದಗಳಲ್ಲಿ ಸಂವೇದನೆಯನ್ನು ಕಡಿಮೆ ಆಗುತ್ತದೆ. ಇಂತಹ ಸಂದರ್ಭದಲ್ಲಿ ಗಾಯಗಳು ಅಥವಾ ಅಸ್ವಸ್ಥತೆಯನ್ನು ಪತ್ತೆಹಚ್ಚಲು ಕಷ್ಟವಾಗುತ್ತದೆ. ಕಡಿಮೆ ಸಂವೇದನೆ ಕಾರಣದಿಂದಾಗಿ ಪುರುಷರು ತಮ್ಮ ಕಾಲು, ಪಾದಗಳಲ್ಲಿ ಆಗುವ ಸಣ್ಣ ಗಾಯಗಳನ್ನು ನಿರ್ಲಕ್ಷಿಸಬಹುದು. ಭವಿಷ್ಯದಲ್ಲಿ ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುವ ಅಪಾಯವನ್ನು ಹೆಚ್ಚಿಸಬಹುದು ಎನ್ನಲಾಗುತ್ತದೆ. 


ಹಾಗಾಗಿ, ಪುರುಷರು ಮೇಲೆ ಉಲ್ಲೇಖಿಸಿದ ಯಾವುದೇ ಲಕ್ಷಣಗಳು ಕಂಡು ಬಂದರೂ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ, ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.