ನವದೆಹಲಿ: ಕಾಫಿ ವಿಶ್ವದಲ್ಲಿಯೇ ಅತಿಹೆಚ್ಚು ಸೇವಿಸುವ ಪಾನೀಯವಾಗಿದೆ. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಕಾಫಿ ಸೇವಿಸಲು ಬಹುತೇಕರು ಇಷ್ಟಪಡುತ್ತಾರೆ. ಕಾಫಿ ಕುಡಿಯುವುದರ ಆರೋಗ್ಯ ಪ್ರಯೋಜನಗಳ ಬಗ್ಗೆ ಅನೇಕ ಅಧ್ಯಯನಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕಾಫಿಗೆ ಹಾಲು ಸೇರಿಸಿದ ತಕ್ಷಣ ಅದರ ಪರಿಣಾಮವು ಕಡಿಮೆಯಾಗುತ್ತದೆ ಅಂತಾ ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಖ್ಯಾತ ನರವಿಜ್ಞಾನಿ ರಾಬರ್ಟ್ ಲವ್ ಮಾಹಿತಿ ನೀಡಿದ್ದು, ʼಹಾಲಿನಂತಹ ಡೈರಿ ಉತ್ಪನ್ನಗಳನ್ನು ಕಾಫಿಯಲ್ಲಿ ಬೆರೆಸುವ ಕಲ್ಪನೆಯನ್ನು ಸಮರ್ಥಿಸಿದ್ದಾರೆ. ಹೀಗೆ ಮಾಡುವುದರಿಂದ ಕಾಫಿಯ ಆರೋಗ್ಯಕರ ಪರಿಣಾಮಗಳು ಬಹಳ ಕಡಿಮೆಯಾಗುತ್ತವೆ ಎಂದು ಹೇಳಿದ್ದಾರೆ. ನೀವು ಹಾಲನ್ನು ಸೇರಿಸಿದಾಗ, ಅದು ಕಾಫಿಯಲ್ಲಿರುವ ಪಾಲಿಫಿನಾಲ್‌ಗಳನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದಂತೆ. ಇದರಿಂದಾಗಿ ನೀವು ಅದರ ಎಲ್ಲಾ ಪ್ರಯೋಜನಗಳನ್ನು ಪಡೆಯುವುದಿಲ್ಲʼವೆಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಈ ಆರೋಗ್ಯ ಸಮಸ್ಯೆ ಉಳ್ಳವರು ಬೆಲ್ಲ-ಹುರಿಗಡಲೆ ಸೇವಿಸಿ: ಒಂದೇ ವಾರದಲ್ಲಿ ಪರ್ಮನೆಂಟ್ ರಿಲೀಫ್ ಸಿಗುತ್ತೆ! 


‌ಅಧ್ಯಯನಗಳು ಏನು ಹೇಳಿವೆ?  


2019ರಲ್ಲಿ ʼದಿ ಜರ್ನಲ್ ಆಫ್ ಎಒಎಸಿ ಇಂಟರ್ನ್ಯಾಷನಲ್‌ʼನಲ್ಲಿ ಪ್ರಕಟವಾದ ಅಧ್ಯಯನವು ಕಾಫಿ ಸೇರಿದಂತೆ ಪಾಲಿಫಿನಾಲ್‌ಗಳನ್ನು ಹೊಂದಿರುವ ಹಲವಾರು ಆಹಾರಗಳೊಂದಿಗೆ ಹಾಲನ್ನು ಬೆರೆಸಿದಾಗ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ಕಂಡುಕೊಂಡಿವೆ. ಹೀಗಾಗಿ ಹಾಲನ್ನು ಸೇರಿಸುವುದರಿಂದ ಕಾಫಿಯ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂದು ತೀರ್ಮಾನಿಸಲಾಯಿತು. ಇದು ಅದು ಒದಗಿಸುವ ಪ್ರಯೋಜನಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. 


ಕಾಫಿಯೊಂದಿಗೆ ಇವುಗಳನ್ನು ಮಿಶ್ರಣ ಮಾಡಿ


ಕಾಫಿಗೆ ಡೈರಿ ಉತ್ಪನ್ನಗಳನ್ನು ಸೇರಿಸುವುದರಿಂದ ಅದರ ಆರೋಗ್ಯಕರ ಪ್ರಯೋಜನಗಳನ್ನು ಕಡಿಮೆ ಮಾಡುತ್ತದೆ. ಆದರೆ ನೀವು ಬ್ಲ್ಯಾಕ್ ಕಾಫಿಯನ್ನು ಇಷ್ಟಪಡದಿದ್ದರೆ ಸೋಯಾ ಹಾಲು, ಬಾದಾಮಿ ಹಾಲು ಮುಂತಾದ ಹಾಲಿನ ಪರ್ಯಾಯಗಳನ್ನು ಬಳಸಬಹುದು. 


ಬ್ಲ್ಯಾಕ್ ಕಾಫಿ‌ ಸೇವನೆಯ ಪ್ರಯೋಜನ  


ಹಾಲಿನ ಕಾಫಿಗಿಂತ ಬ್ಲ್ಯಾಕ್ ಕಾಫಿ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ ನರವಿಜ್ಞಾನಿಗಳು. ಬ್ಲ್ಯಾಕ್ ಕಾಫಿ ವಿಶೇಷವಾಗಿ ಕರುಳಿನ ಬ್ಯಾಕ್ಟೀರಿಯಾ ಮತ್ತು ಮೆದುಳಿನ ಮೇಲೆ ಅತ್ಯಂತ ಪರಿಣಾಮಕಾರಿ ಹಾಗೂ ಧನಾತ್ಮಕ ಪರಿಣಾಮಗಳನ್ನು ತೋರಿಸುತ್ತದೆ. ಇದಲ್ಲದೆ ಕಾಫಿಯಲ್ಲಿ ಕಂಡುಬರುವ ಪಾಲಿಫಿನಾಲ್ಗಳು ಕ್ಯಾನ್ಸರ್, ಹೃದ್ರೋಗ, ಮಧುಮೇಹ ಮತ್ತು ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಬಹಳ ಸಹಾಯಕವಾಗಿದೆ.


(ಗಮನಿಸಿರಿ: ಇಲ್ಲಿ ನೀಡಿರುವ ಮಾಹಿತಿ ಮತ್ತು ಮನೆಮದ್ದುಗಳ ಸಲಹೆ ಪಾಲಿಸುವ ಮೊದಲು ನೀವು ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬೇಕು. ZEE KANNADA NEWS ಇದನ್ನು ದೃಢಪಡಿಸುವುದಿಲ್ಲ.)


ಇದನ್ನೂ ಓದಿ: Tips For Healthy Heart: ಯಾರಿಗೆ ಹೃದಯಾಘಾತದ ಅಪಾಯ ಹೆಚ್ಚು? ಪಾರಾಗಲು ಏನು ಮಾಡಬೇಕು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.