ನವದೆಹಲಿ:  Coronavirus - ಕೊರೊನಾ ವೈರಸ್ ಪ್ರಕೋಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದಲ್ಲದೆ ಕೊರೊನಾ ವೈರಸ್ (Coronavirus) ನ ವಿವಿಧ ಲಕ್ಷಣಗಳು ಇದೀಗ ಬೆಳಕಿಗೆ ಬರುತ್ತಿವೆ. ಒಂದೆಡೆ ಜನರು ಈ ವೈರಸ್ ನಿಂದ ಪಾರಾಗಲು ತಮ್ಮ ಪ್ರಯತ್ನಗಳನ್ನು ಮುಂದುವರೆಸುತ್ತಿರುವ ಬೆನ್ನಲ್ಲೇ, O+ve ರಕ್ತದ ಗುಂಪು (Blood Group) ಹೊಂದಿರುವವರಿಗೆ ಕೊರೊನಾ ಹಾನಿ ಮಾಡುವುದಿಲ್ಲ ಎಂಬ ಚರ್ಚೆಗಳೂ ಕೂಡ ಕೇಳಿಬರುತ್ತಿವೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-Ayurveda Tips: Ayurveda ಪ್ರಕಾರ ಈ ಪದಾರ್ಥಗಳ ಒಟ್ಟಿಗೆ ಸೇವನೆ ತ್ವಚೆಯ ಸಮಸ್ಯೆಗೆ ಕಾರಣ


ಈ ಕುರಿತು ಹೇಳುವ ತಜ್ಞರು "ತಾವು ಕೇವಲ O+ve (O+ve Blood Group) ಇರುವ ಕಾರಣ ತಮಗೆ ಕೊರೊನಾ ವೈರಸ್ (Covid-19) ಹಾನಿಮಾಡುವುದಿಲ್ಲ ಎಂಬ ತಪ್ಪು ಕಲ್ಪನೆಯಲ್ಲಿ ಜನರು ಇರಬಾರದು. ಏಕೆಂದರೆ ಈ ಕುರಿತು ಇದುವರೆಗೆ ಯಾವುದೇ ಅಧ್ಯಯನ ನಡೆದಿಲ್ಲ ಮತ್ತು ಇದೇ ಕಾರಣ ಈ ಕುರಿತು ಯಾವುದೇ ರೀತಿಯ ಗ್ಯಾರಂಟಿ ನೀಡಲಾಗುವುದಿಲ್ಲ. ಕೊರೊನಾ ವಿರುದ್ಧದ ಹೋರಾಟದಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯುವುದು ಕಡ್ಡಾಯ ಹಾಗೂ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೂಡ ಕೊರೊನಾದಿಂದ ರಕ್ಷಣೆ ಪಡೆಯಬಹುದು ಎಂದು ಅವರು ಹೇಳುತ್ತಾರೆ.


ಇದನ್ನೂ ಓದಿ- Bathing Tips: ಸ್ನಾನ ಮಾಡುವಾಗ ದೇಹದ ಈ ಭಾಗಕ್ಕೆ ಮೊದಲು ನೀರು ಹಾಕಿದರೆ, ಒತ್ತಡ ದೂರವಾಗುತ್ತೆ


ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೊವಿಡ್ - 19 ನ 89, 129  ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು ಒಟ್ಟು ಸೋಂಕಿತರ (Corona Infection) ಸಂಖ್ಯೆ 1,23,92,260. ಇನ್ನೊಂದೆಡೆ ಸಾವಿನ 714 ಹೊಸ ಪ್ರಕರಣಗಳು ಬೆಳಕಿಗೆ ಬಂದ ಬಳಿಕ ಒಟ್ಟು ಸಾವಿನ ಪ್ರಕರಣಗಳ ಸಂಖ್ಯೆ 6,58,909ಕ್ಕೆ ಹಾಗೂ ಗುಣಮುಖರಾಗಿ ಮನೆಗೆ ಮರಳಿದವರ ಸಂಖ್ಯೆ 1,15,69,241ಕ್ಕೆ ತಲುಪಿದೆ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನೂ ಓದಿ-Elaichi Tea: ಪ್ರತಿದಿನ ಒಂದು ಕಪ್ ಏಲಕ್ಕಿ ಚಹಾ ಕುಡಿದು ಈ ಅದ್ಭುತ ಪ್ರಯೋಜನ ಪಡೆಯಿರಿ


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.