ಯಾರು ಎಷ್ಟು ಗಂಟೆ ನಿದ್ರೆ ಮಾಡಬೇಕು ಅಂತಾ ಗೊತ್ತಾ!
ನಿದ್ರೆ ನಮ್ಮ ದೇಹಕ್ಕೆ ಅತ್ಯವಶ್ಯಕ. ನೀವು ಎಷ್ಟು ಗಂಟೆಗಳ ಕಾಲ ನಿದ್ರೆ ಮಾಡುತ್ತಿದ್ದೀರಿ, ನೀವು ಹೇಗೆ ನಿದ್ರಿಸುತ್ತಿರುವಿರಿ ಎಂದು ತಿಳಿದುಕೊಳ್ಳುವುದು ಮುಖ್ಯ. ಏಕೆಂದರೆ ನಿಮ್ಮ ಕಾರ್ಯಕ್ಷಮತೆಯ ಮೇಲೆ ಇದು ತನ್ನ ಪ್ರಭಾವವನ್ನುಂಟು ಮಾಡುತ್ತದೆ.
ನಿದ್ರೆ ನಮ್ಮ ದೇಹಕ್ಕೆ ಅತ್ಯವಶ್ಯಕ. ನೀವು ಎಷ್ಟು ಗಂಟೆಗಳ ಕಾಲ ನಿದ್ರೆ ಮಾಡುತ್ತಿದ್ದೀರಿ, ನೀವು ಹೇಗೆ ನಿದ್ರಿಸುತ್ತಿರುವಿರಿ ಎಂದು ತಿಳಿದುಕೊಳ್ಳುವುದು ಮುಖ್ಯ. ಏಕೆಂದರೆ ನಿಮ್ಮ ಕಾರ್ಯಕ್ಷಮತೆಯ ಮೇಲೆ ಇದು ತನ್ನ ಪ್ರಭಾವವನ್ನುಂಟು ಮಾಡುತ್ತದೆ. ನಮ್ಮ ದೇಹವು ವಯಸ್ಸಿನ ಪ್ರಕಾರ ವಿವಿಧ ಗಂಟೆಗಳ ಕಾಲ ನಿದ್ರೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ, ಇದು ದೇಹದ ಮೇಲೆ ಅಡ್ಡಪರಿಣಾಮ ಉಂಟುಮಾಡುತ್ತದೆ.
* ನವಜಾತ ಶಿಶುಗಳು ಅಂದರೆ 3-11 ತಿಂಗಳ ಮಗುವಿಗೆ ಕನಿಷ್ಠ 14-15 ಗಂಟೆಗಳ ನಿದ್ರೆ ಅತ್ಯಗತ್ಯ.
* 12-35 ತಿಂಗಳ ಮಕ್ಕಳು: 12-14 ಗಂಟೆಗಳ ನಿದ್ರೆ ಮಾಡಬೇಕು.
* 3-6 ವರ್ಷ ವಯಸ್ಸಿನ ಮಕ್ಕಳಿಗೆ 11-13 ಗಂಟೆಗಳ ನಿದ್ರೆ ಅತ್ಯಗತ್ಯ.
* 6-10 ವರ್ಷಗಳ ಮಕ್ಕಳಿಗೆ 10-11 ಗಂಟೆಗಳ ನಿದ್ರೆ ಅತ್ಯಗತ್ಯ.
* 11-18 ವರ್ಷ ವಯೋಮಾನದವರು ಕನಿಷ್ಠ 9.30 ಗಂಟೆಗಳ ನಿದ್ರೆ ಅತ್ಯವಶ್ಯಕ.
* ವಯಸ್ಕರಲ್ಲಿ ಸರಾಸರಿ 8 ಗಂಟೆಗಳ ನಿದ್ರೆ ಅತ್ಯಗತ್ಯ.
* ಹಿರಿಯರು 8 ಗಂಟೆಗಳು ನಿದ್ರೆ ಮಾಡುವುದು ಅಗತ್ಯ.