Fruits After Dinner: ವಿಟಮಿನ್ ಸಿ ಯ ನಿಧಿ ಎಂತಲೇ ಪರಿಗಣಿಸಲ್ಪಡುವ ಕಿತ್ತಳೆ, ನಿಂಬೆ, ದ್ರಾಕ್ಷಿ ಸೇರಿದಂತೆ ಹಲವು ಕಾಲೋಚಿತ ಹಣ್ಣುಗಳ ಸೇವನೆಯು ಆರೋಗ್ಯಕ್ಕೆ ವರದಾನವಿದ್ದಂತೆ. ಆದರೆ, ಸ್ವಲ್ಪ ಹುಳಿಹುಳಿಯಾಗಿ ರುಚಿಕರವಾಗಿರುವ ಈ ಹಣ್ಣುಗಳನ್ನು 
ತಿನ್ನಲು ಸರಿಯಾದ ಸಮಯವನ್ನು ಆಯ್ಕೆ ಮಾಡುವುದು ಒಳ್ಳೆಯದು. ಇಲ್ಲದಿದ್ದರೆ, ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು ಎಂದು ನಿಮಗೆ ತಿಳಿದಿದೆಯೇ? 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ನಮ್ಮ ಹಿರಿಯರು ಕೆಲವು ಹಣ್ಣುಗಳನ್ನು ಊಟದ ನಂತರ ಸೇವಿಸುವಂತೆ ಸಲಹೆ ನೀಡುತ್ತಾರೆ. ಹಲಸಿನ ಹಣ್ಣಿನಂತ ಕೆಲವು ಹಣ್ಣುಗಳನ್ನು ಹಸಿದೇ ತಿನ್ನಬೇಕು ಎಂದು ಹೇಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎಂಬುದರ ಜೊತೆಗೆ ಇದರ ಸರಿಯಾದ ಪ್ರಯೋಜನವನ್ನು ಪಡೆಯಬೇಕು ಎಂದರೆ ನಾವು ಅದನ್ನು ಯಾವ ಸಮಯಕ್ಕೆ ಹೇಗೆ ಸೇವಿಸಬೇಕು ಎಂಬುದರ ಬಗ್ಗೆಯೂ ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. 


ಆರೋಗ್ಯ ತಜ್ಞರ ಪ್ರಕಾರ, ಭೋಜನ ಸೇವಿಸಿದ ಕೂಡಲೇ ಹುಳಿ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ. ಇದನ್ನು ತಪ್ಪಿಸಲು ಊಟವಾದ ತಕ್ಷಣ ಹುಳಿ ಹಣ್ಣುಗಳ ಸೇವನೆಯಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿದಿರುವುದು ಮುಖ್ಯ. 
 
ಇದನ್ನೂ ಓದಿ- ಖಾಲಿ ಹೊಟ್ಟೆಯಲ್ಲಿ ಮೂಲಂಗಿ ತಿಂದ್ರೆ ಸಿಗುತ್ತೆ ಈ ಅದ್ಭುತ ಆರೋಗ್ಯ ಪ್ರಯೋಜನಗಳು..!


ಊಟವಾದ ತಕ್ಷಣ ಹುಳಿ ಹಣ್ಣುಗಳ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳೆಂದರೆ:- 
ಜೀರ್ಣಕಾರಿ ಸಮಸ್ಯೆ: 

ಹುಳಿ ಹಣ್ಣುಗಳಲ್ಲಿ ಇರುವ ಸಿಟ್ರಿಕ್ ಆಮ್ಲವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹಾಗಾಗಿ, ಊಟವಾದ ತಕ್ಷಣ ಇಂತಹ ಹಣ್ಣುಗಳ ಸೇವನೆಯು ಗ್ಯಾಸ್ಟ್ರಿಕ್, ಅಜೀರ್ಣದಂತಹ ಸಮಸ್ಯೆಗಳನ್ನು ಉಂಟು ಮಾಡಬಹುದು. 


ಎದೆಯುರಿ: 
ಭೋಜನದ ಬಳಿಕ ಹುಳಿ ಹಣ್ಣುಗಳ ಸೇವನೆಯು ನಿಮ್ಮ ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆಯಲ್ಲಿ ಈಗಾಗಲೇ ಇರುವ ಆಮ್ಲದ ಪ್ರಮಾಣವನ್ನು ಹೆಚ್ಚಿಸಬಹುದು. ಇದು ಆಮ್ಲೀಯತೆ, ಎದೆಯುರಿ ಮತ್ತು ಅಜೀರ್ಣದ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತದೆ. 


ರಕ್ತದಲ್ಲಿನ ಸಕ್ಕರೆ ಮಟ್ಟ: 
ಕೆಲವು ಅಧ್ಯಯನಗಳ ಪ್ರಕಾರ, ಊಟವಾದ ನಂತರ ಹುಳಿ ಹಣ್ಣುಗಳ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಒಂದೊಮ್ಮೆ ನೀವು ಮಧುಮೇಹಿ ರೋಗಿಗಳಾಗಿದ್ದರೆ ಇದು ನಿಮ್ಮ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುವ ಸಾಧ್ಯತೆ ಇದೆ. 


ಇದನ್ನೂ ಓದಿ- ಪ್ರತಿದಿನ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುತ್ತೀರಾ? ಈ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಚ್ಚರ!


ದಂತಕ್ಷಯ: 
ಸಿಟ್ರಸ್ ಹಣ್ಣುಗಳಲ್ಲಿ ಇರುವ ಆಮ್ಲವು ಹಲ್ಲಿನ ದಂತಕವಚವನ್ನು ಹಾನಿಗೊಳಿಸುತ್ತದೆ, ಹಲ್ಲಿನ ಸೂಕ್ಷ್ಮತೆ ಮತ್ತು ಕೊಳೆಯುವ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ, ಊಟದ ಬಳಿಕ ತಕ್ಷಣ ಸಿಟ್ರಿಕ್ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. 


ಸಿಟ್ರಿಕ್/ಹುಳಿ ಹಣ್ಣುಗಳನ್ನು ತಿನ್ನಲು ಸರಿಯಾದ ಸಮಯ ಯಾವುದು? 
ಆರೋಗ್ಯ ತಜ್ಞರ ಪ್ರಕಾರ, ಯಾವಾಗಲೂ ಸಿಟ್ರಿಕ್/ಹುಳಿ ಹಣ್ಣುಗಳನ್ನು ಊಟ ಮಾಡುವ ಒಂದು ಗಂಟೆಯ ಮೊದಲು ಇಲ್ಲವೇ, ಊಟವಾದ ಒಂದು ಗಂಟೆ ನಂತರ ಸೇವಿಸುವುದು ಒಳ್ಳೆಯ ಅಭ್ಯಾಸ. ಇದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಆಹಾರ ಜೀರ್ಣಿಸಿಕೊಳ್ಳಲು ಯಾವುದೇ ರೀತಿಯ ಅಡಚಣೆ ಉಂಟಾಗುವುದಿಲ್ಲ ಎನ್ನಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.