Health Care Tips: ನಿಮಗೂ ಅತಿಯಾದ ನಿದ್ದೆ ಮಾಡುವ ಅಭ್ಯಾಸ ಇದೆಯಾ? ಇಂದೇ ಎಚ್ಚೆತ್ತುಕೊಳ್ಳಿ
Health Tips: ನಿಮ್ಮ ಆರೋಗ್ಯಕ್ಕೆ ನಿದ್ರೆ ಬಹಳ ಮುಖ್ಯ. ಆದರೆ ಇಂದು ನಾವು ಹೆಚ್ಚು ನಿದ್ದೆ ಮಾಡುವುದರಿಂದ ಉಂಟಾಗುವ ಹಾನಿಯ ಬಗ್ಗೆ ಇಲ್ಲಿ ಹೇಳುತ್ತೇವೆ. ನೀವು ಗಂಟೆಗಟ್ಟಲೆ ನಿದ್ದೆ ಮಾಡುತ್ತಿದ್ದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
Excess Sleep Problem: ಉತ್ತಮ ಗುಣಮಟ್ಟದ ನಿದ್ರೆ ನಮ್ಮ ಆರೋಗ್ಯಕ್ಕೆ ತುಂಬಾ ಮುಖ್ಯ. ಆದರೆ ಇಂದು ನಾವು ಹೆಚ್ಚು ನಿದ್ದೆ ಮಾಡುವುದರಿಂದ ಉಂಟಾಗುವ ಹಾನಿಯ ಬಗ್ಗೆ ಇಲ್ಲಿ ಹೇಳುತ್ತೇವೆ. ನೀವು ಗಂಟೆಗಟ್ಟಲೆ ನಿದ್ದೆ ಮಾಡುತ್ತಿದ್ದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹೆಚ್ಚು ನಿದ್ದೆ ಮಾಡುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ಅತಿಯಾಗಿ ನಿದ್ದೆ ಆರೋಗ್ಯಕ್ಕೆ ಹಾನಿಕಾರಕ
ಹೃದಯ ಸಮಸ್ಯೆ
ಉದಾಹರಣೆಗೆ, ಕಡಿಮೆ ನಿದ್ರೆ ಮಾಡುವುದರಿಂದ ವ್ಯಕ್ತಿಗೆ ಅನೇಕ ಕಾಯಿಲೆಗಳು ಬರಬಹುದು, ಆದರೆ ಹೆಚ್ಚು ನಿದ್ದೆ ಮಾಡುವುದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಉಂಟಾಗಬಹುದು. ಅಷ್ಟೇ ಅಲ್ಲ ಅಗತ್ಯಕ್ಕಿಂತ ಹೆಚ್ಚು ನಿದ್ದೆ ಮಾಡಿದರೆ ಪಾರ್ಶ್ವವಾಯು ಸಮಸ್ಯೆ ಕಾಡಬಹುದು. ಆದ್ದರಿಂದ ನಿಮಗೂ ಹೆಚ್ಚು ನಿದ್ದೆ ಮಾಡುವ ಅಭ್ಯಾಸವಿದ್ದರೆ ಇಂದೇ ನಿಮ್ಮ ಈ ಅಭ್ಯಾಸವನ್ನು ಬದಲಿಸಿಕೊಳ್ಳಿ.
ಖಿನ್ನತೆ
ನಿಮಗೆ ಈ ವಿಷಯ ಕೇಳಲು ವಿಚಿತ್ರ ಎನಿಸಬಹುದು, ಆದರೆ ಅತಿಯಾದ ನಿದ್ರೆ ನಿಮ್ಮ ಮೂಡ್ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ಒಬ್ಬ ವ್ಯಕ್ತಿಯು ಖಿನ್ನತೆಗೆ ಒಳಗಾಗಬಹುದು. ಏಕೆಂದರೆ ಹೆಚ್ಚು ನಿದ್ರೆ ಮಾಡುವುದರಿಂದ ವ್ಯಕ್ತಿಯ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ಮೂಡ್ ಕೂಡ ಪ್ರಭಾವಕ್ಕೆ ಒಳಗಾಗುತ್ತದೆ.
ಬೊಜ್ಜು ಸಮಸ್ಯೆ
ನಿದ್ರೆ ಮತ್ತು ಬೊಜ್ಜು ನಡುವೆ ನೇರ ಸಂಬಂಧವಿದೆ. ಹೀಗಾಗಿ ಅತಿಯಾದ ನಿದ್ದೆ ನಿಮ್ಮನ್ನು ಸ್ಥೂಲಕಾಯಿಗಲಾಗಿಸಬಹುದು. ದಿನಕ್ಕೆ 8 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡುವುದರಿಂದ ಬೊಜ್ಜು, ಮಧುಮೇಹ ಮತ್ತು ಹೃದ್ರೋಗದಂತಹ ಕಾಯಿಲೆಗಳು ನಿಮ್ಮನ್ನು ಸುತ್ತುವರಿಯಬಹುದು.
ಇದನ್ನೂ ಓದಿ-High BP: ಇಂಗು ಸೇವಿಸಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಿ!
ಮಧುಮೇಹದ ಅಪಾಯ
ಅತಿಯಾಗಿ ನಿದ್ರಿಸುವುದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟಕ್ಕೆ ಒಳ್ಳೆಯದಲ್ಲ. ಏಕೆಂದರೆ ನೀವು ಹೆಚ್ಚು ನಿದ್ರೆ ಮಾಡಿದಾಗ, ಅದು ಸಕ್ಕರೆಯನ್ನು ಸಂಸ್ಕರಿಸುವ ನಿಮ್ಮ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ, ಇದರಿಂದಾಗಿ ಮಧುಮೇಹದ ಅಪಾಯವಿರುತ್ತದೆ.
ಇದನ್ನೂ ಓದಿ-Diabetes Control Tips: ಈ ಪಾನೀಯದಲ್ಲಿದೆ ಮಧುಮೇಹ ನಿಯಂತ್ರಿಸುವ ಅದ್ಭುತ ಶಕ್ತಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.