Cross Leg Sitting Effects: ನೀವೂ ಈ ರೀತಿ ಕುಳಿತುಕೊಳ್ಳುತ್ತೀರಾ? ಇಂದೇ ನಿಮ್ಮ ಈ ಅಭ್ಯಾಸವನ್ನು ಬಿಡಿ
Cross Leg Sitting harmful Effects: ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದನ್ನು ನೋಡಿದರೆ ಮನೆಯ ಹಿರಿಯರು ಬೈಯುವುದನ್ನು ನೀವು ನೋಡಿರಬಹುದು. ಕೆಲವರಿಗೆ ಸ್ವತಃ ಇದರ ಅನುಭವವೂ ಆಗಿರಬಹುದು. ಇದಲ್ಲದೆ, ದೊಡ್ಡವರ ಮುಂದೆ ಈ ರೀತಿ ಕುಳಿತುಕೊಳ್ಳಬಾರದು ಎಂದು ಅಪ್ಪ-ಅಮ್ಮ ಎಷ್ಟು ಬಾರಿ ಹೇಳಿಕೊಟ್ಟಿರುತ್ತಾರೆ. ಅಷ್ಟಕ್ಕೂ ಇದರ ಹಿಂದಿನ ಕಾರಣವೇನು? ಆರೋಗ್ಯದ ಮೇಲೆ ಇದರಿಂದಾಗುವ ಪರಿಣಾಮವೇನು ಎಂದು ಎಂದಾದರೂ ಯೋಚಿಸಿದ್ದೀರಾ?
Cross Leg Sitting harmful Effects: ಚಿಕ್ಕಂದಿನಿಂದಲೂ ಮಕ್ಕಳಿಗೆ ಕಾಲು ಮೇಲೆ ಕಾಲು ಹಾಕಿ ಕೂರಬಾರದು ಎಂದು ಮನೆಯಲ್ಲಿ ಹೇಳಿಕೊಟ್ಟಿರುತ್ತಾರೆ. ಆದಾಗ್ಯೂ, ಅಪ್ಪಿತಪ್ಪಿ ಈ ರೀತಿ ಕುಳಿತರೂ ಮನೆಯಲ್ಲಿ ಹಿರಿಯರು ಬೈಯುತ್ತಾರೆ. ಪ್ರತಿಯೊಬ್ಬರಿಗೂ ಸಹ ಒಂದಲ್ಲಾ ಒಂದು ಸಮಯದಲ್ಲಿ ಖಂಡಿತವಾಗಿಯೂ ಇಂತಹ ಅನುಭವ ಆಗಿಯೇ ಇರುತ್ತದೆ. ಆದರೆ, ಇದು ಕೇವಲ ಒಂದು ಸಂಪ್ರದಾಯವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಸಹ ಕಾಲು ಮೇಲೆ ಕಾಲು ಹಾಕಿ ಕೂರುವುದು ಒಳ್ಳೆಯದಲ್ಲ.
ನಿಮಗೆ ಯಾವಾಗಲೂ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸವಿದ್ದರೆ ದೀರ್ಘಾವಧಿಯಲ್ಲಿ ಇದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟುಮಾಡಬಹುದು. ತಜ್ಞರ ಪ್ರಕಾರ, ನಮ್ಮ ಆಹಾರ ವಿಧಾನ ಮಾತ್ರವಲ್ಲ, ನಾವು ಕುಳ್ಳಿತುಕೊಳ್ಳುವ, ಎದ್ದೇಳುವ, ಮಲಗುವ ವಿಧಾನವೂ ಕೂಡ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದೆ. ಇದು ಹುಡುಗರೇ ಇರಲಿ ಅಥವಾ ಹುಡುಗಿಯರೇ ಇರಲಿ ಕಾಲು ಮೇಲೆ ಕಾಲು ಹಾಕಿ ಕೂರುವ ಅಭ್ಯಾಸವು ನಿಮ್ಮನ್ನು ದೀರ್ಘಾವಧಿಯಲ್ಲಿ ಅನಾರೋಗ್ಯದತ್ತ ಕೊಂಡೊಯ್ಯುತ್ತದೆ. ಹಾಗಿದ್ದರೆ, ಇದು ಆರೋಗ್ಯದ ಮೇಲೆ ಏನು ಪರಿಣಾಮ ಉಂಟುಮಾಡಬಹುದು ಎಂದು ತಿಳಿಯಿರಿ.
ಕಾಲುಗಳ ನರಗಳಿಗೆ ಅಪಾಯ:
ಕಾಲ್ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸವು ನಿಮ್ಮ ಕಾಲುಗಳ ನರಗಳಿಗೆ ಅಪಾಯವನ್ನು ಉಂಟು ಮಾಡುತ್ತದೆ. ನಿಮ್ಮ ಈ ಅಭ್ಯಾಸದಿಂದ ಪಾದದ ಪೆರೋನಿಯಲ್ ನರದ ಮೇಲೆ ಒತ್ತಡ ಬೀಳುತ್ತದೆ. ಇದರಿಂದಾಗಿ ರಕ್ತನಾಳದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಿ ಸ್ನಾಯುಗಳು ಗಟ್ಟಿಯಾಗುವ ಸಾಧ್ಯತೆಯೂ ಇದೆ.
ಇದನ್ನೂ ಓದಿ- Vitamin C Deficiency: ವಿಟಮಿನ್ ಸಿ ಕೊರತೆಯನ್ನು ನೀಗಿಸಲು ಈ 2 ಹಣ್ಣುಗಳು ಸಾಕು
ಮೊಣಕಾಲುಗಳು ದುರ್ಬಲಗೊಳ್ಳುತ್ತದೆ:
ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರಿಂದ ಸಾಮಾನ್ಯವಾಗಿ ಒಂದು ಮೊಣಕಾಲಿನ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಮೊಣಕಾಲನ್ನು ದುರ್ಬಲಗೊಳಿಸುತ್ತದೆ. ಮಾತ್ರವಲ್ಲ, ಪಾದಗಳಲ್ಲಿಯೂ ನೋವು ಉಂಟಾಗುತ್ತದೆ.
ರಕ್ತ ಪರಿಚಲನೆ ಮೇಲೆ ಪರಿಣಾಮ:
ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರಿಂದ ಹೆಚ್ಚಿನ ಪ್ರಮಾಣದ ರಕ್ತವು ಹೃದಯವನ್ನು ತಲುಪುತ್ತದೆ. ವಾಸ್ತವವಾಗಿ, ನೀವು ಕಾಲು ಮೇಲೆ ಕಾಲು ಹಾಕಿ ಕೂರುವುದರಿಂದ ರಕ್ತ ಪರಿಚಲನೆಗೆ ಅಡಚಣೆ ಉಂಟಾಗಿ, ಅದು ಇಡೀ ದೇಹಕ್ಕೆ ರಕ್ತ ಸರಿಯಾಗಿ ಹರಿಯುವುದಿಲ್ಲ. ಬದಲಿಗೆ ರಕ್ತವು ಮೇಲಿನಿಂದ ಕೆಳಕ್ಕೆ ಹರಿಯುವುದನ್ನು ನಿಲ್ಲಿಸುತ್ತದೆ ಮತ್ತು ಇದರಿಂದಾಗಿ ಹೃದಯವು ರಕ್ತವನ್ನು ಹಿಮ್ಮುಖವಾಗಿ ಪಂಪ್ ಮಾಡಲು ಪ್ರಾರಂಭಿಸುತ್ತದೆ.
ದೇಹದ ಭಂಗಿ ಮತ್ತು ಬೆನ್ನು ನೋವಿನ ಅಪಾಯ:
ಕಾಲು ಮೇಲೆ ಕಾಲು ಹಾಕಿ ಕೂರುವ ನಿಮ್ಮ ಅಭ್ಯಾಸವು ನಿಮ್ಮ ದೇಹದ ಭಂಗಿಯನ್ನು ಸಹ ಹಾಳು ಮಾಡುತ್ತದೆ. ನಿಮ್ಮ ಈ ಅಭ್ಯಾಸವು ದೀರ್ಘಾವಧಿಯಲ್ಲಿ ಬೆನ್ನು ನೋವಿಗೂ ಕಾರಣವಾಗಬಹುದು.
ಇದನ್ನೂ ಓದಿ- ಉಪ್ಪು ತಿಂದರೆ ನೀರು ಕುಡಿಯಲೇ ಬೇಕು..ಅತಿಯಾದರೇ ಈ ಸಮಸ್ಯೆಗಳನ್ನು ಎದುರಿಸಲೇಬೇಕು..!
ನರಗಳ ಪಾರ್ಶ್ವವಾಯು ಅಪಾಯ:
ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸವು ಪಾದದ ನರಗಳನ್ನು ಹಾನಿಗೊಳಿಸುತ್ತದೆ. ಯಾವಾಗಲೂ ಈ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ವ್ಯಕ್ತಿಯುು ಪೆರೋನಿಯಲ್ ನರ ಪಾರ್ಶ್ವವಾಯುವಿಗೆ ಬಲಿಯಾಗಬಹುದು.
ಕುತ್ತಿಗೆ ನೋವು:
ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರಿಂದ ಅದು ಸೊಂಟದ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತದೆ. ಇದರಿಂದಾಗಿ ಬೆನ್ನಿನ ಕೆಳಗಿನ ಮತ್ತು ಮಧ್ಯಭಾಗದಲ್ಲಿ ಮಾತ್ರವಲ್ಲದೆ, ಕುತ್ತಿಗೆಯಲ್ಲೂ ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ, ನಿಮಗೂ ಈ ಅಭ್ಯಾಸವಿದ್ದರೆ ಇಂದಿನಿಂದಲೇ ಈ ಅಭ್ಯಾಸವನ್ನು ಬಿಡಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.